ಆರ್ಯಾಪು ನೇರಳಕಟ್ಟೆ ಶ್ರೀ ಅಮ್ಮನವರ ದೇವಸ್ಥಾನದ ವಾರ್ಷಿಕ ಮಾರಿ ಪೂಜೆ-ಆಮಂತ್ರಣ ಪತ್ರಿಕೆ ಬಿಡುಗಡೆ

0

ಪುತ್ತೂರು: ಆರ್ಯಾಪು ಗ್ರಾಮದ ಇತಿಹಾಸ ಪ್ರಸಿದ್ದ ಶ್ರೀ ಅಮ್ಮನವರ ದೇವಸ್ಥಾನ ಆರ್ಯಾಪು ನೇರಳಕಟ್ಟೆ ಶ್ರೀ ಕ್ಷೇತ್ರದ ವಾರ್ಷಿಕ ಮಾರಿಪೂಜೆಯು ಏ.26 ಮತ್ತು 27  ರಂದು ಕ್ಷೇತ್ರದ ತಂತ್ರಿವರ್ಯರಾದ ವೇ.ಮೂ. ಬ್ರಹ್ಮಶ್ರೀ ನಾಗೇಶ ತಂತ್ರಿ ಕೆಮ್ಮಿಂಜೆರವರ ನೇತ್ರತ್ವದಲ್ಲಿ ಹಾಗೂ ದೇವಸ್ಥಾನದ ಆಡಳಿತ ಸಮಿತಿಯ ಗೌರವಾಧ್ಯಕ್ಷರಾದ ಸತೀಶ್ ರೈ ಮಿಷನ್‌ಮೂಲೆರವರ ಮುಂದಾಳತ್ವದಲ್ಲಿ ನಡೆಯಲ್ಲಿದೆ.

 

ಈ ಪ್ರಯುಕ್ತ ಮಾರಿ ಪೂಜೆಯ ಆಮಂತ್ರಣ ಪತ್ರಿಕೆಯನ್ನು ಮಾ.29 ರಂದು ಕ್ಷೇತ್ರದ ಆಡಳಿತ ಸಮಿತಿಯ ಅಧ್ಯಕ್ಷರಾದ ರವಿಚಂದ್ರ ಆಚಾರ್ಯರವರ ನೇತೃತ್ವದಲ್ಲಿ ಪಣಿರಾಜ್ ಜೈನ್ ಗುತ್ತಿನ ಮನೆ, ಮಂಜಪ್ಪ ರೈ ಬಾರಿಕೆ ಮನೆತನ ಹಾಗೂ ಲಕ್ಷ್ಮಿನಾರಾಯಣ ಭಟ್ ಕೊಲ್ಯರವರು ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ದೇವಸ್ಥಾನ ಆಡಳಿತ ಸಮಿತಿಯ ಪ್ರಧಾನ ಸಂಚಾಲಕರಾದ ನೇಮಾಕ್ಷ ಸುವರ್ಣ, ಜಯಂತ ಶೆಟ್ಟಿ ಕಂಬಳತ್ತಡ್ಡ, ಕಾರ್ಪಾಡಿ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ದೇವಯ್ಯ ಗೌಡ ದೇವಸ್ಯ, ಅಮ್ಮನವರ ದೇವಸ್ಥಾನದ ಆಡಳಿತ ಸಮಿತಿ ಕಾರ್ಯದರ್ಶಿ ಲೋಕೇಶ್ ರೈ ಮೇರ್ಲ, ಸದಸ್ಯರಾದ ರಾಘವೇಂದ್ರ ರೈ ಮೇರ್ಲ, ರವೀಂದ್ರ ಶೆಟ್ಟಿ ಕಂಬಳತ್ತಡ್ಡ, ಭಾಸ್ಕರ ನೆಲ್ಲಿಗುಂಡಿ, ಪ್ರೀತಿ ದೇವಯ್ಯ ಗೌಡ, ಖಜಾಂಜಿ ಸುರೇಶ್ ಪಿ, ದೇವಸ್ಥಾನದ ಆಡಳಿತ ಮೋಕ್ತೇಸರರಾದ ರಾಮ ಕಾರೆಕಾಡು, ಅಮ್ಮನವರ ಸೇವಾ ಸಮಿತಿಯ ಅಧ್ಯಕ್ಷರಾದ ಜಗನ್ನಾಥ ಪಿ, ಪ್ರಧಾನ ಅರ್ಚಕರಾದ ಸುನಿಲ್ ಮಚ್ಚೇಂದ್ರ, ಸದಸ್ಯರಾದ ನವೀನ್, ಹರೀಶ, ರಮೇಶ, ಯೋಗೀಶ, ಧನುಷ್, ಅಶೋಕ, ಗಿರೀಶ ಹಾಗೂ ಹಲವಾರು ಭಕ್ತರು ಹಾಜರಿದ್ದರು.

LEAVE A REPLY

Please enter your comment!
Please enter your name here