ನೆಟ್ಟಾರು ನಿವಾಸಿ ನಾಪತ್ತೆ: ದೂರು

0

ಪುತ್ತೂರು:ಬೆಳ್ಳಾರೆ ಗ್ರಾಮದ ನೆಟ್ಟಾರು ನಿವಾಸಿ ರಾಜಪ್ಪ(65ವ.)ಎಂಬವರು ಮಾ.6ರಿಂದ ಕಾಣೆಯಾಗಿರುವ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ನಡೆದು 9 ದಿನಗಳ ನಂತರ ರಾಜಪ್ಪರವರ ಅಳಿಯ ಜನಾರ್ದನರವರು ಠಾಣೆಗೆ ದೂರು ನೀಡಿದ್ದಾರೆ.

ನನ್ನ ಪತ್ನಿ ಅನುರಾಧ ಹಾಗೂ ಆಕೆಯ ತಂದೆ ರಾಜಪ್ಪರವರು ಸುಮಾರು ೭-೮ ವರ್ಷಗಳಿಂದ ನೆಟ್ಟಾರಿನಲ್ಲಿ ಒಂದೇ ಮನೆಯಲ್ಲಿ ವಾಸವಾಗಿದ್ದರು.ಪಾರ್ಶ್ವವಾಯು ಪೀಡಿತರಾಗಿದ್ದ ರಾಜಪ್ಪರವರು ಹೊರಗಡೆ ಹೋಗದೆ ಮನೆಯಲ್ಲಿಯೇ ಇರುತ್ತಿದ್ದರು.ಮಾ.೬ರಂದು ನಾನು ಪತ್ನಿ ಮತ್ತು ಮಕ್ಕಳೊಂದಿಗೆ ಗೇರುಕಟ್ಟೆಯಲ್ಲಿರುವ ಬಾವನ ಮಗನ ನಾಮಕರಣಕ್ಕೆ ರಾಜಪ್ಪರವರನ್ನು ಒಬ್ಬರನ್ನೇ ಮನೆಯಲ್ಲಿ ಬಿಟ್ಟು ಹೋಗಿದ್ದು ರಾತ್ರಿ ಪುನಃಮನೆಗೆ ಬಂದಾಗ ರಾಜಪ್ಪರವರು ಮನೆಯಲ್ಲಿರಲಿಲ್ಲ ಎಂದು ಅಳಿಯ ರಾಜಪ್ಪ ಅವರು ನೀಡಿರುವ ದೂರಿನ ಮೇರೆಗೆ ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here