ವಿಟ್ಲ ವಾಣಿಜ್ಯ, ಕೈಗಾರಿಕಾ ಸಂಘದ ಸಭೆ

0

  • ಲಂಚ, ಭ್ರಷ್ಟಾಚಾರ ವಿರೋಧಿ ಸುದ್ದಿ ಜನಾಂದೋಲನಕ್ಕೆ ಬೆಂಬಲ

 


ವಿಟ್ಲ: ವಾಣಿಜ್ಯ ಮತ್ತು ಕೈಗಾರಿಕಾ ಸಂಘ ವಿಟ್ಲ ಇದರ ಸಭೆಯು ಅರಮನೆ ರಸ್ತೆಯಲ್ಲಿರುವ ಶ್ರೀನಿವಾಸ ಕಾಂಪ್ಲೆಕ್ಸ್‌ನ ಸಭಾಭವನದಲ್ಲಿ ನಡೆಯಿತು. ಸಭೆಯಲ್ಲಿ ವಿವಿಧ ವಿಚಾರಗಳ ಬಗ್ಗೆ ಸದಸ್ಯರುಗಳು ಸಲಹೆ ಸೂಚನೆಗಳನ್ನು ನೀಡಿದರು. ಇನ್ನೂ ಸಂಘಕ್ಕೆ ಸೇರದೆ ಬಾಕಿ ಉಳಿದಿರುವ ಅಂಗಡಿ ಮಾಲಕರುಗಳನ್ನು ಸಂಘಕ್ಕೆ ಸೇರುವಂತೆ ಮಾಡುವುದು ಹಾಗೂ ಸದಸ್ಯರಿಗೆ ಎಲ್ಲಾ ರೀತಿಯ ಭದ್ರತೆ ಯನ್ನು ಒದಗಿಸುವ ಬಗ್ಗೆ ಸಭೆಯಲ್ಲಿ ಪ್ರಸ್ತಾಪವಾಯಿತು. ಗೌರವಾಧ್ಯಕ್ಷ ಜಗನ್ನಾಥ್ ಸಾಲಿಯಾನ್, ಅಧ್ಯಕ್ಷ ಬಾಬು ಕೆ ವಿ.,ಉಪಾಧ್ಯಕ್ಷ ವಿ.ಎಸ್ ಇಬ್ರಾಹಿಂ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಲಂಚ, ಭ್ರಷ್ಟಾಚಾರದ ವಿರುದ್ಧ ನಡೆಯುತ್ತಿರುವ ಸುದ್ದಿ ಜನಾಂದೋಲನದ ಫಲಕವನ್ನು ವೇದಿಕೆಯಲ್ಲಿದ್ದ ಪದಾದಿಕಾರಿಗಳು ಪಡೆದುಕೊಂಡು ಆಂದೋಲನಕ್ಕೆ ಬೆಂಬಲ ಸೂಚಿಸಿದರು. ಕಾರ್ಯದರ್ಶಿ ಕ್ಲಿ-ರ್ಡ್ ವೇಗಸ್ ಸ್ವಾಗತಿಸಿ, ಕೋಶಾಧಿಕಾರಿ ಅಂತೋನಿ ಲೋಬೋ ವಂದಿಸಿದರು.

LEAVE A REPLY

Please enter your comment!
Please enter your name here