ಚಿಕ್ಕಮುಡ್ನೂರು: ಆದಿಶಕ್ತಿ ಶ್ರೀ ಚಾಮುಂಡೇಶ್ವರಿ ವನದುರ್ಗ ವನಶಾಸ್ತಾರ ನಾಗ ಸನ್ನಿಧಿ, ಗುಳಿಗ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವ

0

ಪುತ್ತೂರು: ಚಿಕ್ಕಮುಡ್ನೂರು ಗ್ರಾಮದ ಕೊಪ್ಪಳದಲ್ಲಿ ಆದಿಶಕ್ತಿ ಶ್ರೀ ಚಾಮುಂಡೇಶ್ವರಿ ವನದುರ್ಗ ವನ ಶಾಸ್ತಾರ ನಾಗ ಸನ್ನಿಧಿ ಹಾಗೂ ಗುಳಿಗ ಕ್ಷೇತ್ರದಲ್ಲಿ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಮಾರ್ಚ್ 25 ಮತ್ತು 26ರಂದು ನಡೆಯಿತು.

ಮಾರ್ಚ್ 26ರಂದು ಬೆಳಿಗ್ಗೆ ದೇವತಾ ಪ್ರಾರ್ಥನೆ, ತೋರಣ ಮುಹೂರ್ತ, ಉಗ್ರಾಣ ಮುಹೂರ್ತ ಮತ್ತು ಶಿಲ್ಪಿಗಳಿಂದ ಪ್ರಸಾದಾದಿ ಪರಿಗ್ರಹ ಕಾರ್ಯಕ್ರಮ, ಸಂಜೆ ವೈದಿಕರ ಸ್ವಾಗತ, ಸಾಮೂಹಿಕ ಪ್ರಾರ್ಥನೆ, ಪಂಚಗವ್ಯ, ಪುಣ್ಯಹ ಸ್ಥಳಶುದ್ಧಿ, ಪ್ರಾಸಾದ ಶುದ್ಧಿ, ಬನಾದಿ ಸಪ್ತ ಶುದ್ಧಿ, ವಾಸ್ತು ಹೋಮ, ವಾಸ್ತು ಪೂಜೆ, ನಾಗ ಬಿಂಬ ಶುದ್ಧಿ ಸೇರಿದಂತೆ ವೈದಿಕ ಕಾರ್ಯಕ್ರಮಗಳು ನಡೆದು ಮಹಾಪೂಜೆ ನಡೆಯಿತು. ನಂತರ ಅನ್ನಸಂತರ್ಪಣೆ ನಡೆಯಿತು.
ಮಾರ್ಚ್ 27ರಂದು ಬೆಳಿಗ್ಗೆ ಮಹಾಗಣಪತಿ ಹೋಮ, ಬ್ರಹ್ಮಕಲಶ ಪೂಜೆ, ಕಲಶ ಪ್ರತಿಷ್ಠ ಪ್ರಧಾನ ಹೋಮ, ಆಶ್ಲೇಷ ಬಲಿ, ವಟು ಆರಾಧನೆ ನಡೆಯಿತು.

ಶ್ರೀ ನವದುರ್ಗ ವನಶಾಸ್ತಾರ, ನಾಗಸನ್ನಿಧಿ ಮತ್ತು ಗುಳಿಗ ಪ್ರತಿಷ್ಠೆ ನಿದ್ರಾಕಲಶ, ಜೀವ ಪ್ರತಿಷ್ಠಾ ಕಲಶಾಭಿಷೇಕಗಳು, ಬ್ರಹ್ಮಕಲಶಾಭಿಷೇಕ ತಂಬಿಲ, ಮಹಾಪೂಜೆ ನಡೆದು ಅನ್ನಸಂತರ್ಪಣೆ ನಡೆಯಿತು. ಗೌರವಾಧ್ಯಕ್ಷ ದಿನೇಶ್ ರೈ ಮಡಪ್ಪಾಡಿ, ಅಧ್ಯಕ್ಷ ಚಿದಾನಂದ ರೈ, ಸೇಸಪ್ಪ ಗೌಡ, ತನಿಯಪ್ಪ ಕುಲಾಲ್, ನಾಗೇಶ್ ಕೆ. ಕೆಮ್ಮಾಯಿ, ಅಣ್ಣಿ ಪೂಜಾರಿ, ಚಂದ್ರಶೇಖರ ಕೆಮ್ಮಾಯಿ, ಹರೀಶ್ ಗೌಡ, ಜನಾರ್ದನ ಗೌಡ, ಧನರಾಜ್ ಅಡ್ಲಿಮಜಲು , ಕ್ಷೇತ್ರದ ಮೊಕ್ತೇಸರ ಕೃಷ್ಣಪ್ಪ, ಕೇಶವ ಮಡಿವಾಳ, ಅವಿನಾಶ, ಸುಂದರ ಅನಂತಿಮಾರು, ಕೇಶವ ಕೆಳಗಿನ ಮನೆ, ವಿನಂತ, ಶ್ರೀಪತಿ, ಸಂತೋಷ್ ಕುಮಾರ್ ಶೆಟ್ಟಿ, ಮೋಹನ್ ಕೊಪ್ಪಳ, ಹರೀಶ್ ಪೂಜಾರಿ ಅಡ್ಲಿಮಜಲು, ನಿಶ್ಚಿತ ಅಡ್ಲಿಮಜಲು, ಸೀಮಾ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here