ಅಂತರಾಷ್ಟ್ರೀಯ ಲಯನ್ಸ್ ಪ್ರಾಂತೀಯ ಸಮ್ಮೇಳನ ‘ ಹೇಮಾಂತರಂಗ’

0

  • ಹಿಂದೂ, ಮುಸ್ಲಿಂ, ಕ್ರೈಸ್ತರು ಕೂಡಿಕಟ್ಟಿದ ನಾಡು ಕರ್ನಾಟಕದ ಕರಾವಳಿ: ದಿನೇಶ್ ಅಮೀನ್ ಮಟ್ಟು

 

 

 ಚಿತ್ರ: ನವೀನ್ ರೈ ಪಂಜಳ 

 

 

ಪುತ್ತೂರು:ಸಂಘ ಸಂಸ್ಥೆಗಳು ಜನರ ಹಾಗೂ ಸಮಾಜದ ನಡುವೆ ಸಂಬಂಧವನ್ನು ವೃದ್ದಿಸುವ ಸೇತುವೆಗಳಂತಾಗಬೇಕು,ಜನರ ಪ್ರೀತಿ ವಿಶ್ವಾಸ ಇರುವ ತನಕ ನಾವಿರುತ್ತೇವೆ, ನಮ್ಮ ಸಂಸ್ಥೆಗಳು, ನಮ್ಮ ಹುದ್ದೆಗಳು ಇರುತ್ತದೆ ಎಂಬುದನ್ನು ಪ್ರತೀಯೊಬ್ಬರು ಅರಿತುಕೊಳ್ಳಬೇಕಿದೆ, ನಾವು ನಾಡಿಗೆ ಮಾದರಿಯಾಗಬೇಕೇ ವಿನ ಸಂಘರ್ಷ ಸೃಷ್ಟಿಸುವ ವ್ಯಕ್ತಿಗಳಾಗಬಾರದು, ಕರ್ನಾಟಕ ಕರಾವಳಿ ಇಂದು ಹಿಂದಿನ ಅಸ್ಮಿತೆಯನ್ನು ಕಳೆದುಕೊಂಡು ವಿಷ ಭಾವನೆಯ ನಾಡಾಗುತ್ತಿದ್ದು ಈ ಜಿಲ್ಲೆ ಹಿಂಧೂ, ಮುಸ್ಲಿಂ ಕ್ರೈಸ್ತರು ಕೂಡಿಕಟ್ಟಿದ ನಾಡು ಎಂದು ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಹೇಳಿದರು.

 


ಅವರು ತಿಂಗಳಾಡಿ ಲಕ್ಷ್ಮೀ ನಿವಾಸದಲ್ಲಿ ನಡೆದ ಅಂತರಾಷ್ಟ್ರೀಯ ಲಯನ್ಸ್ ಸಂಸ್ಥೆ ಪ್ರಾಂತೀಯ ಸಮ್ಮೇಳನ ಹೇಮಾಂತರರಂಗ ಸಮಾವೇಶದಲ್ಲಿ ಮುಖ್ಯ ಭಾಷಣ ಮಾಡಿದರು. ಸಂಘ ಸಂಸ್ಥೆಗಳು ಜನರ ಬಳಿ ಹೋಗಬೇಕಿದೆ , ಲಯನ್ಸ್ ಈ ವಿಚಾರದಲ್ಲಿ ಸಮಾಜಸ್ನೇಹಿಯಾಗಿ ಮೂಡಿಬರುತ್ತಿದೆ. ಎಲ್ಲೋ ಪಂಚಾತಾರ ಹೊಟೇಲ್ ಸಭಾಂಗಣದಲ್ಲಿ ನಡೆಯಬೇಕಿದ್ದ ಲಯನ್ಸ್ ಪ್ರಾಂತೀಯ ಸಮ್ಮೇಳನ ಇಂದು ಗ್ರಾಮೀಣ ಭಾಗದ ಮನೆಯಂಗಳದಲ್ಲಿ ನಡೆಯುತ್ತಿರುವುದು ಉತ್ತಮ ಬೆಳವಣಿಗೆಯಾಗಿದ್ದು ಮಾತ್ರವಲ್ಲದೆ ಎಲ್ಲರಿಗೂ ಮಾದರಿಯಾಗಿದೆ. ಕರಾವಳಿ ಜಿಲ್ಲೆಗಳ ಜನರು ಬುದ್ದಿವಂತರು ಎಂದು ಕರೆಯಲ್ಪಡುತ್ತಾರೆ. ಇಲ್ಲಿ ಸ್ವಾವಲಂಬಿ ಬದುಕಿಗೆ ಹೆಚ್ಚು ಒತ್ತು ಇದೆ. ಇಲ್ಲಿನ ಮಂದಿ ಸರಕಾರವನ್ನು ನಂಬಿ ಬದುಕು ಕಟ್ಟಿದವರಲ್ಲ. ಈ ಜಿಲ್ಲೆ ಸೌಹಾರ್ಧತೆಯ ಮೇಲೆ ನಿಂತಿತ್ತು ಆದರೆ ಇಂದು ಸಂಘರ್ಷಮಯ ವಾತಾವರಣ ಸೃಷ್ಟಿಯಾಗಿರುವುದು ಆತಂಕದ ವಿಚಾರವಾಗಿದೆ. ಬುದ್ದಿವಂತರ ಜಿಲ್ಲೆ ನಾಡಿಗೆ ಮಾದರಿಯಾಗಬೇಕಿತ್ತು ಆದರೆ ಆ ಕೆಲಸ ಈ ಜಿಲ್ಲೆಯ ಜನರಿಂದ ಆಗುತ್ತಿಲ್ಲ. ಇಲ್ಲಿ ಎಲ್ಲವೂ ಇದೆ ಆದರೆ ಜನರ ನೆಮ್ಮದಿಗೆ ಬೇಕಾದ ವಾತಾವರಣ ಇಲ್ಲದಾಗಿದ್ದು ಅದನ್ನು ರೂಪಿಸುವ ಕೆಲಸ ಸಂಘ ಸಂಸ್ಥೆಗಳಿಂದ ಆಗಬೇಕಿದೆ ಎಂದು ಹೇಳಿದರು.

ವಿಷ ತುಂಬಿದ ಸಮಾಜ ಸೃಷ್ಟಿಸುತ್ತಿದ್ದೇವೆ
ಇಲ್ಲಿ ಯಾರದು ಸರಿ ಯಾರದು ತಪ್ಪು ಎಂಬ ವಿಚಾರವನ್ನು ಬದಿಗೊತ್ತಿ. ಸಮಾಜವನ್ನು ಉತ್ತಮ ದಿಕ್ಕಿನೆಡೆಗೆ ಕೊಂಡೊಯ್ಯಬೇಕಾದ ಜವಾಬ್ದಾರಿ ಎಲ್ಲರ ಮೇಲೂ ಇದೆ.ಮುಂದಿನ ತಲೆಮಾರಿಗೆ ನಾವು ಉತ್ತಮ ಸಮಾಜವನ್ನು ನೀಡಬೇಕಾದ ಅಗತ್ಯವಿದೆ. ಕರಾವಳಿಯ ಸಂಸ್ಕಾರ, ಸಂಸ್ಕೃತಿ, ಪ್ರೀತಿ, ಸೌಹಾರ್ಧತೆ ಹಳಿತಪ್ಪುತ್ತಿದೆ. ಯಾರದೋ ತೃಪ್ತಿಗಾಗಿ ಯಾರೋ ಬಲಿಪಶುಗಳಾಗುತ್ತಿದ್ದಾರೆ ಎಂದು ಹೇಳಿದ ದಿನೇಶ್ ಅಮೀನ್ ಮಟ್ಟುರವರು ಕರಾವಳಿಯಲ್ಲಿ ಇಂದು ನೆಮ್ಮದಿಯಿಂದ ಪ್ರಾಣ ಬಿಡಲೂ ಆಗದಂತ ಪರಿಸ್ಥಿತಿ ನಿರ್ಮಾಣವಾಗಿರುವುದು ಭವಿಷ್ಯದ ದೃಷ್ಟಿಯಲ್ಲಿ ಆತಂಕಕಾರಿಯಾಗಿದೆ. ನಮ್ಮ ಮಕ್ಕಳು ಮುಂದೆ ಯಾವ ದಿಸೆಯಲ್ಲಿ ಹೋಗುತ್ತಾರೆ? ಅವರ ಪಾಡೇನು ಎಂಬುದನ್ನು ಪ್ರತೀಯೊಬ್ಬ ಪೋಷಕನೂ ಅವಲೋಕಿಸಬೇಕಿದೆ.ಭೃಷ್ಟತೆ ಮಿತಮೀರಿದೆ, ಮತದಾರ ಭೃಷ್ಟನಾಗುತ್ತಿರುವುದು ಶುಭ ಲಕ್ಷಣವಲ್ಲ. ಚುನಾವಣೆಯಲ್ಲಿ ಗೆದ್ದ ಬಳಿಕ ಗೆದ್ದವ ಭೃಷ್ಟಚಾರಿಯಗಿ ಸಿಕ್ಕಿ ಬಿದ್ದು ಜೈಲಿಗೆ ಹೋದರೂ ಅದೇ ಜನ ಮತ್ತೆ ಅವನನ್ನು ಆರಿಸಿ ಕಳುಹಿಸುತ್ತಿರುವುದು ಭೃಷ್ಟತೆಗೆ ದೊಡ್ಡ ಉದಾಹರಣೆಯಾಗಿದೆ.ಸುಲಭ ದಾರಿಯಲ್ಲಿ ನಾಯಕರಾಗುವ ಮಂದಿ ಸಮಾಜದಲ್ಲಿ ಹುಟ್ಟಿಕೊಂಡಿದ್ದು ಇದರಿಂದ ಸಜ್ಜನ ರಾಜಕಾರಣಿಗಳು ಮೂಲೆಗುಂಪಾಗುತ್ತಿದ್ದಾರೆ ಎಂದು ಹೇಳಿದರು.

ಯುವ ಸಮೂಹ ಪ್ರಜಾಪ್ರಭುತ್ವದ ಮೇಲಿನ ನಂಬಿಕೆಯನ್ನು ಕಳೆದುಕೊಳ್ಳುತ್ತಿದ್ದಾರೆ. ಖಾಸಗೀಕರಣದಿಂದ ಇನ್ನೊಂದು ಭಾರತ ನಿರ್ಮಾಣವಾಗಬಹುದು. ಖಾಸಗೀಕರಣ ನಮಗೆ ಈಗ ಖುಷಿ ಕೊಟ್ಟರೂ ಮುಂದಿನ ದಿನಗಳಲ್ಲಿ ಭಾರತಕ್ಕೆ ಇದು ದುರಂತ ಕಥೆಯಾಗಲಿದೆ. ನುರುದ್ಯೋಗ ಹೆಚ್ಚಾಗುವುದರೊಂದಿಗೆ ವಿದ್ಯಾವಂತರು ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿ ನಿರ್ಮಾಣವಾಗಲಿದೆ. ಸಾಹಿತ್ಯ, ಕಲೆಗಳು ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುತ್ತದೆ. ಸಮಾಜದಲ್ಲಿ ನಾವು ಉತ್ತಮರಾಗಿ ಬದುಕಿ ಇನ್ನೊಬ್ಬರಿಗೆ ಮಾದರಿ ಎನಿಸಿಕೊಳ್ಳುವಲ್ಲಿ ಸಫಲತೆಯನ್ನು ಕಾಣಬೇಕು ಎಂದು ಹೇಳಿದರು.

ಲಯನ್ಸ್ ಬಂಧುಗಳು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ; ಅನಿತಾ ಹೇಮನಾಥ ಶೆಟ್ಟಿ

ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅನಿತಾ ಹೇಮನಾಥ ಶೆಟ್ಟಿಯವರು ನಮ್ಮ ಮನೆಯ ಅಂಗಳದಲ್ಲೇ ಪ್ರಾಂತೀಯ ಸಮ್ಮೇಳನ ನಡೆಯುತ್ತಿರುವುದು ಅತ್ಯಂತ ಸಂತೋಷದ ವಿಚಾರವಾಗಿದೆ. ಹೇಮನಾಥ ಶೆಟ್ಟಿಯವರು ರಾಜಕೀಯ, ಶೈಕ್ಷಣಿಕ ಮತ್ತು ಧಾರ್ಮಿಕ ಕ್ಷೇತ್ರದಲ್ಲಿ ತನ್ನನ್ನು ತೊಡಗಿಸಿಕೊಳ್ಳುವುದರ ಮೂಲಕ ಸಮಾಜ ಸೇವೆಯ ಗುರಿಯನ್ನಿಟ್ಟುಕೊಂಡು ಲಯನ್ಸ್ ಸಂಸ್ಥೆಗೆ ಸೇರಿಕೊಂಡಿದ್ದಾರೆ. ಅವರ ಪ್ರತಿಭೆಯನ್ನು ಬೆಳಗಿಸಲು ಲಯನ್ಸ್ ಸಂಸ್ಥೆಯ ಎಲ್ಲಾ ಸದಸ್ಯರು ತುಂಬಾ ಸಹಕಾರ ನೀಡಿದ್ದರ ಪರಿಣಾಮ ಮುರೇ ವರ್ಷದಲ್ಲಿ ೬ ಕ್ಲಬ್‌ಗಳನ್ನು ಕಟ್ಟಲು ಸಾಧ್ಯವಾಗಿದೆ. ಇರುವಷ್ಟು ದಿನ ನಾವು ಸಮಾಜಕ್ಕಾಗಿ ಉತ್ತಮ ಕೆಲಸವನ್ನು ಮಾಡಬೇಕು. ನೊಂದವರ ದ್ವನಿಯಾಗಬೇಕು. ಆರ್ಥಿಕವಾಗಿ ಸಂಕಷ್ಟದಲ್ಲಿರುವ ಮಂದಿಗೆ ಶಕ್ತಿ ತುಂಬುವ ಕೆಲಸವನ್ನು ಲಯನ್ಸ್ ಸಂಸ್ಥೆಯ ಮೂಲಕ ನೀಡಲಾಗುತ್ತಿದೆ. ಲಯನ್ಸ್‌ನ ಎಲ್ಲಾ ಸದಸ್ಯರುಗಳು ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ಬಡವರ ಸಮಸ್ಯೆಗೆ ಪರಿಹಾರ ನೀಡುತ್ತಿರುವುದು ಅತ್ಯಂತ ಹೆಮ್ಮೆಯ ವಿಚಾರವಾಗಿದೆ. ಹೇಮನಾಥ ಶೆಟ್ಟಿಯವರಿಗೆ ಜನರ ಮೇಲಿರುವ ಪ್ರೀತಿ ವಿಶ್ವಸ ಅವರನ್ನು ಉತ್ತುಂಗಕ್ಕೆ ಕೊಂಡೊಯ್ದಿದೆ ಎಂದು ಹೇಳಿದರು.ಸಮಾಜ ಸೇವೆಯಲ್ಲಿ ಜನರ ವಿಶ್ವಾಸಗಳಿಸಿರುವ ಹೇಮನಾಥ ಶೆಟ್ಟಿಯವರು ಮುಂದಿನ ದಿನಗಳಲ್ಲಿ ರಾಜಕೀಯವಾಗಿಯೂ ಜನರ ಪ್ರೀತಿಗಳಿಸಲಿದ್ದಾರೆ ಎಂದು ಹೇಳಿದರು.

 


ಸಮಾಜ ಅನಾಹುತಕಾರಿ ಹಂತಕ್ಕೆ ತಲುಪಿದೆ; ವಿವೇಕಾನಂದ ಎಚ್ ಕೆ
ಸಮಾಜದಲ್ಲಿ ಇಂದು ಮಾನವೀಯ ಮೌಲ್ಯಗಳ ಕುಸಿತಕ್ಕೊಳಗಾಗಿದೆ, ಸಮಾಜದಲ್ಲಿ ಸಾಮರಸ್ಯವನ್ನು ಸೃಷ್ಟಿಸದೇ ಇದ್ದಲ್ಲಿ ಸಮಾಜ ಅನಾಹುತಕಾರಿ ಹಂತಕ್ಕೆ ತಲುಪಲಿದೆ ಎಂದು ಜ್ಞಾನ ಬಿಕ್ಷು ವಿವೇಕಾನಂದ ಎಚ್ ಕೆ ಹೇಳಿದರು.

ಎಲ್ಲಾ ಕ್ಷೆತ್ರಗಳು ವ್ಯಾಪಾರೀಕರಣಗೊಂಡಿದೆ, ನಾವು ಸಮಾಜದಲ್ಲಿ ತಿಳುವಳಿಕೆ ಉಳ್ಳವರಾಗಿ ಬಾಳಬೇಕು. ತಿಳುವಳಿಕೆಯೇ ನಮ್ಮ ನಡವಳಿಕೆಯಾಗಬೇಕು. ಸಮಾಜದಲ್ಲಿ ಬೆಂಕಿ ಹಚ್ಚು ಖುಷಿಪಡುವ ಮಂದಿ ನಮ್ಮೊಳಗಿದ್ದಾರೆ ಅವರ ಬಗ್ಗೆ ಅತ್ಯಂತ ಎಚ್ಚರದಿಂದ ಇರಬೇಕು. ನಾವು ನೆಮ್ಮದಿಯಾಗಿ ಬದುಕಬೇಕಾದರೆ ಸಮಾಜದಲ್ಲಿ ನೆಮ್ಮದಿಯ ವಾತಾವರಣ ಇರಬೇಕು. ಸಮಾಜದಲ್ಲಿರುವ ಒಳ್ಳೆಯವರನ್ನು ಗೌರವಿಸಿ ಕೆಟ್ಟವರನ್ನು ತಿರಸ್ಕಾರ ಮಾಡುವ ಧೈರ್ಯ ನಮ್ಮಲ್ಲಿರಬೇಕು. ಪರಸ್ಪರ ಒಗ್ಗಟ್ಟಿನಿಂದ ಬದುಕುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ನಾವು ಕಟಿ ಬದ್ದರಾಗಬೇಕಿದೆ ಎಂದು ಹೇಳಿದರು.

ಸಮಾಜ ಸೇವೆಯಿಂದ ಆತ್ಮಸಂತೃಪ್ತಿ; ಹೇಮನಾಥ ಶೆಟ್ಟಿ
ಸಮ್ಮೇಳನದ ರೂವಾರಿ ಲಯನ್ಸ್ ಪ್ರಾಂತೀಯ ಅಧ್ಯಕ್ಷರೂ ಸಮ್ಮೇಳನದ ಅಧ್ಯಕ್ಷರೂ ಆದ ಕಾವು ಹೇಮನಾಥ ಶೆಟ್ಟಿ ಮಾತನಾಡಿ ಸಮಾಜ ಸೇವೆ ಮಾಡಲು ನೂರಾರು ದಾರಿಗಳಿವೆ, ಲಯನ್ಸ್ ಸೇರಿದ ಬಳಿಕ ಇನ್ನಷ್ಟು ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗಿದ್ದು ಇದರಲ್ಲಿ ಆತ್ಮ ಸಂತೃಪ್ತಿಹೊಂದಿದ್ದೇನೆ. ಮೂರೇ ವರ್ಷದಲ್ಲಿ ಮೂರು ಕ್ಲಬ್‌ಗಳನ್ನು ಮಾಡಲು ಸಾಧ್ಯವಾಗಿದ್ದರೆ ಅದಕ್ಕೆ ಕ್ಲಬ್‌ನ ಸದಸ್ಯರ ಸಹಕಾರವೇ ಕಾರಣವಾಗಿದೆ.ಲಯನ್ಸ್ ಬಂಧುಗಳ ಆತ್ಮೀಯ ಸಲಹೆ, ಸೂಚನೆಗಳು ನನ್ನನ್ನು ಇಂದು ಎತ್ತರಕ್ಕೆ ಬೆಳೆಸಿದೆ ಎಂದು ಹೇಳಿದರು.

ಲಯನ್ಸ್ -ರೋಟರೀ ಸಮಾಜದ ಎರಡು ಕಣ್ಣುಗಳು: ಸವಣೂರು ಸೀತಾರಾಮ ರೈ
ಲಯನ್ಸ್ ಮತ್ತು ರೋಟರೀ ಸಂಸ್ಥೆಗಳು ಸಮಾಜದ ಎರಡು ಕಣ್ಣುಗಳಿದ್ದಂತೆ. ಸಮಾಜದಲ್ಲಿ ನೊಂದವರ ಸೇವೆಯಲ್ಲಿ ತನ್ನನ್ನು ತೊಡಗಿಸಿಕೊಳ್ಳುವದರ ಮೂಲಕ ನ್ಯಾಯ ಒದಗಿಸುವ ಕಾರ್ಯವನ್ನು ಮಾಡುತ್ತಿದ್ದಾರೆ. ಲಯನ್ಸ್ ಪ್ರಾಂತೀಯ ಸಮ್ಮೇಳನದಲ್ಲಿ ಸಮಾಜ ಸೇವೆ ಮಾಡಿದ ಹಲವು ಮಂದಿ ಸಾಧಕರನ್ನು ಸನ್ಮಾನ ಮಾಡಿದ್ದೀರಿ ಇದಕ್ಕೆ ಸಂಸ್ಥೆಗೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.

ವೇದಿಕೆಯಲ್ಲಿ ನಿಕಟಪೂರ್ವ ಜಿಲ್ಲಾ ಗವರ್ನರ್ ಗೀತಾಪ್ರಕಾಶ್, ಎಂ ಬಿ ಸದಾಶಿವ, ಲಯನ್ ಮಾರ್ಗದರ್ಶಕರುಗಳಾದ ಸುದರ್ಶನ್ ಪಡಿಯಾರ್, ಜಯಪ್ರಕಾಶ್ ರೈ, ಆನಂದ ರೈ ಪಿ, ಗಂಗಾಧರ್ ಎಸ್, ವಲಯ ಅಧ್ಯಕ್ಷರುಗಳಾದ ಶಿವಪ್ರಸಾದ್ ಶೆಟ್ಟಿ ಎನ್, ವೆಂಕಪ್ಪ ಗೌಡ ಕೇನಾಜೆ, ಅತಿಥೇಯ ಪುತ್ತೂರು-ಕಾವು ಲಯನ್ಸ್ ಕ್ಲಬ್‌ನ ಅಧ್ಯಕ್ಷರಾದ ಪಾವನರಾಮ ಬಿ, ಕಾರ್ಯದರ್ಶಿ ದೇವಣ್ಣ ರೈ ಎಂ, ಕೋಶಾಧಿಕಾರಿ ಮಹೇಶ್ ರೈ ಅಂಕೊತ್ತಿಮಾರ್, ಪುತ್ತೂರು ಲಯನ್ಸ್ ಕ್ಲಬ್ ಅಧ್ಯಕ್ಷರಾದ ರಾಜೇಶ್ ಶೆಟ್ಟಿ, ಪುತ್ತೂರ‍್ದಮುತ್ತು ಲಯನ್ಸ್ ಕ್ಲಬ್ ಅಧ್ಯಕ್ಷ ಲ್ಯಾನ್ಸಿ ಮಸ್ಕರೇನಸ್, ಪುತ್ತೂರು ಪಾಣಾಜೆ ಲಯನ್ಸ್ ಕ್ಲಬ್ ಅಧ್ಯಕ್ಷ ನವೀನ್ ಕುಮಾರ್ ರೈ, ಲಯನ್ಸ್ ವಿಟ್ಲ ಟಿಸಿ ಅಧ್ಯಕ್ಷ ಸಂದೇಶ್ ಶೆಟ್ಟಿ, ಆಲಂಕಾರು ದುರ್ಗಾಂಬಾ ಲಯನ್ಸ್ ಕ್ಲಬ್ ಅಧ್ಯಕ್ಷ ದಯಾನಂದ ರೈ ಮನವಳಿಕೆ, ಸುಳ್ಯ ಕ್ಲಬ್ ಅದ್ಯಕ್ಷ ಆನಂದ ಪೂಜಾರಿ, ಸಂಪಾಜೆ ಕ್ಲಬ್ ಅಧ್ಯಕ್ಷೆ ಟೀನಾ ಎನ್ ದೇವಿಚರಣ್, ಪಂಜ ಕ್ಲಬ್ ಅಧ್ಯಕ್ಷ ಸಂತೋಷ್‌ಜಾಕೆ, ಗುತ್ತಿಗಾರು ಕ್ಲಬ್ ಅಧ್ಯಕ್ಷ ಲಿಜೋಜೋಶ್, ಕಡಬ ಕ್ಲಬ್ ಅಧ್ಯಕ್ಷ ದಿನೇಶ್ ಆಚಾರ್ಯ ಕೆ ಸ್, ಕುಕ್ಕೆಸುಬ್ರಹ್ಮಣ್ಯ ಕ್ಲಬ್ ಅಧ್ಯಕ್ಷ ಪ್ರ. ರಂಗಯ್ಯ ಶೆಟ್ಟಿಗಾರ್, ಪುತ್ತೂರ‍್ದ ಮುತ್ತು ಲಿಯೋ ಕ್ಲಬ್ ಅಧ್ಯಕ್ಷೆ ರಂಜಿತಾ ಶೆಟ್ಟಿ ಉಪಸ್ಥಿತರಿದ್ದರು. ಸಮ್ಮೇಳನದ ಅಧ್ಯಕ್ಷರಾದ ಗಣೇಶ್ ಶೆಟ್ಟಿ ಸ್ವಾಗತಿಸಿದರು. ಸಮ್ಮೇಳನದ ಕಾರ್ಯದರ್ಶಿ ಹರೇಕೃಷ್ಣ ಬಿ, ಸಮ್ಮೇಳನದ ಕೋಶಾಧಿಕಾರಿ ಮೋಹನ್ ನಯ್ಕ್ ಎಸ್ ವಿವಿಧ ಕಾರ್ಯಕ್ರಮ ನಿರೂಪಿಸಿದರು.

ಸಮ್ಮೇಳನದ ವಿಶೇಷತೆಗಳು
ಮಧ್ಯಾಹ್ನ ೪. ಗಂಟೆಗೆ ಕಾರ್ಯಕ್ರಮ ಪ್ರಾರಂಭಗೊಂಡಿತ್ತು. ೪ ಗಂಟೆಯಿಂದಲೇ ತಂಪು ಪಾನೀಯದ ವ್ಯವಸ್ಥೆ ಮಾಡಲಾಗಿತ್ತು. ಸಂಜೆ ಚಾ, ತಿಂಡಿ ವ್ಯವಸ್ಥೆ ಮಾಡಲಾಗಿತ್ತು. ರಾತ್ರಿ ೯ ಗಂಟೆಯ ವೇಳೆ ಭರ್ಜರಿ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು. ಸಸ್ಯಾಹಾರಿ ಮತ್ತು ಮಾಂಸಾಹಾರಿಗಳಿಗೆ ಪ್ರತ್ಯೇಕ ಭೂರೀ ಭೋಜನದ ವ್ಯವಸ್ಥೆಯನ್ನು ಮಾಡಲಾಗಿತ್ತು. ವಿವಿಧ ಬಗೆಯ ಬಾಳೆ ಹಣ್ಣುಗಳು, ಐಸ್ ಕ್ರೀಂ ಐಟಂಗಳು ಬಹಳ ಜೋರಾಗಿಯೇ ಇತ್ತು.
೧೨ ಕ್ಲಬ್‌ಗಳ ಸದಸ್ಯರು ಪ್ರತ್ಯೇಕ ಪ್ರತ್ಯೇಕವಾಗಿ ಆಗಮಿಸಿ ಬ್ಯಾನರ್ ಪ್ರದರ್ಶನ ನಡೆಸಿ ಪ್ರಾಂತೀಯ ಅಧ್ಯಕ್ಷರಿಂದ ಗೌರವ ವಂದನೆ ಹಾಗೂ ಸ್ಮರಣಿಕೆಗಳನ್ನು ಸ್ವೀಕರಿಸಿದರು. ಕಾರ್ಯಕ್ರಮ ಅಚ್ಚುಕಟ್ಟಾಗಿ ಶಿಸ್ತು ಬದ್ದವಾಗಿ ನಡೆಯಿತು. ಉದ್ಘಾಟನೆಯ ಮೊದಲು ವೇದಿಕೆಯಲ್ಲೇ ದ್ವಜಾರೋಹಣ ನಡೆಯಿತು. ಬಳಿಕ ರಾಷ್ಟ್ರಗೀತೆಯನ್ನು ಹಾಡಲಾಯಿತು. ಸಭಿಕರಿಗೆ ತಂಪು ಪಾನೀಯ ಹಾಗೂ ಡ್ರೈಫ್ರುಟ್ಸ್ ನೀಡಲಾಯಿತು. ಸಭಾ ಕಾರ್ಯಕ್ರಮದ ಮಧ್ಯೆ ಲಯನ್ಸ್ ಸದಸ್ಯರಿಂದ ನೃತ್ಯಗಳು ನಡೆಯಿತು. ಸಾಂಸ್ಕೃತಿಕ ಮನೋರಂಜನಾ ಕಾರ್ಯಕ್ರಮ ಮತ್ತು ಸಂಗೀತ ವೇದಿಕೆಯನ್ನೂ ಏರ್ಪಡಿಸಲಾಗಿತ್ತು.

ಸಾಧಕರಿಗೆ ಸನ್ಮಾನ
ವಿವಿಧ ಕ್ಷೆತ್ರದಲ್ಲಿಉ ಸಾಧನೆ ಮಾಡಿರುವ ಏಳುಮಂದಿಯನ್ನು ಸಮ್ಮೇಳನದಲ್ಲಿ ಸನ್ಮಾನಿಸಲಾಯಿತು. ಮಾಜಿ ಸಚಿವ ಬಿ ರಮಾನಾಥ ರೈ ಸನ್ಮಾನಿಸಿದರು. ಶೈಕ್ಷಣಿಕ , ಸಹಕಾರ ಕ್ಷೇತ್ರದಲ್ಲಿ ಸವಣೂರು ಕೆ ಸೀತಾರಾಮ ರಐ, ಜ್ಞಾನ ಬಿಕ್ಷು ವಿವೇಕಾನಂದ ಎಚ್ ಕೆ, ಕೃಷಿಯಲ್ಲಿ ಸುಭಾಷ್ ರೈ ಕಡಮಜಲು, ಕ್ರೀಡೆಯಲ್ಲಿ ಪ್ರಶಾಂತ್ ರೈ ಕೈಕಾರ, ಸಮಾಜ ಹಾಗೂ ಧಾರ್ಮಿಕ ಸೇವೆಯಲ್ಲಿ ಮಿತ್ರಂಪಾಡಿ ಜಯರಾಮ ರಐ ಅಬುದಾಬಿ, ವೈದ್ಯಕೀಯ ಡಾ. ಅಜಯ್, ಜಾಗೂ ಘನವೆತ್ತ ಶಿಕ್ಷಣದಲ್ಲಿ ಕು. ಹಸ್ತಾ ಶೆಟ್ಟಿಯವರನ್ನು ಶಾಲು ಹೊದಿಸಿ, ಸ್ಮರಣಿಕೆ ಹಾಗೂ ಫಲಪುಷ್ಪಗಳನ್ನು ನೀಡಿ ಗೌರವಿಸಲಾಯಿತು.

LEAVE A REPLY

Please enter your comment!
Please enter your name here