ಕಾಂಚನ ಪೆರ್ಲ ಶ್ರೀ ಷಣ್ಮುಖ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಂಪನ್ನ

0


ನೆಲ್ಯಾಡಿ:2007ರಲ್ಲಿ ಪುನರ್‌ನಿರ್ಮಾಣಗೊಂಡು ಅಷ್ಟಬಂಧ ಬ್ರಹ್ಮಕಲಶೋತ್ಸವ ನಡೆದ ಕಡಬ ತಾಲೂಕಿನ ಆಲಂತಾಯ ಗ್ರಾಮದ ಕಾಂಚನ ಪೆರ್ಲ ಶ್ರೀ ಷಣ್ಮುಖ ದೇವಸ್ಥಾನದಲ್ಲಿ ಇದೀಗ 14ವರ್ಷಗಳ ಬಳಿಕ 2ನೇ ಬಾರಿಗೆ ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ಮಾ.22ರಿಂದ ಆರಂಭಗೊಂಡಿದ್ದ ಅಷ್ಟಬಂಧ ಬ್ರಹ್ಮಕಲಶೋತ್ಸವ ಮಾ.27ರಂದು ಸಂಪನ್ನಗೊಂಡಿತು.
ಬ್ರಹ್ಮಕಲಶೋತ್ಸವದ 6ನೇ ಹಾಗೂ ಕೊನೆಯ ದಿನವಾದ ಮಾ.27ರಂದು ಬೆಳಿಗ್ಗೆ ಗಣಪತಿ ಹೋಮ, 9.49ರ ವೃಷಭ ಲಗ್ನದಲ್ಲಿ ಅಷ್ಟಬಂಧ ಲೇಪನ ನಂತರ ಪರಿಕಲಶಾಭಿಷೇಕ ನಡೆದು 11.24ರ ಮಿಥುನ ಲಗ್ನದಲ್ಲಿ ಶ್ರೀ ದೇವರಿಗೆ ಬ್ರಹ್ಮಕಲಶಾಭಿಷೇಕ ನಡೆಯಿತು. ಬ್ರಹ್ಮಶ್ರೀ ವೇದಮೂರ್ತಿ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಯವರ ನೇತೃತ್ವದಲ್ಲಿ ಬ್ರಹ್ಮಕಲಶಾಭಿಷೇಕ ಕಾರ್ಯಕ್ರಮ ನಡೆಯಿತು. ಊರ ಹಾಗೂ ಪರವೂರಿನ ಸಾವಿರಾರು ಮಂದಿ ಭಕ್ತರು ಬ್ರಹ್ಮಕಲಶದ ಮಹೋತ್ಸವವನ್ನು ಕಣ್ತುಂಬಿಸಿಕೊಂಡರು. ಮಧ್ಯಾಹ್ನ ಮಹಾಪೂಜೆಯ ಬಳಿಕ ಅನ್ನಸಂತರ್ಪಣೆ ನಡೆಯಿತು.


ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರಾದ ಕಾಂಚನ ರೋಹಿಣಿ ಸುಬ್ಬರತ್ನಂ, ಆಡಳಿತ ಮೊಕ್ತೇಸರ ಧನ್ಯಕುಮಾರ್ ರೈ ಬಿಳಿಯೂರುಗುತ್ತು, ಅಭಿವೃದ್ಧಿ ಸಮಿತಿ ಗೌರವಾಧ್ಯಕ್ಷ ವೆಂಕಪ್ಪ ಗೌಡ ಪೆರ್ಲ, ಅಧ್ಯಕ್ಷ ಪ್ರತಾಪ್‌ಚಂದ್ರ ರೈ ಕುದುಮಾರುಗುತ್ತು, ಕಾರ್ಯದರ್ಶಿ ರಜತ್‌ಕುಮಾರ್ ಶಾಂತಿಮಾರು, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಅಜಿತ್‌ಕುಮಾರ್ ಪಾಲೇರಿ, ಪ್ರಧಾನ ಕಾರ್ಯದರ್ಶಿ ಜನಾರ್ದನ ಗೌಡ ಬರಮೇಲು, ಕೋಶಾಧಿಕಾರಿ ರಮೇಶ್ ಭಟ್ ಬಿ.ಜಿ., ಉಪಾಧ್ಯಕ್ಷರಾದ ಡಾ.ರಾಮಕೃಷ್ಣ ಭಟ್ ಅಂಜರ, ಯೋಗೀಶ್ವರಿ ಡೆಂಬಲೆ, ಪ್ರಶಾಂತ ರೈ ಅರಂತಬೈಲು, ರಮೇಶ ಗೌಡ ಪೆರ್ಲ, ಜೊತೆ ಕಾರ್ಯದರ್ಶಿಗಳಾದ ಐತ್ತಪ್ಪ ಶೆಟ್ಟಿ ಡೆಮ್ಮೆಜಾಲು, ರವಿ ಯಾನೆ ಶಿವಪ್ರಸಾದ್ ಶಿವಾರು, ಮಹೇಶ್ ಆಚಾರ್ಯ ಪಾತೃಮಾಡಿ, ಶಾಲಿನಿಶೇಖರ ಪೂಜಾರಿ, ಶ್ರೀ ಷಣ್ಮುಖ ದೇವಸ್ಥಾನ ಟ್ರಸ್ಟ್‌ನ ಅಧ್ಯಕ್ಷ ಜಿನೇಂದ್ರಕುಮಾರ್, ಉಪಾಧ್ಯಕ್ಷ ನಾರಾಯಣ ಪೂಜಾರಿ, ಜೊತೆ ಕಾರ್ಯದರ್ಶಿ ನೇಮಣ್ಣ ಪೂಜಾರಿ, ಸದಸ್ಯರಾದ ಗುಲಾಬಿ ಶೆಟ್ಟಿ ಪುರ, ವಿಶ್ವನಾಥ ಗೌಡ ಪೆರಣ, ವೆಂಕಟ್ರಮಣ ಕೆ.ಪಿ.ಸುಲ್ತಾಜೆ, ಕೆ.ವಿ.ಕಾರಂತ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಉಪಾಧ್ಯಕ್ಷರಾದ ಪಾರ್ಶ್ವನಾಥ ಜೈನ್, ಮಹೇಂದ್ರ ವರ್ಮ ಮೇಲೂರು, ಸದಸ್ಯರಾದ ವೇದಕುಮಾರ್ ಪುಲಾರ, ಚಲ್ಲಮುಗೇರ ಬೊರ್ಜಾಲು, ನೀಲಪ್ಪ ನಾಯ್ಕ್ ಆಲಂಗಪೆ, ವಾಯುಪ್ರಭಾ ಹೆಗ್ಡೆ ಶಾಂತಿಮಾರು, ಉದಯಕುಮಾರ್ ಬಟ್ಲಡ್ಕ, ವಿವಿಧ ಸಮಿತಿಯ ಸಂಚಾಲಕರಾದ ಮೂಲಚಂದ್ರ ಪ್ರಭು, ಶ್ರೇಯಾಂಶ್ ಕುಮಾರ್, ಸಂತೋಷ್ ಭಟ್, ಯಶೋಧರ ಶಾಂತಿನಗರ, ರತಿ ದಾಮೋದರ ಪೂಜಾರಿ ಅನಾಲುಪಳಿಕೆ, ಮೋನಪ್ಪ ಪೂಜಾರಿ ಡೆಂಬಳೆ, ತೇಜಸ್ವಿ ಅಂಬೆಕಲ್ಲು, ಸುಬ್ರಾಯ ನಾಯಕ್ ಪುಣಚ, ಜಯಮಾಲ, ಅಮಿತಾ ಶಂಕರ್, ಚಂದ್ರಶೇಖರ್, ಪುರುಷೋತ್ತಮ ಗುರುಂಪು, ಜಗನ್ನಾಥ ರೈ ಪಾದೆ, ಪ್ರವೀಣ ಭಂಡಾರಿ ಪುರ, ದೇಜಪ್ಪ ಗೌಡ ಬಾಂಕೋಡಿ, ವೆಂಕಪ್ಪ ಗೌಡ ಡೆಬ್ಬೇಲಿ, ಗೀತಾ ರಮೇಶ್ ಪೆರ್ಲ, ದಾಮೋದರ ಪೂಜಾರಿ ಅನಾಲುಪಳಿಕೆ, ಬಾಬು ಪೂಜಾರಿ ಕಿನ್ಯಡ್ಕ, ನೀಲಪ್ಪ ಎಂ.ಅಲಂಗಪ್ಪೆ, ಬಾಲಕೃಷ್ಣ ಅಲೆಕ್ಕಿ, ನೇಮಣ್ಣ ಗೌಡ ಶಾಂತಿನಗರ, ರವೀಂದ್ರ ಕಾಂಚನ ಸೇರಿದಂತೆ ಸಹ ಸಂಚಾಲಕರು, ಸದಸ್ಯರುಗಳು, ಗ್ರಾಮಸ್ಥರು, ಭಕ್ತಾದಿಗಳು ಬ್ರಹ್ಮಕಲಶೋತ್ಸವ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು.

 


ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮಧ್ಯಾಹ್ನ ಗೋಳಿತ್ತೊಟ್ಟು ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಸಂಜೆ ಕಲ್ಲಡ್ಕ ವಿಠಲ್ ನಾಯಕ್ ತಂಡದವರಿಂದ ಗೀತಾ ಸಾಹಿತ್ಯ ಸಂಭ್ರಮ ನಡೆಯಿತು.

ಅರ್ಧ ಏಕಾಹ ಭಜನೆ:
ಮಾ.೨೭ರಂದು ಸೂರ್‍ಯೋದಯದಿಂದ ಸೂರ್ಯಾಸ್ತಮಾನದವರೆಗೆ ದೇವಸ್ಥಾನದಲ್ಲಿ ಅರ್ಧ ಏಕಾಹ ಭಜನೆ ನಡೆಯಿತು. ಬೆಳಿಗ್ಗೆ ೬.೩೧ರಿಂದ ಭಜನೆ ಆರಂಭಗೊಂಡಿತು. ಶಾಂತಿನಗರ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಭಜನಾ ಮಂಡಳಿ, ಆಲಂತಾಯ ಶ್ರೀರಾಮ ಭಜನಾ ಮಂಡಳಿ, ಗೋಳಿತ್ತೊಟ್ಟು ಶ್ರೀ ಸಿದ್ಧಿವಿನಾಯಕ ಭಜನಾ ಮಂಡಳಿ, ಅಯೋಧ್ಯಾನಗರ ಶ್ರೀ ರಾಮ ಭಜನಾ ಮಂಡಳಿ, ತಿರ್ಲೆ ಶ್ರೀ ವಿಷ್ಣುಮೂರ್ತಿ ಭಜನಾ ಮಂಡಳಿ, ಕೊಣಾಜೆ ಶ್ರೀ ದುರ್ಗಾಂಬಿಕಾ ಭಜನಾ ಮಂಡಳಿ, ದುರ್ಗಾಗಿರಿ ಶ್ರೀ ದುರ್ಗಾಮಾತಾ ಭಜನಾ ಮಂಡಳಿ, ಪಾಂಡಿಬೆಟ್ಟು ಶ್ರೀ ಶಿವಗಿರಿ ಅಯ್ಯಪ್ಪ ಭಜನಾ ಸೇವಾ ಸಂಘ, ಕೊಡಿಪ್ಪಾಡಿ ಆರ್ಕ ಶ್ರೀ ಮಹಾದೇವಿ ಭಜನಾ ಮಂಡಳಿ, ನಡ್ಪ ಶ್ರೀ ವಿಷ್ಣುಮೂರ್ತಿ ಭಜನಾ ಮಂಡಳಿ, ಹಳೆನೇರೆಂಕಿ ಶ್ರೀ ವಿಷ್ಣುಮೂರ್ತಿ ಭಜನಾ ಮಂಡಳಿ, ಪೆರಿಯಡ್ಕ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ನಡೆಯಿತು. ಬಳಿಕ ಸ್ಥಳೀಯ ಭಜನಾ ತಂಡಗಳಿಂದ ಮಂಗಳೋತ್ಸವ ನಡೆಯಿತು.

LEAVE A REPLY

Please enter your comment!
Please enter your name here