ಚಿತ್ರಕಲಾ ಪರೀಕ್ಷೆ: ಹಿರೆಬಂಡಾಡಿ ಪ್ರೌಢಶಾಲೆಗೆ ಶೇ.100ಫಲಿತಾಂಶ

0

ಹಿರೆಬಂಡಾಡಿ: ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ವತಿಯಿಂದ ಮಾರ್ಚ್ ತಿಂಗಳಲ್ಲಿ ನಡೆದ 2021-22ನೇ ಸಾಲಿನ ಡ್ರಾಯಿಂಗ್ ಹೈಯರ್ ಗ್ರೇಡ್ ಪರೀಕ್ಷೆಯಲ್ಲಿ ಹಿರೆಬಂಡಾಡಿ ಸರಕಾರಿ ಪ್ರೌಢಶಾಲೆಗೆ ಶೇ.100 ಫಲಿತಾಂಶ ಬಂದಿದೆ.

                 ಭವಿಷ ಎ

 

ಲೋಹಿತ್ ಕೆ

ಶಾಲೆಯಿಂದ ಪರೀಕ್ಷೆಗೆ ಹಾಜರಾದ 28 ವಿದ್ಯಾರ್ಥಿಗಳಲ್ಲಿ ಇಬ್ಬರು ಡಿಸ್ಟಿಂಕ್ಷನ್‌ನಲ್ಲಿ,19 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ,7 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಭವಿಷ ಎ.(439) ಮತ್ತು ಲೋಹಿತ್ ಕೆ(423) ಇವರು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ ಎಂದು ಶಾಲಾ ಮುಖ್ಯಶಿಕ್ಷಕರು ತಿಳಿಸಿದ್ದಾರೆ. ಇವರಿಗೆ ಚಿತ್ರಕಲಾ ಶಿಕ್ಷಕ ಅನಿಲ್ ಕುಮಾರ್ ತರಬೇತಿ ನೀಡಿದ್ದರು.

LEAVE A REPLY

Please enter your comment!
Please enter your name here