ಕೊಯಿಲ ಆತೂರು ಶ್ರೀ ಸದಾಶಿವ ಮಹಾಗಣಪತಿ ದೇವಸ್ಥಾನ ವರ್ಷಾವಧಿ ಜಾತ್ರಾ ಮಹೋತ್ಸವ-ಹೊರೆಕಾಣಿಕೆ ಸಮರ್ಪಣೆ

0

ಸೀಮೆ ದೇವಸ್ಥಾನವಾಗಿರುವ, ಅತ್ಯಂತ ಪ್ರಾಚೀನ ಹಾಗೂ ಸುಮಾರು 00 ವರ್ಷಗಳಿಗೂ ಮಿಕ್ಕಿದ ಮೌಖಿಕ ಇತಿಹಾಸ ಹೊಂದಿರುವ ಕೊಯಿಲ ಗ್ರಾಮದ ಆತೂರು ಶ್ರೀ ಸದಾಶಿವ ಮಹಾಗಣಪತಿ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವದ ಅಂಗವಾಗಿ ಮಾ.29ರಂದು ಬೆಳಿಗ್ಗೆ ಗ್ರಾಮದ ಭಕ್ತರಿಂದ ಹೊರೆಕಾಣಿಕೆ ಸಮರ್ಪಣೆ ನಡೆಯಿತು.

ಶ್ರೀ ಸದಾಶಿವ ಮಹಾಗಣಪತಿ ದೇವಸ್ಥಾನವು ಕಾಲ ಕಾಲಕ್ಕೆ ಜೀರ್ಣೋದ್ಧಾರಗೊಂಡು ನವೀಕರಣ, ಬ್ರಹ್ಮಕಲಶೋತ್ಸವ ಮುಂತಾದ ಪವಿತ್ರ ಕಾರ್ಯಗಳು ನಡೆದಿವೆ. 2008ರ ಬ್ರಹ್ಮಕಲಶೋತ್ಸವದ ಸಂದರ್ಭದಲ್ಲಿ ಬ್ರಹ್ಮರಥವು ಸಮರ್ಪಣೆಗೊಂಡಿದೆ. ಇದೀಗ ಸುಮಾರು ಒಂದೂವರೇ ಕೋಟಿ ರೂ.,ವೆಚ್ಚದಲ್ಲಿ ಭೋಜನ ಶಾಲೆ, ಪಾಕ ಶಾಲೆ, ಆಡಳಿತ ಕಚೇರಿ, ಮೂಲಭೂತ ಸೌಕರ್ಯ ಹೊಂದಿರುವ ಸುಮಾರು 7 ಸಾವಿರ ಚದರ ಅಡಿಯ ಸಭಾಭವನದ ನಿರ್ಮಾಣ ಕೆಲಸ ನಡೆಯುತ್ತಿದೆ. ದೇವಸ್ಥಾನ ಕೇವಲ ಪೂಜೆ, ಸೇವೆ ಇತ್ಯಾದಿಗಳಿಗೆ ಮಾತ್ರ ಸೀಮಿತವಾಗಬಾರದು. ಧರ್ಮ ಜಾಗೃತಿ, ಧಾರ್ಮಿಕ ಶಿಕ್ಷಣ, ಸೇವಾ ಚಟುವಟಿಕೆ, ಸಾಮರಸ್ಯ ಮತ್ತು ಸಂಸ್ಕಾರಯುತ ಜೀವನ ಪಾಠಗಳನ್ನು ನೀಡುವ ಕೇಂದ್ರವಾಗಬೇಕೆಂಬ ಮಹತ್ತರ ಉದ್ದೇಶವಿಟ್ಟುಕೊಂಡು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಕಾರ್ಯನಿರ್ವಹಿಸುತ್ತಿದೆ.

ಮಾ.29ರಿಂದ ಎ.2ರ ತನಕ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳೊಂದಿಗೆ ವಾರ್ಷಿಕ ಜಾತ್ರೆ ನಡೆಯಲಿದ್ದು ಎ.3ರಂದು ಶ್ರೀ ದುಗಲಾಯಿ ದೈವದ ನೇಮೋತ್ಸವ ನಡೆಯಲಿದೆ. ಇದಕ್ಕೆ ಪೂರ್ವಭಾವಿಯಾಗಿ ಮಾ.೨೯ರಂದು ಬೆಳಿಗ್ಗೆ ಶಾಲಾ ಮಕ್ಕಳಿಂದ ಹಾಗೂ ಊರವರಿಂದ ಹೊರೆಕಾಣಿಕೆ ಸಮರ್ಪಣೆ ನಡೆಯಿತು. ದೇವಸ್ಥಾನದ ಮುಖ್ಯದ್ವಾರದಿಂದ ಆರಂಭಗೊಂಡ ಹೊರೆಕಾಣಿಕೆ ಮೆರವಣಿಗೆಗೆ ಮಾತೆಯರು ಪುಷ್ಪಾರ್ಚನೆ ಮಾಡಿ ಸ್ವಾಗತಿಸಿದರು. ಹಸಿರುವಾಣಿಗೆ ವಿಶೇಷ ಪೂಜೆ ಇರುವುದರಿಂದ 5 ಸೇರು ಅಕ್ಕಿ, 5 ತೆಂಗಿನಕಾಯಿ, ಗೊನೆ ಅಡಿಕೆ ಅಥವಾ 100 ಅಡಿಕೆ ಪ್ರತಿ ಮನೆಯಿಂದ ಸಮರ್ಪಿಸುವಂತೆ ವ್ಯವಸ್ಥಾಪನಾ ಸಮಿತಿ ಮಾಡಿದ ಮನವಿಯಂತೆ ಗ್ರಾಮದ ಭಕ್ತರು ದೇವರಿಗೆ ಹಸಿರುವಾಣಿ ಸಮರ್ಪಣೆ ಮಾಡಿದರು. ಪವಿತ್ರ ಪಾಣಿ ವೆಂಕಟ್ರಮಣ ಕುದ್ರೆತ್ತಾಯ, ಅರ್ಚಕ ವಿಷ್ಣುಮೂರ್ತಿ ಬಡೆಕ್ಕಿಲಾಯರವರು ಪೂಜಾ ವಿಧಿ ವಿಧಾನ ನೆರವೇರಿಸಿದರು.

ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಯದುಶ್ರೀ ಆನೆಗುಂಡಿ, ಸದಸ್ಯರುಗಳಾದ ಬಾಲಕೃಷ್ಣ ನಾಯ್ಕ ಏಣಿತ್ತಡ್ಕ, ವನಜ ಪಲ್ಲಡ್ಕ, ಮೋಹಿನಿ ಪಾನ್ಯಯೇಲು, ಮುರಳಿಕೃಷ್ಣ ಕೆ ಬಡಿಲ, ವಿನಯ ಕುಮಾರ್ ರೈ ಕೊಯಿಲ ಪಟ್ಟೆ, ಶ್ರೀರಾಮ ಕೆಮ್ಮಾರ, ಸಂಜೀವ ಗೌಡ ಕೊನೆಮಜಲು, ಉತ್ಸವ ಸಮಿತಿ ಅಧ್ಯಕ್ಷ ಪಾಂಡೆಲುಗುತ್ತು ಚಂದ್ರಹಾಸ ರೈ ಬುಡಲೂರು, ಪ್ರಧಾನ ಕಾರ್ಯದರ್ಶಿ ವಿನೋದ್ ಕುಮಾರ್ ಪಲ್ಲಡ್ಕ, ಉಪಾಧ್ಯಕ್ಷರಾದ ಮೋಹನದಾಸ ಶೆಟ್ಟಿ ಬಡಿಲ, ರಾಜೀವ ಗೌಡ ಪೊಸಲಕ್ಕೆ, ದಯಾನಂದ ದಾಸ್ ಪಾಣಿಗ, ರುಕ್ಮಯ ಪಲ್ಲಡ್ಕ, ಕಾರ್ಯದರ್ಶಿಗಳಾದ ಶಾಂತರಾಮ ಬೇಂಗದಪಡ್ಪು, ರಮೇಶ ಪೆರ್ಲ, ಅಭಿವೃದ್ಧಿ ಸಮಿತಿ ಅಧ್ಯಕ್ಷ ಶೀನಪ್ಪ ಗೌಡ ವಳಕಡಮ, ಉಪಾಧ್ಯಕ್ಷ ಭವಾನಿಶಂಕರ್ ಪರಂಗಾಜೆ, , ಬಾಲಕೃಷ್ಣ ಗೌಡ ಬೇಂಗದಪಡ್ಪು, ಕಾರ್ಯದರ್ಶಿ ಶಶಿಕುಮಾರ್ ಅಂಬಾ, ಜೊತೆ ಕಾರ್ಯದರ್ಶಿಗಳಾದ ಆನಂದ ಎಸ್.ಟಿ.ಕೆಮ್ಮಾರ, ಉಮೇಶ ಸಂಕೇಶ, ಹರೀಂದ್ರ ವಳಕಡಮ, ಕಾರ್ಯಕಾರಿ ಸಮಿತಿ ಸದಸ್ಯರಾದ ವಿನೋದರ ಗೌಡ ಮಾಳ, ರಾಮಯ್ಯ ಗೌಡ ಬುಡಲೂರು, ಕೆ.ಎಸ್.ಬಾಲಕೃಷ್ಣ ಕೊಯಿಲ, ಸುಭಾಸ್ ಶೆಟ್ಟಿ ಅರುವಾರ, ಸುಧೀಶ ಪಟ್ಟೆ ಪಲ್ಲಡ್ಕ, ದಿನೇಶ್ ಗೌಡ ಊರಾಜೆ, ಪ್ರವೀಣ್ ಕೊಯಿಲ ಸೇರಿದಂತೆ ಹಲವು ಮಂದಿ ಹೊರೆಕಾಣಿಕೆ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

 

LEAVE A REPLY

Please enter your comment!
Please enter your name here