ನೆಲ್ಯಾಡಿ: ವಿದ್ಯುತ್ ಪರಿವರ್ತಕಕ್ಕೆ ಕಾರು ಡಿಕ್ಕಿ, ಚಾಲಕ ಪಾರು

0

 

ನೆಲ್ಯಾಡಿ: ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಪರಿವರ್ತಕದ ಕಂಬಕ್ಕೆ ಡಿಕ್ಕಿ ಯಾದ ಘಟನೆ ನೆಲ್ಯಾಡಿ ಪೇಟೆಯಲ್ಲಿ ಮಾ.22ರಂದು ಬೆಳಿಗ್ಗೆ ನಡೆದಿದೆ. ಬೆಂಗಳೂರಿನಿಂದ ಮಂಗಳೂರಿಗೆ ಹೋಗುತ್ತಿದ್ದ ಕಾರು ನೆಲ್ಯಾಡಿ ಪೇಟೆಯಲ್ಲಿ ಸುಬ್ರಹ್ಮಣ್ಯ ವಿಲಾಸ ಹೋಟೆಲ್ ನ ಪಕ್ಕದಲ್ಲಿದ್ದ ವಿದ್ಯುತ್ ಪರಿವರ್ತಕದ ಕಂಬಕ್ಕೆ ಡಿಕ್ಕಿಯಾಗಿದೆ. ಘಟನೆಯಲ್ಲಿ ಕಾರು ಜಖಂಗೊಂಡಿದ್ದು ಚಾಲಕ ಅಪಾಯದಿಂದ ಪಾರಾಗಿದ್ದಾರೆ. ವಿದ್ಯುತ್ ಪರಿವರ್ತಕ ದ ಕಂಬಕ್ಕೆ ಹಾನಿಯಾಗಿದೆ.

LEAVE A REPLY

Please enter your comment!
Please enter your name here