ಪುತ್ತೂರಿನ ಬೃಹತ್ ಫರ್ನಿಚೇರ್, ಇಲೆಕ್ಟ್ರಾನಿಕ್ಸ್ ಮಳಿಗೆ ಏಷಿಯನ್‌ವುಡ್, ನ್ಯೂ ಮಂಗಳೂರು ಇಲೆಕ್ಟ್ರಾನಿಕ್ಸ್‌ನ ನೂತನ ಶಾಖೆ ಶುಭಾರಂಭ

0

 

ಪುತ್ತೂರು : ಸುಮಾರು ೪೦ ವರ್ಷಗಳಿಂದ ಗ್ರಾಹಕರ ಸೇವೆಯಲ್ಲಿರುವ ನ್ಯೂ ಮಂಗಳೂರು ಫರ್ನಿಚರ್‌ನ ಮತ್ತು ಏಷಿಯನ್ ವುಡ್‌ನ ನೂತನ ವಿಸ್ತೃತ ಶಾಖೆ ಮಾ.೨೮ರಂದು ದರ್ಬೆ ಐಕೆ ಮಾಲ್‌ನಲ್ಲಿ ಶುಭಾರಂಭಗೊಂಡಿತು.

 

ವಿಶಾಲ, ವಿಸ್ತೃತ ಮಳಿಗೆ:
ನೂತನವಾಗಿ ಪ್ರಾರಂಭಗೊಂಡಿರುವ ಏಷ್ಯನ್ ವುಡ್ ಸುಮಾರು೨೨,೦೦೦ ಚದರ ಅಡಿ ವಿಸ್ತೀರ್ಣ ಹೊಂದಿರುವ ಮಳಿಗೆ ಮೂರು ಅಂತಸ್ತುಗಳನ್ನು ಹೊಂದಿದೆ. ನೆಲಮಹಡಿಯಲ್ಲಿ ಲಕ್ಸುರಿ ಸೋಫಾ ಸೆಟ್‌ಗಳು, ಡ್ಯೂರೋಪ್ಲೆಕ್ಸ್ ಕಂಪನಿಯ ಬೆಡ್, ಕಾಟ್‌ಗಳು, ಗ್ರಾನೈಟ್ ಅಳವಡಿಸಿ ಡೈನಿಂಗ್ ಟೇಬಲ್‌ಗಳು, ಪ್ರಥಮ ಮಹಡಿಯಲ್ಲಿ ಎಲ್ಲಾ ಕಂಪನಿಯ ಎಲೆಕ್ಟ್ರಾನಿಕ್ ಹಾಗೂ ಮನೆ ಬಳಕೆಯ ಸಾಮಾಗ್ರಿಗಳು, ಎರಡನೇ ಮಹಡಿಯಲ್ಲಿ ಗ್ಲಾಸ್ ಅಳವಡಿಸಿದ ಡೈನಿಂಗ್ ಟೇಬಲ್‌ಗಳು, ಮರದ ವಿವಿಧ ವಿನ್ಯಾಸ ಪೀಟೋಪಕರಣಗಳು, ಸೋಪಾ ಸೆಟ್‌ಗಳು, ಸುಪ್ರೀಮ್ ಕಂಪನಿಯ ವಿವಿಧ ರೀತಿಯ, ವಿವಿಧ ವಿನ್ಯಾಸದ ಪೀಟೋಪಕರಣಗಳನ್ನು ಹೊಂದಿದೆ. ಜೊತೆಗೆ ಮಳಿಗೆಯ ಗ್ರಾಹಕರ ಅನುಕೂಲಕ್ಕಾಗಿ ವಿಶಾಲವಾದ ಪಾರ್ಕಿಂಗ್ ಸೌಲಭ್ಯವನ್ನು ಒದಗಿಸಿದೆ. ಗೋದ್ರೆಜ್, ಡ್ಯೂರೊಫ್ಲೆಕ್ಸ್ ಸ್ಟೋರ್, ಸುಪ್ರೀಮ್ ಫರ್ನಿಚರ್, ವೈಟ್ ಓಕ್, ಎವರ್ ಗ್ರೀನ್ ಇದರ ವಿಶೇಷ ಔಟ್‌ಲೆಟ್‌ಗಳನ್ನು ಮಳಿಗೆ ಒಳಗೊಂಡಿದೆ. ಗ್ರಾಹಕರ ಇಷ್ಟದ ಎಲ್ಲಾ ಮಾದರಿಯ ಗ್ರಹೋಪಯೋಗಿ ವಸ್ತುಗಳು, ಫರ್ನಿಚರ್‌ಗಳು ಒಂದೇ ಸೂರಿನಡಿಯಲ್ಲಿ ಲಭ್ಯವಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ನೂತನ ಮಳಿಗೆಯನ್ನು ನರಸಿಂಹ ಭಟ್ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿ ವೈಟ್‌ಓಕ್ ವಿಭಾಗವನ್ನು ಉದ್ಘಾಟಿಸಿದ ನಗರ ಸಭಾ ಅಧ್ಯಕ್ಷ ಜೀವಂಧರ್ ಜೈನ್ ಮಾತನಾಡಿ, ಪುತ್ತೂರು ನಗರವು ದಿನೇ ದಿನೇ ಬೆಳೆಯುತ್ತಿದೆ. ಕಳೆದ ಕೆಲ ವರ್ಷಗಳಿಂದ ಬಹಳಷ್ಟು ವಿಶೇಷ ಶೋರೂಂಗಳು ಪುತ್ತೂರಿನಲ್ಲಿ ಪ್ರಾರಂಭಗೊಳ್ಳುತ್ತಿದೆ. ಹೀಗಾಗಿ ಉತ್ತಮ ಸಾಮಾಗ್ರಿಗಳ ಖರೀದಿಗೆ ಮಂಗಳೂರಿಗೆ ಹೋಗಬೇಕಾದ ಅನಿವಾರ್ಯತೆಯಿಲ್ಲ. ಈಗ ಮಂಗಳೂರಿಗಿಂತ ಉತ್ತಮ ಗುಣಮಟ್ಟದ ಸಾಮಾಗ್ರಿಗಳು ಪುತ್ತೂರಿನಲ್ಲಿ ದೊರೆಯುತ್ತದೆ. ಏಷ್ಯನ್ ವುಡ್‌ನಂತ ಇನ್ನಷ್ಟು ಮಳಿಗೆಗಳು ಪುತ್ತೂರಿಗೆ ಬರಲಿ ಎಂದು ಹಾರೈಸಿದರು.

 

ಗೋದ್ರೇಜ್ ಕಂಪನಿಯ ವಿಭಾಗವನ್ನು ಉದ್ಘಾಟಿಸಿ ಮಾಜಿ ಶಾಸಕಿ ಶಕುಂತಳಾ ಟಿ.ಶೆಟ್ಟಿ ಮಾತನಾಡಿ, ಹೊಸ ವಿನ್ಯಾಸದ ಮನೆಗಳ ನಿರ್ಮಾಣವಾಗುತ್ತಿದೆ. ಅದಕ್ಕೆ ಪೂರಕವಾಗಿ ಆಧುನಿಕ ವಿನೂತನ ಮಾದರಿಯ ಪೀಟೋಪಕರಣಗಳು ಏಷ್ಯನ್ ವಿಡ್‌ನಲ್ಲಿ ಲಭ್ಯವಿದ್ದು ಪೂರಕವಾಗಿ ಮನೆಯ ಅಂದವನ್ನು ಇನ್ನಷ್ಟು ಮೆರುಗಗೊಳಿಸಲಿದೆ. ಏಷ್ಯನ್ ವುಡ್‌ನ ಮಳಿಗೆಗಳು ಜಿಲ್ಲೆ, ರಾಜ್ಯವ್ಯಾಪಿ ವಿಸ್ತಾರಗೊಳ್ಳಲಿ ಎಂದು ಆಶಿಸಿದರು.

ಹುಸೈನ್ ದಾರಿಮಿ ರೆಂಜಲಾಡಿ ಮಾತನಾಡಿ, ತನ್ನ ಸಂಸ್ಥೆಯ ಉದ್ಘಾಟನೆಯೊಂದಿಗೆ ಸಮಾಜದ ಅಪರೂಪದ ಸಾಧಕರನ್ನು ಗುರುತಿಸುವ ಕಾರ್ಯಮಾಡಿರುವ ಏಷ್ಯನ್ ವುಡ್ ಆ ಮೂಲಕ ದೇವರನ್ನು ಕಂಡಿದ್ದಾರೆ. ಯಾವುದೇ ರೀತಿಯ ವಂಚನೆಯಿಲ್ಲದೆ, ಪ್ರಾಮಾಣಿಕ ವ್ಯಾಪಾರ ಮಳಿಗೆಯಾಗಿರುವ ಏಷ್ಯನ್ ವುಡ್ ವರ್ಲ್ಡ್ ವುಡ್ ಆಗಿ ಬೆಳೆಯಲಿ ಎಂದು ಶುಭಹಾರೈಸಿದರು.

 

ಪುರಸಭಾ ಮಾಜಿ ಅಧ್ಯಕ್ಷ ರಾಜೇಶ್ ಬನ್ನೂರು ಮಾತನಾಡಿ, ಪ್ರಾಮಾಣಿಕತೆಯಿರುವಲ್ಲಿ ದೇವರ ಅನುಗ್ರಹ ಖಂಡಿತಾ ದೊರೆಯಲಿದೆ. ಏಷ್ಯನ್ ವುಡ್ ವಿಸ್ತೃತ ಮಳಿಗೆಯು ಬೆಳೆಯುತ್ತಿರುವ ಪುತ್ತೂರಿನ ಮುಕುಟಕ್ಕೆ ಮತ್ತೋಂದು ಗರಿಯಾಗಿದೆ ಎಂದರು.

ಮಳಿಗೆಯಲ್ಲಿರುವ ಎವರ್‌ಗ್ರೀನ್ ಕಂಪನಿಯ ಸಾಮಾಗ್ರಿಗಳ ವಿಭಾಗವನ್ನು ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಕೆ.ಸೀತಾರಾಮ ರೈ ಸವಣೂರು, ಡ್ಯೂರೋಪ್ಲಕ್ಸ್ ವಿಭಾಗವನ್ನು ಡ್ಯೂರೋಪ್ಲೆಕ್ಸ್ ಕಂಪನಿಯ ವಿತರಕ ಶಿವಾನಂದ, ಸುಪ್ರಿಮ್ ಫರ್ನಿಚೇರ್‌ನ ವಿಭಾಗವನ್ನು ಉದ್ಯಮಿ ವಾಮನ ಪೈ ಉದ್ಘಾಟಿಸಿದರು.

ಸನ್ಮಾನ:
ಹಿರಿಯ ವೈದ್ಯರಾದ ಡಾ.ರಮಾದೇವಿ, ಫಾದರ್ ಪತ್ರಾವೋ ಆಸ್ಪತ್ರೆಯ ಡಾ.ಪ್ಲೋರಿನಾ, ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ.ಯು.ಪಿ ಶಿವಾನಂದರ ಪವರವಾಗಿ ಅವರ ಪತ್ನಿ ಶೋಭಾ ಶಿವಾನಂದ, ಬಿರುಮಲೆ ಪಜ್ಞಾ ಆಶ್ರಮದ ಮುಖ್ಯಸ್ಥ ಅಣ್ಣಪ್ಪ, ಮಡಿವಾಳಕಟ್ಟೆ ಹಿಂದು ರುದ್ರಭೂಮಿಯ ಸತೀಶ್‌ರವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ಮಹಾಲಿಂಗೇಶ್ವರ ಐಟಿಐ ಸಂಚಾಲಕ ಯು.ಪಿ.ರಾಮಕೃಷ್ಣ, ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಸುಧಾಕರ ಶೆಟ್ಟಿ ನೆಲ್ಲಿಕಟ್ಟೆ, ಎ.ಕೆ. ಜಯರಾಮ ರೈ, ಅಬ್ದುಲ್ ಅಝೀಝ್ ಬುಶ್ರಾ, ಆರ್ಯಾಪು ಗ್ರಾ.ಪಂ ಸದಸ್ಯ ಪುರುಷೋತ್ತಮ ರೈ ಬೂಡಿಯಾರ್, ನೋವೆಲ್ ಲಸ್ರಾದೋ, ನ್ಯಾಯವಾದಿ ಫಝಲ್ ರಹೀಮ್, ಮಹಾವೀರ ಆಸ್ಪತ್ರೆಯ ಆಡಳಿತ ನಿರ್ದೇಶಕ ಅಶೋಕ್ ಪಡಿವಾಳ್, ರೋಟರಿ ಕ್ಲಬ್ ಪುತ್ತೂರು ಇದರ ಅಧ್ಯಕ್ಷ ಮಧು ನರಿಯೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಇಡ್ಕಿದು ಸೇವಾ ಸಹಕಾರ ಸಂಘದ ಅಧ್ಯಕ್ಷ ಸುಧಾಕರ ಶೆಟ್ಟಿ ಬೀಡಿನಮಜಲು, ರೋಟರಿ ಕ್ಲಬ್ ಪುತ್ತೂರು ಪೂರ್ವದ ಅಧ್ಯಕ್ಷ ರಾಮಕೃಷ್ಣ ಮಲ್ಲಾರ, ಸ್ವಾತಿ ಮಲ್ಲಾರ, ಅಶ್ವಿನಿ ಹೋಟೇಲ್‌ನ ಮ್ಹಾಲಕ ಕರುಣಾಕರ ರೈ, ಪೂರ್ಣೇಶ್ ಕುಮಾರ್, ಸತೀಶ್ ರೈ, ಅಶ್ವಿನ್ ಎಲ್ ಶೆಟ್ಟಿ, ಬಿಲ್ಲವ ಸಂಘದ ಮಾಜಿ ಅಧ್ಯಕ್ಷ ವಿಜಯ ಕುಮಾರ್ ಸೊರಕೆ, ಪ್ರಸನ್ನ ಶೆಟ್ಟಿ ಸಾಮೆತ್ತಡ್ಕ, ಎಸ್‌ಡಿಪಿಐ ಅಧ್ಯಕ್ಷ ಇಬ್ರಾಹಿಂ ಸಾಗರ್, ಮುಸ್ಲಿಂ ಸಂಯುಕ್ತ ಜಮಾಅತ್‌ನ ಅಧ್ಯಕ್ಷ ಎಲ್.ಟಿ ಅಬ್ದುಲ್ ರಝಾಕ್ ಸೇರಿದಂತೆ ಹಲವು ಮಂದಿ ಆಗಮಿಸಿ ಸಂಸ್ಥೆಗೆ ಶುಭಹಾರೈಸಿದರು. ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಮಹಮ್ಮದ್ ಬಡಗ್ನನೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ನಗರ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಆಲಿ ಸ್ವಾಗತಿಸಿ, ವಂದಿಸಿದರು. ಸುರೇಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ಮ್ಹಾಲಕ ಇಸ್ಮಾಯಿಲ್, ಅವರ ಪುತ್ರರಾದ ಜಬ್ಬರ್ ಹಾಗೂ ನವಾಜ್ ಅತಿಥಿಗಳನ್ನು ಹೂಗುಚ್ಚ, ಸ್ಮರಣಿಕೆ ನೀಡಿ ಗೌರವಿಸಿದರು.

LEAVE A REPLY

Please enter your comment!
Please enter your name here