ವಿಟ್ಲ: ಪರಸ್ಪರ ಬಸ್ಸು ಡಿಕ್ಕಿ ಹೊಡೆಸಿದ ಪ್ರಕರಣ – ಚಾಲಕ ಮಾಲಕರಿಗೆ ದಂಡ

0

ವಿಟ್ಲ : ಸಾಲೆತ್ತೂರು ಮಾರ್ಗವಾಗಿ ಮಂಗಳೂರಿಗೆ ಸಂಚರಿಸುವ ಬಸ್ಸುಗಳ ನಡುವೆ ಪೈಪೋಟಿ ನಡೆಯುವುದಲ್ಲದೆ ಮಾ.11ರಂದು ಮೂರ್ಕಜೆ ಎಂಬಲ್ಲಿ ಬಸ್ಸು ಚಾಲಕನೋರ್ವ ಪ್ರಯಾಣಿಕರಿದ್ದ ಇನ್ನೊಂದು ಬಸ್ಸಿಗೆ ಢಿಕ್ಕಿ ಹೊಡೆಸಿ, ಜನರ ಜೀವಕ್ಕೆ ಹಾನಿ ಉಂಟುಮಾಡಿರುವ ಪ್ರಕರಣಕ್ಕೆ ಸಂಬಂದಿಸಿದಂತೆ ಜಿಲ್ಲಾ ಸಾರಿಗೆ ಇಲಾಖೆ ಅಧಿಕಾರಿಗಳು ರೋಡ್ ಟ್ರಾನ್ಸ್ ಪೋರ್ಟ್ ಅಥಾರಿಟಿ ಅಽಕಾರಿಗಳಿಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಲು ಹಾಗೂ ದಂಡ ವಿಽಸುವಂತೆ ಸೂಚಿಸಿರುವುದಾಗಿ ತಿಳಿದುಬಂದಿದೆ.

ಬೆಂಗಳೂರು ರಸ್ತೆ ಸಾರಿಗೆ ನಿಗಮದಿಂದ ವಿಟ್ಲದ ಈ ಬಸ್‌ಗಳು ಪರ್ಮಿಟ್ ಪಡೆದಿವೆ. ಆದ್ದರಿಂದ ಪರ್ಮಿಟ್ ರದ್ದತಿ ಬಗ್ಗೆ ಕ್ರಮಕೈಗೊಳ್ಳಲಾಗದು. ರಸ್ತೆ ಸಾರಿಗೆ ನಿಗಮಕ್ಕೆ ಕ್ರಮಕೈಗೊಳ್ಳಬೇಕೆಂದು ಪತ್ರ ಬರೆಯಲಾಗಿದೆ. ಸಮಯದ ವಿವಾದ ಸೃಷ್ಟಿಸಿ, ಬಸ್‌ಗಳೆರಡು ಢಿಕ್ಕಿ ಹೊಡೆಸಿಕೊಂಡ ಪ್ರಕರಣದ ವಿರುದ್ಧ ಮಾಲಕರಿಗೆ ಹಾಗೂ ಚಾಲಕರಿಗೆ ದಂಡ ವಿಽಸಲಾಗುವುದು. ಪೊಲೀಸರು ನ್ಯಾಯಾಲಯದಲ್ಲಿ ದಾಖಲೆ ಹಾಜರುಪಡಿಸಿ, ದಂಡ ವಿಽಸಿದ ಬಳಿಕ ಕಾನೂನಾತ್ಮಕವಾಗಿ ಬಸ್ಸುಗಳನ್ನು ಬಿಡುಗಡೆಗೊಳಿಸಬಹುದು ಎಂದು ಮಂಗಳೂರಿನ ಉಪಸಾರಿಗೆ ಆಯುಕ್ತರಾದ ರಮೇಶ್ ವರ್ಣೇಕರ್ ರವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here