ಸತ್ಯ ಸಾಯಿ ಮಂದಿರದಲ್ಲಿ ಪ್ರತಿ ಗುರುವಾರದ ಉಚಿತ ಚಿಕಿತ್ಸಾ ಶಿಬಿರ ಪುನರಾರಂಭ

0

ಪುತ್ತೂರು: ಕೋವಿಡ್ ಸಂದರ್ಭದಲ್ಲಿ ತಾತ್ಕಾಲಿಕವಾಗಿ ನಿಂತು ಹೋಗಿದ್ದ ಶ್ರೀ ಸತ್ಯ ಸಾಯಿ ಮಂದಿರದಲ್ಲಿ ಪ್ರತಿ ಗುರುವಾರ ನಡೆಯುತ್ತಿದ್ದ ಚಿಕಿತ್ಸಾ ಶಿಬಿರವು ಇದೀಗ ಮತ್ತೆ ಪುನರಾಂಭಗೊಂಡಿದೆ.

 


ಸಾವಿರಾರು ಮಂದಿಗೆ ಉಚಿತವಾಗಿ ಚಿಕಿತ್ಸೆ ಕೊಡಿಸುವ ಮೂಲಕ 17 ವರ್ಷಗಳ ಹಿಂದೆ ಆರಂಭಗೊಂಡಿದ್ದ ಈ ಚಿಕಿತ್ಸಾ ಶಿಬಿರವು ಕೋವಿಡ್ -19 ಸಂದರ್ಭ ಕೋವಿಡ್ ಮಾರ್ಗಸೂಚಿಯಂತೆ 2020ರ ಮಾ.17ರ ಬಳಿಕ ತಾತ್ಕಾಲಿಕವಾಗಿ ಶಿಬಿರವನ್ನು ಸ್ಥಗಿತಗೊಳಿಸಲಾಗಿತ್ತು. ಇದೀಗ ಮಾ.೨೪ರಂದು ಶಿಬಿರ ಆರಂಭಗೊಂಡಿದೆ. ಪ್ರತಿ ಗುರುವಾರ ಸಂಜೆ ಗಂಟೆ 3 ರಿಂದ ಶಿಬಿರ ನಡೆಯಲಿದೆ. ಮಾ.24ರಂದು ಡಾ. ಶಂಕರ್ ಅವರು ಶಿಬಿರಾರ್ಥಿಗಳಿಗೆ ಸಾಮಾನ್ಯ ಚಿಕಿತ್ಸಾ ಶಿಬಿರ ನಡೆಸಿದರು. ಈ ಸಂದರ್ಭ ಶ್ರೀ ಸತ್ಯ ಸಾಯಿ ಮಂದಿರದ ಪದಾಧಿಕಾರಿಗಳು ಸದಸ್ಯರು ಸಹಕರಿಸಿದರು.

LEAVE A REPLY

Please enter your comment!
Please enter your name here