ಅಡ್ಕಾರು: ವಿಶ್ವ ಹಿಂದೂ ಪರಿಷತ್ ಭಜರಂಗದಳ ಸಹಯೋಗದಲ್ಲಿ ಹಿಂದೂ ಬಾಂಧವರ ವಾಲಿಬಾಲ್ ಪಂದ್ಯಾಟ ಹಾಗೂ ಸಾಮೂಹಿಕ ಗೋಪೂಜೆ

0

 

 

ವಿಶ್ವ ಹಿಂದೂ ಪರಿಷತ್ ಭಜರಂಗದಳ, ಶ್ರೀ ಸ್ಕಂದ ಶಾಖೆ ಅಡ್ಕಾರು, ಸುಳ್ಯ ಪ್ರಖಂಡ ಇದರ ಸಹಯೋಗದಲ್ಲಿ ಅನಾರೋಗ್ಯದಿಂದ ಬಳಲುತ್ತಿರುವವರ ಚಿಕಿತ್ಸಾ ಸಹಾಯಾರ್ಥವಾಗಿ ಆಯ್ದ 8 ತಂಡಗಳ ಹಿಂದೂ ಬಾಂಧವರ ವಾಲಿಬಾಲ್ ಪಂದ್ಯಾಟ ಹಾಗೂ ಸಾಮೂಹಿಕ ಗೋಪೂಜೆಯು ಜಾಲ್ಸೂರು ಗ್ರಾಮದ ಅಡ್ಕಾರಿನ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಮೈದಾನದಲ್ಲಿ ಅ.30ರಂದು ನಡೆಯಿತು.


ಕಾರ್ಯಕ್ರಮವನ್ನು ನಿವೃತ್ತ ಸೈನಿಕ ಹರೀಶ ಪದವು ಅವರು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಅಡ್ಕಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯ ಗೋಪಾಲ ಕಾನ ಅಡ್ಕಾರು, ವಿಶ್ವ ಹಿಂದೂ ಪರಿಷತ್ ಅಡ್ಕಾರು ಸ್ಕಂದ ಶಾಖೆ ಅಧ್ಯಕ್ಷ ಮನು ಪದವು, ಭಜರಂಗದಳದ ಸಹಸಂಯೋಜಕ ನವೀನ ಎಲೆಮಲೆ ಉಪಸ್ಥಿತರಿದ್ದರು.

ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಭಜರಂಗದಳ ದಕ್ಷಿಣ ಪ್ರಾಂತ ಸಹಸಂಯೋಜಕ ಮುರಳೀಕೃಷ್ಣ ಹಸಂತಡ್ಕ ಅವರು ದಿಕ್ಸೂಚಿ ಭಾಷಣ ಮಾಡಿದರು. ಸುಳ್ಯ ವಿಶ್ವಹಿಂದೂ ಪರಿಷತ್ ಅಧ್ಯಕ್ಷ ಸೋಮಶೇಖರ ಪೈಕ, ಭಜರಂಗದಳ ಅಡ್ಕಾರು ಸ್ಕಂದ ಶಾಖೆಯ ಸಂಯೋಜಕ ಸಂದೀಪ್ ಅಡ್ಕಾರು, ಸುಳ್ಯ ವಾಲಿಬಾಲ್ ಅಸೋಸಿಯೇಷನ್ ಉಪಾಧ್ಯಕ್ಷ ಹರಿಪ್ರಕಾಶ್ ಅಡ್ಕಾರು, ಕಡಬ ತಾಲೂಕು ವಾಲಿಬಾಲ್ ಅಸೋಸಿಯೇಷನ್ ಕಾರ್ಯದರ್ಶಿ ಮೋಹಿತ್ ಏನೆಕಲ್, ಸುಳ್ಯ ತಾಲೂಕು ವಾಲಿಬಾಲ್ ಅಸೋಸಿಯೇಷನ್ ಕಾರ್ಯದರ್ಶಿ ಜಯಪ್ರಕಾಶ್ ಕುಡೆಕಲ್ಲು, ಭಜರಂಗದಳ ಜಿಲ್ಲಾ ಸಹಸಂಯೋಜಕ ಲತೀಶ್ ಗುಂಡ್ಯ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
ಸಹಾಯಾರ್ಥವಾಗಿ ನಡೆದ ಪಂದ್ಯಾವಳಿಯಲ್ಲಿ ಒಟ್ಟು 8 ತಂಡಗಳು ಭಾಗವಹಿಸಿದ್ದು, ಹರೀಶ್ ಕಲ್ಲಡ್ಕ ಅವರ ಮಾಲಕತ್ವದ ಶ್ರೀ ಶಾಸ್ತಾವು ಪ್ರೆಂಡ್ಸ್ ಕಲ್ಲಡ್ಕ ಮಂಡೆಕೋಲು ತಂಡವು ಪ್ರಥಮ, ಸುನಿಲ್ ರೈ ಮೇನಾಲ ಮಾಲಕತ್ವದ ಶ್ರೀವಿಷ್ಣು ಮೇನಾಲ ದ್ವಿತೀಯ, ದಾಮೋದರ ಕೋಲ್ಚಾರು ಮಾಲಕತ್ವದ ಸನ್ ರೈಸ್ ತೃತೀಯ, ಶ್ರೀರಾಮ ಪ್ರೆಂಡ್ಸ್ ಪೇರಾಲು ತಂಡ ಚತುರ್ಥ ಬಹುಮಾನ ಪಡೆದುಕೊಂಡರು.

LEAVE A REPLY

Please enter your comment!
Please enter your name here