ನಗರಾಡಳಿತ ಫಾರಂ 3, ನೀರಿನ ಸಮಸ್ಯೆ ಪರಿಹರಿಸಲಿ

0

 

 

ಪಂಚಾಯತ್ ಸಭೆಯಲ್ಲಿ ಈ ರೀತಿಯ ಗಲಾಟೆ ಶೋಭೆಯಲ್ಲ

ಪಂಚಾಯತ್ ಸದಸ್ಯ ರಿಯಾಜ್ ಕಟ್ಟೆಕಾರ್

 

ನಗರ ಪಂಚಾಯತ್ ವ್ಯಾಪ್ತಿಯ ಜನರಿಗೆ ಫಾರಂ 3, ಶುದ್ಧ ಕುಡಿಯುವ ನೀರು ಸೇರಿದಂತೆ ಮೂಲಭೂತ ವಿಚಾರಗಳ ಕುರಿತು ಸಭೆಯಲ್ಲಿ ಚರ್ಚೆಯಾಗಿ ಪರಿಹಾರ ಕಂಡುಕೊಳ್ಳಬೇಕೆ ಹೊರತು, ಸಭೆಯಲ್ಲಿ ಗಲಾಟೆ ಮಾಡುವುದು ಯಾರಿಗೂ ಶೋಭೆ ತರುವುದಿಲ್ಲ ಎಂದು ನ.ಪಂ. ಸದಸ್ಯ ರಿಯಾಜ್ ಕಟ್ಟೆಕಾರ್ ತಿಳಿಸಿದ್ದಾರೆ.

 

“ಅನಿವಾರ್ಯ ಕಾರಣದಿಂದ ಇಂದಿನ ನ.ಪಂ. ಸಾಮಾನ್ಯ ಸಭೆಗೆ ನಾನು ಹೋಗಿರಲಿಲ್ಲ. ಅಲ್ಲಿ ನಡೆದ ಘಟನೆಯನ್ನು ದೃಶ್ಯ ಮಾಧ್ಯಮದಲ್ಲಿ ನೋಡಿ ಬೇಸರವಾಯಿತು. ಈ ರೀತಿಯ ಘಟನೆ ನಡೆಯಲು ಯಾವುದೇ ಸದಸ್ಯರು ಆಸ್ಪದ ನೀಡಬಾರದು. ಇದರಿಂದ ನಮ್ಮ ಮೇಲಿದ್ದ ನಂಬಿಕೆ ಹೋಗುತ್ತದೆ. ನಮ್ಮನ್ನು ಜನರು ಆಯ್ಕೆ ಮಾಡಿರುವುದು ನಗರದ ಸಮಸ್ಯೆಯನ್ನು ಸರಿಪಡಿಸಲು. ನಗರದಲ್ಲಿ ಫಾರಂ 3 ಸಿಗದೆ ಹಲವು ತೊಂದರೆ ಅನುಭವಿಸುತ್ತಿದ್ದಾರೆ.‌ ಅದನ್ನು ಕೊಡಿಸಲು ನಗರಾಡಳಿತ ಮುಂದಾಗಬೇಕು. ಶುದ್ಧ ಕುಡಿಯುವ ನೀರು ಕೊಡಿಸಲು ಯೋಜನೆ ರೂಪಿಸಬೇಕು. ಇವಿಷ್ಟೇ ಅಲ್ಲದೆ ದಾರಿದೀಪ, ,ವಸತಿ ಯೋಜನೆಯವರಿಗೆ ಇನ್ನೂ ಹಣ ಬಂದಿಲ್ಲ, ಜತೆಗೆ ರಸ್ತೆ ಇತ್ಯಾದಿ ಮೂಲಭೂತ ಸಮಸ್ಯೆ ಕುರಿತು ಆರೋಗ್ಯ ಕರ ಚರ್ಚೆ ನಡೆಯಬೇಕು ಹೊರತು ಸದಸ್ಯರಾದ ನಾವೇ ಮೈ ಮುಟ್ಟಿ ಗಲಾಟೆ ಮಾಡುವುದು ಯಾರಿಗೂ ಶೋಭೆ ತರುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here