ರೋಟರಿ ಯುವ, ಸ್ವರ್ಣ, ಎಲೈಟ್, ಸೆಂಟ್ರಲ್‌ನಲ್ಲಿ ಡಾ.ಯು.ಪಿ.ಶಿವಾನಂದ ಅವರಿಂದ ಸಂವಾದ

0

  • ಲಂಚ, ಭ್ರಷ್ಟಾಚಾರ ನಿಲ್ಲಿಸಿದರೆ ಆಡಳಿತ ಸೌಧದ ಎದುರು ನಿಮ್ಮ ಕಾಲಿಗೆ ಅಡ್ಡ ಬಿದ್ದು ನಮಸ್ಕಾರ ಮಾಡುವೆವು !
  • ಇದು ಚಾಲೆಂಜ್ ಆಗಿದ್ದರೂ ಸೋಲಲು ಬಯಸುತ್ತೇವೆ-ರೋ|ಉಮೇಶ್ ನಾಯಕ್

 

ರೋಟರಿ ಕ್ಲಬ್ ಪುತ್ತೂರು ಯುವ, ಎಲೈಟ್, ಸೆಂಟ್ರಲ್, ಸ್ವರ್ಣದ ಸದಸ್ಯರಿಂದ ಲಂಚ, ಭ್ರಷ್ಟಾಚಾರದ ವಿರುದ್ಧ ಘೋಷಣೆ

ಪುತ್ತೂರು: ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ. ಯು.ಪಿ.ಶಿವಾನಂದ ಅವರು ನೀಡಿದ ಚಾಲೆಂಜ್‌ನಂತೆ ಮುಂದಿನ 70 ದಿನದೊಳಗೆ ಲಂಚ ಭ್ರಷ್ಟಾಚಾರ ನಿಲ್ಲಿಸಿದರೆ ನಾವು ಅವರ ಕಾಲಿಗೆ ನಮಸಾರ ಮಾಡುತ್ತೇವೆ. ಇದು ನಮ್ಮ ಚಾಲೆಂಜ್ ಆಗಿದ್ದರೂ ಅವರ ಉತ್ತಮ ವಿಚಾರಕ್ಕೆ ನಾವೇ ಸೋಲಬೇಕೆಂಬ ಆಶಯವನ್ನು ರೋಟರಿ ನಾಲ್ಕು ಸಂಸ್ಥೆಗಳ ಸದಸ್ಯರು ಆಶಯ ವ್ಯಕ್ತಪಡಿಸಿದ ಘಟನೆ ಲಂಚ ಮತ್ತು ಭ್ರಷ್ಟಾಚಾರದ ವಿರುದ್ಧ ಆಂದೋಲನದ ಸಂವಾದ ಕಾರ್ಯಕ್ರಮದಲ್ಲಿ ನಡೆದಿದೆ. ಇದೇ ಸಂದರ್ಭದಲ್ಲಿ ಸೇರಿದ ಎಲ್ಲಾ ರೋಟರಿ ಸದಸ್ಯರು ಲಂಚ, ಭ್ರಷ್ಟಾಚಾರ ವಿರುದ್ಧದ ಫಲಕವನ್ನು ಹಿಡಿದು ಘೋಷಣೆ ಕೂಗಿದರು.

 

ಪುತ್ತೂರು ರೋಟರಿ ಮನೀಷಾ ಸಭಾಂಗಣದಲ್ಲಿ ಮಾ.16ರಂದು ರೋಟರಿ ಯುವ, ರೋಟರಿ ಸ್ವರ್ಣ, ರೋಟರಿ ಎಲೈಟ್ ಮತ್ತು ರೋಟರಿ ಸೆಂಟ್ರಲ್ ವತಿಯಿಂದ ನಡೆದ ಲಂಚ, ಭ್ರಷ್ಟಾಚಾರ ವಿಚಾರವಾಗಿ ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ. ಯು.ಪಿ ಶಿವಾನಂದ ಅವರೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು. ಆರಂಭದಲ್ಲಿ ಡಾ. ಯು.ಪಿ.ಶಿವಾನಂದ ಅವರು ಲಂಚ ಭ್ರಷ್ಟಾಚಾರದ ವಿಚಾರವಾಗಿ ಅರಿವು, ಜಾಗೃತಿ ಆಂದೋಲನದ ಕುರಿತು ಮಾತನಾಡಿದರು. ಬಳಿಕ ಸಂವಾದ ಕಾರ್ಯಕ್ರಮದಲ್ಲಿ ರೋಟರಿ ವಲಯ ಸೇನಾನಿ ಉಮೇಶ್ ನಾಯಕ್ ಅವರು ಮಾತನಾಡಿ ಡಾ.ಯು.ಪಿ.ಶಿವಾನಂದ ಅವರು ಭ್ರಷ್ಟಾಚಾರ ಎಂಬ ವೈರಸ್ ಬಿಟ್ಟಿದ್ದಾರೆ. ಅವರು ನೀಡಿದ 70 ದಿನದೊಳಗೆ ಭ್ರಷ್ಟಾಚಾರ ನಿಲ್ಲಿಸುವ ಚಾಲೆಂಜ್‌ಗೆ ನಾನೂ ಕೂಡಾ ಚಾಲೆಂಜ್ ಸ್ವೀಕರಿಸಿ 70 ದಿನದೊಳಗೆ ಭ್ರಷ್ಟಾಚಾರ ನಿಲ್ಲಿಸಿದರೆ ನಾನು ಪುತ್ತೂರು ತಾಲೂಕು ಆಡಳಿತ ಕಟ್ಟಡದ ಎದುರು ಅವರನ್ನು ನಿಲ್ಲಿಸಿ ಅವರ ಕಾಲಿಗೆ ಅಡ್ಡ ಬೀದ್ದು ಗೌರವಿಸುತ್ತೇನೆ ಎಂದ ಅವರು ಭ್ರಷ್ಟಾಚಾರ ಆಂದೋಲನ ಉತ್ತಮ ವಿಚಾರ. ಆದರೆ ಅದರ ಮೂಲ ಯಾವುದು ಎಂಬುದನ್ನು ಕಂಡು ಹಿಡಿಯಬೇಕು. ಲಂಚದ ಹಣ ತೆಗೆದು ಕೊಳ್ಳುವವರು ಯಾವುದೋ ಒಂದು ರೀತಿಯಲ್ಲಿ ಹಣ ತೆಗೆದು ಕೊಳ್ಳುತ್ತಾ ಇದ್ದಾರೆ. ಈ ನಿಟ್ಟಿನಲ್ಲಿ ಸರಕಾರಿ ಕಚೇರಿ ಮುಂದೆ ನಿಂತು ಸಾರ್ವಜನಿಕರು ಹೊರಗೆ ಬರುವ ಸಂದರ್ಭ ಅವರ ಅಭಿಪ್ರಾಯ ಪಡೆಯಬೇಕು. ಇಂತಹ ಆಂದೋಲನವನ್ನು ಡಾ. ಯು.ಪಿ.ಶಿವಾನಂದ ಅವರು ಮಾಡಬೇಕು ಎಂದರು. ಇದಲ್ಲದೆ ನಾನೇನು ಚಾಲೆಂಜ್ ಸ್ವೀಕರಿಸಿದ್ದೇನೋ ಅದು ಡಾ. ಯು.ಪಿ.ಶಿವಾನಂದರ ಉತ್ತಮ ವಿಚಾರದ ಮುಂದೆ ಸೋಲಬೇಕು. ನಾನು ಸೋಲುವಂತಾಗಲಿ ಎಂದು ಆಶಯ ವ್ಯಕ್ತಪಡಿಸಿದರು. ರೋಟರಿ ಕ್ಲಬ್ ಪುತ್ತೂರು ಯುವದ ಅಧ್ಯಕ್ಷ ಭರತ್ ಪೈ, ರೋಟರಿ ಸ್ವರ್ಣದ ಅಧ್ಯಕ್ಷ ನ್ಯಾಯವಾದಿ ಭಾಸ್ಕರ್ ಕೋಡಿಂಬಾಳ, ರೋಟರಿ ಸದಸ್ಯ ಡಾ| ರಾಜೇಶ್ ಬೆಜ್ಜಂಗಳ, ರೋಟರಿ ಸ್ವರ್ಣದ ಸದಸ್ಯ ನ್ಯಾಯವಾದಿ ಮಹಾಬಲ ಗೌಡ ಸೇರಿದಂತೆ ಉತ್ತಮ ವಿಚಾರದ ಮುಂದೆ ನಾವು ಕೂಡಾ ಡಾ.ಶಿವಾನಂದ ಅವರ ಕಾಲಿಗೆ ಅಡ್ಡಬೀಳಲು ಸಿದ್ದರಿದ್ದೇವೆ ಎಂದು ಧ್ವನಿಗೂಡಿಸಿದರು.

ಲಂಚ, ಭ್ರಷ್ಟಾಚಾರದ ವಿರುದ್ಧ ಜನಾಂದೋಲನ ಆದಾಗ ಯಶಸ್ವಿ:ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ.ಯು.ಪಿ.ಶಿವಾನಂದ ಅವರು ಮಾತನಾಡಿ ಲಂಚ ಮತ್ತು ಭ್ರಷ್ಟಾಚಾರದ ವಿರುದ್ಧದ ಆಂದೋಲನ ಸುದ್ದಿಯ ಆಂದೋಲನ, ಡಾ.ಯು.ಪಿ.ಶಿವಾನಂದರ ಆಂದೋಲನ ಅಲ್ಲ. ಇದು ಜನಾಂದೋಲನ ಆಗಬೇಕು. ಆಗ ಅದು ಯಶಸ್ವಿಯಾಗುತ್ತದೆ. ಭ್ರಷ್ಟಾಚಾರ ವಿರುದ್ಧದ ಹೋರಾಟ ಮಾಡಿದರೂ ಅದು ಆಗದ ಕೆಲಸ ಎನ್ನುವವರು ಜಾಸ್ತಿ. ಆದರೆ ಹಿಂದೊಮ್ಮೆ ಭ್ರಷ್ಟಾಚಾರಿಯನ್ನು ಗುರುತಿಸುವ ಹೋರಾಟ ಮಾಡಿದ್ದೆವು. ಈ ಭಾರಿ ಉತ್ತಮ ಸೇವೆಗೆ ಪುರಸ್ಕಾರ ಎಂಬ ಆಂದೋಲನ ಮಾಡುತ್ತಿದ್ದೇವೆ. ರೋಟರಿ ಸಂಸ್ಥೆಯ ಸದಸ್ಯರು ಕೂಡಾ ತಮ್ಮ ಹೆಚ್ಚಿನ ಸಮಯವನ್ನು ಸೇವೆಗೆ ಮೀಸಲಿಡುತ್ತಾರೆ. ಅದೇ ರೀತಿ ಲಂಚ ಮತ್ತು ಭ್ರಷ್ಟಾಚಾರ ಮುಕ್ತ ಆಂದೋಲನ ಮಾಡಿದರೆ ಇದು ಅತೀ ದೊಡ್ಡ ದೇಶ ಸೇವೆ ಆಗುತ್ತದೆ. ನಾವು ಪ್ರಜಾಪ್ರಭುತ್ವದಲ್ಲಿ ನಮ್ಮ ಆಡಳಿತ, ನಮ್ಮ ಗ್ರಾಮ ಎಂದು ಹೇಳಿಕೊಳ್ಳುವುದಾದರೆ ಇದರ ಹೊಣೆಗಾರಿಕೆ ನಮ್ಮದಾಗಿದ್ದು, ಆಂದೋಲನ ಇಲ್ಲಿಂದಲೇ ಆರಂಭವಾಗಬೇಕೆಂದರು. ನಾನು ಹೋರಾಟ ಆರಂಭ ಮಾಡಿದಾಗ ನೂರು ದಿವಸದಲ್ಲಿ ಲಂಚ ಭ್ರಷ್ಟಾಚಾರ ನಿಲ್ಲಿಸುತ್ತೇನೆಂದು ಚಾಲೆಂಜ್ ಹಾಕಿದ್ದೆ. ಇನ್ನು ೭೦ ದಿನ ಬಾಕಿ ಇದೆ. ಅಷ್ಟು ದಿನದೊಳಗೆ ಪುತ್ತೂರು ಮತ್ತು ಸುಳ್ಯದಲ್ಲಿ ಲಂಚ ಕೊಟ್ಟರೂ ಯಾರು ಕೂಡಾ ತೆಗೆದು ಕೊಳ್ಳುವುದಿಲ್ಲ ಎಂದರಲ್ಲದೆ ಲಂಚ ಪಡೆದು ಕೊಳ್ಳುವವರ ಮನಸ್ಸು ಪರಿವರ್ತನೆ ಆಗುತ್ತದೆ ಅವರು ಪ್ರಾಮಾಣಿಕ ಅಽಕಾರಿಯಾಗುತ್ತಾರೆ ಎಂದರು. ಈ ಆಂದೋಲನ ಯಾರ ವಿರುದ್ಧವೂ ಅಲ್ಲ, ಜನಪ್ರತಿನಿಽ, ಸರಕಾರ, ಸರಕಾರಿಯ ವಿರುದ್ಧವೂ ಅಲ್ಲ. ಇದು ಜನರ ಕಡೆ ಇರುವ ಆಂದೋಲನ ಎಂದರು. ಇವತ್ತು ಈ ಆಂದೋಲನದಿಂದಾಗಿ ತುಂಬಾ ಕಡೆಯಲ್ಲಿ ಬದಲಾವಣೆ ಬಂದಿದೆ. ಅಽಕಾರಿಗಳು ಜನರೊಂದಿಗೆ ಮಾತನಾಡಲು ಆರಂಭಿಸಿದ್ದಾರೆ. ಈ ಆಂದೋಲನದ ಕುರಿತು ದೆಹಲಿಯಲ್ಲಿ ದ.ಕ.ದವರ ಸಭೆ ಕರೆದು ದಕ್ಷಿಣ ಕನ್ನಡ ಜಿಲ್ಲೆ ಲಂಚ ಮತ್ತು ಭ್ರಷ್ಟಾಚಾರ ಮುಕ್ತ ಆಗುತ್ತದೆ ಎಂದು ತಿಳಿಸಲಿದ್ದೇವೆ ಎಂದು ಹೇಳಿ ರೋಟರಿ ಸದಸ್ಯರೊಂದಿಗೆ ಸಂವಾದ ಆರಂಭಿಸಿದರು.

ಲಂಚ, ಭ್ರಷ್ಟಾಚಾರ ಆಂದೋಲನದಲ್ಲಿ ಡಾ.ಯು.ಪಿ.ಶಿವಾನಂದರು ಗೆಲ್ಲಬೇಕು: ರೋಟರಿ ಕ್ಲಬ್ ಪುತ್ತೂರು ಯುವ ಅಧ್ಯಕ್ಷ ಭರತ್ ಪೈ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಡಾ.ಯು.ಪಿ.ಶಿವಾನಂದರ ಅವರು ೭೦ ದಿನದೊಳಗೆ ಲಂಚ ಮತ್ತು ಭ್ರಷ್ಟಾಚಾರ ನಿಲ್ಲಿಸುತ್ತೇನೆಂಬ ಒಪನ್ ಚಾಲೆಂಜ್ ಹಾಕಿದ್ದಾರೆ. ಅವರ ಚಾಲೆಂಜ್ ಏನೆ ಇರಲಿ ೭೦ ದಿನ ಮಾತ್ರವಲ್ಲ ೭೦ ವಾರ ಆದರೂ ತೊಂದರೆ ಇಲ್ಲ. ಲಂಚ, ಭ್ರಷ್ಟಾಚಾರದ ವಿರುದ್ಧದ ಆಂದೋಲನದಲ್ಲಿ ಡಾ.ಯು.ಪಿ.ಶಿವಾನಂದ ಅವರೇ ಗೆಲ್ಲಬೇಕು. ನಿಮ್ಮ ಗೆಲುವು ಮತ್ತು ಸಮಾಜದ ಗೆಲುವು ಒಂದೆ ಎಂದು ಹೇಳಿದ ಅವರು ರೋಟರಿಯಿಂದ ಪೂರ್ಣ ಬೆಂಬಲ ವ್ಯಕ್ತಪಡಿಸಿದರು.

ಸಮಾಜಕ್ಕೆ ಏನು ಕೊಡಬಹುದುದೆಂಬುದಕ್ಕೆ ಉತ್ತರ: ರೋಟರಿ ಕ್ಲಬ್ ಎಲೈಟ್‌ನ ಅಧ್ಯಕ್ಷ ಮನ್ಸೂರ್ ಅವರು ಮುಖ್ಯ ಅತಿಥಿಗಳ ಪರಿಚಯ ಮಾಡಿ ಮಾತನಾಡಿ ನಾನು ನನ್ನಿಂದ ಸಮಾಜಕ್ಕೆ ಏನು ಕೊಡಬಹುದು ಎಂಬುದಕ್ಕೆ ಲಂಚ ಮತ್ತು ಭ್ರಷ್ಟಾಚಾರದ ವಿರುದ್ಧದ ಹೋರಾಟವೇ ಉದಾಹರಣೆ. ಭ್ರಷ್ಟಾಚಾರ ವಿರುದ್ಧದ ಆಂದೋಲನವೇ ದೇಶ ಸೇವೆ ಎಂದರು.

ಆಂದೋಲನದಿಂದಾಗಿ ಪೀಡಿಸುವವರು ಕಡಿಮೆಯಾಗಿದ್ದಾರೆ: ರೋಟರಿ ಸ್ವರ್ಣದ ಅಧ್ಯಕ್ಷ ಭಾಸ್ಕರ್ ಕೋಡಿಂಬಾಳ ಅವರು ಮಾತನಾಡಿ ಇವತ್ತು ಸಮಾಜದಲ್ಲಿ ಹಣಕ್ಕೆ ಬೆಲೆ, ಗುಣಕ್ಕೆ ಬೆಲೆ ಇಲ್ಲದಂತಾಗಿದೆ. ಇಂತಹ ಸಂದರ್ಭದಲ್ಲಿ ಡಾ.ಯು.ಪಿ.ಶಿವಾನಂದ ಅವರ ಆಂದೋಲನದಿಂದ ಸಮಾಜದಲ್ಲಿ ಒಂದಷ್ಟು ಮಂದಿಗೆ ಪ್ರಯೋಜನ ಆಗಿದೆ. ಆಂದೋಲನದ ಪ್ರಭಾವದಿಂದಾಗಿ ಸರಕಾರಿ ಕಚೇರಿಗಳಲ್ಲಿ ಇವತ್ತು ಸಾರ್ವಜನಿಕರನ್ನು ಪೀಡಿಸುವುದು ಕಡಿಮೆ ಆಗಿದೆ ಎಂದ ಅವರು ನಿಮ್ಮ ಆಂದೋಲನಕ್ಕೆ ನಾವೆಲ್ಲ ಕೈ ಜೋಡಿಸುತ್ತೇವೆ ಎಂದರು.

ಲೋಕಾಯುಕ್ತ ದಾಳಿ ಮಾತ್ರವಲ್ಲ ಅಧಿಕಾರಿಯ ಶಿಕ್ಷೆಯನ್ನೂ ಪ್ರಕಟಿಸಬೇಕು: ಪ್ರತಿ ಹಂತದಲ್ಲೂ ಪತ್ರಿಕಾ ಮಾದ್ಯಮದಲ್ಲಿ ಲೋಕಾಯುಕ್ತ ಅಽಕಾರಿಗಳು ದಾಳಿ ನಡೆಸಿದ ವಿಷಯ ಬರುತ್ತದೆ. ಬಳಿಕ ದಾಳಿಯಿಂದಾಗಿ ಅಽಕಾರಿಗೆ ಯಾವ ಶಿಕ್ಷೆ ಆಗಿದೆ ಎಂಬ ಕುರಿತು ಮಾಹಿತಿ ಇರುವುದಿಲ್ಲ. ಅಽಕಾರಿಯ ಶಿಕ್ಷೆಯ ಕುರಿತು ಕೂಡಾ ಮಾಹಿತಿ ಬಂದಾಗ ಅಽಕಾರಿಗಳಿಗೆ ಭಯ ಮತ್ತು ಜನರಿಗೂ ಅನ್ಯಾಯದ ವಿರುದ್ಧ ಹೋರಾಟಕ್ಕೆ ಧೈರ್ಯ ಬರುತ್ತದೆ ಎಂದು ರೋಟರಿ ಪುತ್ತೂರು ಸೆಂಟ್ರಲ್‌ನ ಅಶೋಕ್ ಅವರು ಅಭಿಪ್ರಾಯ ಮಂಡಿಸಿದರು.

ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಂತೆ: ರೋಟರಿ ಸ್ವರ್ಣದ ಸದಸ್ಯ ನ್ಯಾಯವಾದಿ ಮಹಾಬಲ ಗೌಡ ಅವರು ಮಾತನಾಡಿ ಡಾ.ಯು.ಪಿ.ಶಿವಾನಂದ ಆಂದೋಲನ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಂತೆ. ಲಂಚ ಭ್ರಷ್ಟಾಚಾರ ಪೂರ್ತಿ ನಿಲ್ಲಲು ನೂರು ವರ್ಷ ಬೇಕಾಗಬಹುದು. ಪುತ್ತೂರಿನ ಉತ್ತಮ ಅಽಕಾರಿಯೆಂದು ಜನಮತದ ಮೂಲಕ ಆಯ್ಕೆಯಾದ ನೋಂದಣಿ ಕಚೇರಿಯ ಅಧಿಕಾರಿಯೇ ಲಂಚ ಕೇಳಿದ್ದಾರೆ. ಆದರೆ ನಾನು ಕೊಟ್ಟಿಲ್ಲ ಎಂದರು. ಡಾ.ಯು.ಪಿ.ಶಿವಾನಂದ ಅವರು ಮಾತನಾಡಿ ಇಂತಹ ವಿರೋಧವನ್ನು ಎಲ್ಲಾ ಜನರು ಮಾಡಿದಾಗ ಲಂಚ , ಭ್ರಷ್ಟಾಚಾರ ನಿಂತೆ ನಿಲ್ಲುತ್ತದೆ. ಜನಮೆಚ್ಚಿದ ಅಽಕಾರಿಯಾಗಿ ಆಯ್ಕೆಯನ್ನು ನಾವು ಮಾಡಿದಲ್ಲ. ಜನರೇ ಆಯ್ಕೆ ಮಾಡಿದ್ದು, ಇದೀಗ ಜನರೇ ಅವರನ್ನು ಪ್ರಶ್ನಿಸಬೇಕೆಂದರು.

ಆಂದೋಲನವನ್ನು ಸಕಾರಾತ್ಮಕವಾಗಿ ತೆಗೆದು ಕೊಳ್ಳಬೇಕು: ರೋಟರಿ ಸದಸ್ಯ ಡಾ| ರಾಜೇಶ್ ಬೆಜ್ಜಂಗಳ ಅವರು ಮಾತನಾಡಿ ಎಲ್ಲಾ ಹಂತದಲ್ಲೂ ಲಂಚ ಮತ್ತು ಭ್ರಷ್ಟಾಚಾರ ವಿರುದ್ಧದ ಆಂದೋಲನವನ್ನು ನಾವು ಸಕಾರಾತ್ಮಕವಾಗಿ ತೆಗೆದು ಕೊಂಡಾಗ ಆಂದೋಲನ ಯಶಸ್ವಿಯಾಗುತ್ತದೆ ಎಂದರು.

ಭ್ರಷ್ಟಾಚಾರದ ಮೂಲ ನಾವೆ: ರೋಟರಿ ಸ್ವರ್ಣದ ಸದಸ್ಯ ಚಂದ್ರಶೇಖರ್ ಅವರು ಮಾತನಾಡಿ ಭ್ರಷ್ಟಾಚಾರದ ಮೂಲ ನಾವೆ. ಇದೀಗ ಲಂಚ, ಭ್ರಷ್ಟಾಚಾರದ ಅಲೆ ದೊಡ್ಡದಿದೆ ಎಂದರು. ಉತ್ತರಿಸಿದ ಡಾ.ಯು.ಪಿ.ಶಿವಾನಂದ ಅವರು ಒಂದು ಗ್ರಾಮದಲ್ಲಿ ಒಂದು ಸಾವಿರ ಮಂದಿ ಇದ್ದರೆ ಅಲ್ಲಿ ಇರುವ ಬೆರೆಳೆಣಿಕೆಯ ಅಽಕಾರಿಗಳ ಮುಂದೆ ನಮ್ಮ ಸಂಖ್ಯೆ ದೊಡ್ಡದು. ಆದರೆ ನಾವು ಗುಲಾಮಗಿರಿಯಿಂದ ಹೊರಬರಬೇಕು ಎಂದರು.

ರೋಟರಿ ವಲಯ ಸೇನಾನಿ ಉಮೇಶ್ ನಾಯಕ್, ರೋಟರಿ ಸದಸ್ಯರಾದ ಡಾ| ಪೀಟರ್ ವಿಲ್ಸನ್ ಪ್ರಭಾಕರ್, ರೋಟರಿ ಕ್ಲಬ್ ಪುತ್ತೂರು ಯುವದ ಪೂರ್ವಾಧ್ಯಕ್ಷ ಡಾ| ಹರ್ಷ ಕುಮಾರ್ ರೈರವರಿಗೆ ಸನ್ಮಾನ

ಸನ್ಮಾನ: ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಘಟಕದ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡಿರುವ ರೋಟರಿ ವಲಯ ಸೇನಾನಿ ಉಮೇಶ್ ನಾಯಕ್, ಕಾರ್ಯದರ್ಶಿಯಾಗಿ ಆಯ್ಕೆಗೊಂಡಿರುವ ರೋಟರಿ ಸದಸ್ಯರಾದ ಡಾ| ಪೀಟರ್ ವಿಲ್ಸನ್ ಪ್ರಭಾಕರ್, ಖಾಜಾಂಚಿಯಾಗಿ ಆಯ್ಕೆಗೊಂಡ ರೋಟರಿ ಕ್ಲಬ್ ಪುತ್ತೂರು ಯುವದ ಪೂರ್ವಾಧ್ಯಕ್ಷ ಡಾ| ಹರ್ಷ ಕುಮಾರ್ ರೈ ಮಾಡಾವು ಅವರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ನ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಯ್ಕೆಗೊಂಡ ಕುಸುಮರಾಜ್ ಅವರನ್ನು ಗುರುತಿಸಲಾಯಿತು. ರೋಟರಿ ಎಲೈಟ್ ಸಂಸ್ಥೆಯ ಪತ್ರಕರ್ತ ಮೌನೇಶ್ ವಿಶ್ವಕರ್ಮ ಅವರು ಭಷ್ಟಾಚಾರ ವಿರುದ್ಧದ ಕುರಿತ ಜಾಗೃತಿ ಮೂಡಿಸುವ ಕವನ ವಾಚಿಸಿದರು.

ಮಾ.26ಕ್ಕೆ ಟೋಸ್ಟ್ ಮಾಸ್ಟರ್ ಕ್ಲಬ್ ಮಾಹಿತಿ:ಪುತ್ತೂರಿನಲ್ಲಿ ಮಾ.೨೬ಕ್ಕೆ ಮಂಗಳೂರಿನ ಟೋಸ್ಟ್ ಮಾಸ್ಟರ್ ಕ್ಲಬ್ ಆರಂಭಿಸುವ ನಿಟ್ಟಿನಲ್ಲಿ ಮಾಹಿತಿ ಕಾರ್ಯಗಾರ ದರ್ಬೆ ಪ್ರಶಾಂತ್ ಹಾಲ್‌ನಲ್ಲಿ ಸಂಜೆ ನಡೆಯಲಿದೆ ಎಂದು ಟೋಸ್ಟ್ ಮಾಸ್ಟರ್ ಕ್ಲಬ್‌ನ ಎಮ್.ಎನ್.ಪೈ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಅವರೊಂದಿಗೆ ಬೀನಾ ಶೆಟ್ಟಿ ಉಪಸ್ಥಿತರಿದ್ದರು. ರೋಟರಿ ಪುತ್ತೂರು ಯುವ ಪೂರ್ವಾಧ್ಯಕ್ಷ ಡಾ| ಹರ್ಷ ಕುಮಾರ್ ರೈ ಮಾಡಾವು ಅವರು ಅತಿಥಿಗಳನ್ನು ಪರಿಚಯಿಸಿದರು. ರೋಟರಿ ಸ್ವರ್ಣದ ಅಧ್ಯಕ್ಷ ಭಾಸ್ಕರ್ ಕೋಡಿಂಬಾಳ ಅವರು ಸದಸ್ಯ ದೇವದಾಸ್ ಅವರ ವೈವಾಹಿಕ ವರ್ಷದ ಶುಭಾಶಯ ನೀಡಿದರು. ವೇದಿಕೆಯಲ್ಲಿ ರೋಟರಿ ವಲಯ ಸೇನಾನಿ ಜಯಂತ ಶೆಟ್ಟಿ ಕಂಬಳತಡ್ಡ ಉಪಸ್ಥಿತರಿದ್ದರು. ರೋಟರಿ ಕ್ಲಬ್ ಪುತ್ತೂರು ಯುವ ಅಧ್ಯಕ್ಷ ಭರತ್ ಪೈ ಸ್ವಾಗತಿಸಿ, ರೋಟರಿ ಕ್ಲಬ್ ಸೆಂಟ್ರಲ್‌ನ ಅಧ್ಯಕ್ಷ ನವೀನ್ ನಾಕ್ ವಂದಿಸಿದರು. ಸಾರ್ಜಂಟ್ ಸೂರಜ್ ಶೆಟ್ಟಿ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

ಸುದ್ದಿ ಜನಾಂದೋಲನ ಮೂಲಕ ನಡೆಯುತ್ತಿರುವ ಲಂಚ, ಭ್ರಷ್ಟಾಚಾರ ವಿರುದ್ಧದ ಆಂದೋಲನಕ್ಕೆ ರೋಟರಿ ನಾಲ್ಕು ಸಂಸ್ಥೆಗಳು ಬೆಂಬಲ ವ್ಯಕ್ತಪಡಿಸಿ -ಲಕ ಹಿಡಿದು ಲಂಚ ಮತ್ತು ಭ್ರಷ್ಟಾಚಾರದ ವಿರುದ್ಧ ಘೋಷಣೆ ಕೂಗಿ, ಪ್ರತಿಜ್ಞೆ   ಸ್ವೀಕರಿಸಿದರು. ರೋಟರಿ ಕ್ಲಬ್ ಪುತ್ತೂರು ಯುವದ ಅಧ್ಯಕ್ಷ ಭರತ್ ಪೈ ಲಂಚ, ಭ್ರಷ್ಟಾಚಾರದ ವಿರುದ್ಧದ ಘೋಷಣೆ ಕೂಗಿದರು. ವೇದಿಕೆಯಲ್ಲಿ ಮತ್ತು ಸಭೆಯಲ್ಲಿದ್ದವರು ಧ್ವನಿಗೂಡಿಸಿದರು. ಬಳಿಕ ತಮ್ಮ ತಮ್ಮ ಮನೆ, ಸಂಸ್ಥೆಗಳಲ್ಲಿ ಭ್ರಷ್ಟಾಚಾರದ ವಿರುದ್ಧ ಜಾಗೃತಿ ಮೂಡಿಸುವ ಫಲಕ ಅಂಟಿಸುವ ನಿಟ್ಟಿನಲ್ಲಿ -ಲಕಗಳನ್ನು ಪಡೆದು ಕೊಂಡರು.

LEAVE A REPLY

Please enter your comment!
Please enter your name here