ಬಡಗನ್ನೂರು ಗ್ರಾ.ಪಂ ಸಾಮಾನ್ಯ ಸಭೆ

0

ಬಡಗನ್ನೂರುಃ  15 ಹಣಕಾಸು ಯೋಜನೆಯ 202೧ -22 ಸಾಲಿನ ಕಾಮಗಾರಿಗಳನ್ನು ಏಪ್ರಿಲ್ 15 ರೊಳಗೆ ಪೂರ್ಣ ಗೊಳಿಸುವ ಬಗ್ಗೆ ಬಡಗನ್ನೂರು ಗ್ರಾ.ಪಂ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಸಭೆಯು ಗ್ರಾ.ಪಂ ಅಧ್ಯಕ್ಷೆ ಶ್ರೀಮತಿ ಕೆ ರವರ ಅಧ್ಯಕ್ಷತೆಯಲ್ಲಿ ಮಾ.29 ರಂದು ಗ್ರಾ.ಪಂ ಸಭಾಂಗಣದಲ್ಲಿ ನಡೆಯಿತು.
ಬಡಗನ್ನೂರು ಗ್ರಾ.ಪಂ ನ 15 ಹಣಕಾಸು ಯೋಜನೆಯ 2021 -22 ನೇ ಸಾಲಿನಲ್ಲಿ ಕ್ರಿಯಾ ಯೋಜನೆಯಲ್ಲಿ ನಮೊದಿಸಿದ  ಕಾಮಗಾರಿ ಅಪೂರ್ಣ ಗೊಂಡಿದೆ ಮುಂದೆ ಮಳೆಗಾಲ ಕೂಡಾ ಸಮೀಪಿಸುತ್ತಿರುವುದರಿಂದ  ಎಲ್ಲಾ ಕಾಮಗಾರಿಗಳು  ಏ.15 ರೊಳಗೆ ಮುಗಿಸಬೇಕು ಇಲ್ಲದ ಪಕ್ಷದಲ್ಲಿ  ಕಾಮಗಾರಿಯನ್ನು  ಬೇರೊಬ್ಬ ಗುತ್ತಿಗೆಗಾರರಿಗೆ ನಿಡಿ ಕಾಮಗಾರಿ ಪುರ್ಣಗೊಳಿಸುವ ಬಗ್ಗೆ  ಉಪಾಧ್ಯಕ್ಷ ಸಂತೋಷ್ ಆಳ್ವ ವಿಷಯ ಪ್ರಸ್ತಾಪಿಸಿದರು. ಈ ಬಗ್ಗೆ  ಪಿಡಿಒ ವಸೀಮ ಗಂಧದ  ಗುತ್ತಿಗೆಗಾರರಿಗೆ ನೋಟಿಸು ಮಾಡುವ ಬಳಿಕ ಈ ಬಗ್ಗೆ ಕ್ರಮ ಕೈಗೊಳ್ಳುವ ಎಂದು ಉತ್ತರಿಸಿದರು.
ಆಡಳಿತ ಪಕ್ಷ ಹಾಗೂ ಪ್ರತಿಪಕ್ಕದ ಸದಸ್ಯರೋಳಗೆ ಮಾತಿನ ಚಕಮಕಿ:-
ಪಂಚಾಯತ್ ವ್ಯವಸ್ಥೆಯಲ್ಲಿ  ಕ್ರಿಯಾ ಯೋಜನೆಯಲ್ಲಿ ಅಳವಡಿಸಿರುವ  ಯಾವುದೇ ಕಾಮಗಾರಿ ನಡೆಸುವ ಸಂಧರ್ಭದಲ್ಲಿ  ಅಯಾ ವಾರ್ಡ್ ಸದಸ್ಯರ ಗಮನಕ್ಕೆ ತಂದು ಕಾಮಗಾರಿ ನಡೆಸುವುದು ಆರೋಗ್ಯಕರ ಬೆಳವಣಿಗೆ. ಆದರೆ ಇಲ್ಲಿ ಕೇವಲ ವ್ಯಕ್ತಿ ಮತ್ತು ಪಕ್ಷವನ್ನು ಪ್ರತಿಬಿಂಬಿಸುವ ಕೆಲಸ ನಡೆಯುತ್ತಿದೆ  ಮೂರನೇ ವಾರ್ಡನ  ಪಲ್ಲತ್ತಾರು- ಮೇಗಿನಮನೆ ಸಂಪರ್ಕ ರಸ್ತಗೆ ಮೋರಿ ಅಳವಡಿಸುವ ಸಂದರ್ಭದಲ್ಲಿ ಅದೇ ವಾರ್ಡ್ ನ  ಪ್ರತಿಪಕ್ಷದ  ಸದಸ್ಯರ ಗಮನಕ್ಕೆ ಬಾರದೆ ಕಾಮಗಾರಿ ನಡೆಸಿದ ಬಗ್ಗೆ ಪ್ರತಿಪಕ್ಷ ಸದಸ್ಯ ಧರ್ಮೇಂದ್ರ ಕುಲಾಲ್ ವಿಷಯ ಪ್ರಸ್ತಾಪಿಸಿ  ಕಾಮಗಾರಿ ನಡೆಸುವ ಸಂದರ್ಭದಲ್ಲಿ   ಅಯಾ ವಾರ್ಡ್ ನ ಎಲ್ಲಾ ಸದಸ್ಯರಿಗೆ   ಗೊತ್ತಿರಬೇಕಾ ! ಅಥವಾ ಆಡಳಿತ ಪಕ್ಷದ ಸದಸ್ಯರಿಗೆ ಮಾತ್ರ ಗೊತ್ತಿದ್ದರೆ ಸಾಕ ಎಂದು ಪ್ರಶ್ನಿಸಿದರು. ಈ ಬಗ್ಗೆ ಮಧ್ಯಪ್ರವೇಶಿಸಿದ ಆಡಳಿತ ಪಕ್ಷದ ಸದಸ್ಯ ವೆಂಕಟೇಶ್ ಸುಳ್ಯಪದವು ನಮ್ಮಲ್ಲಿ ಬಹುಮತ ಇದೆ ನಾವು  ಕಾಮಗಾರಿ ಮಾಡಿಯೇ ಮಾಡುತ್ತೇವೆ ಎಂದು ಹೇಳಿದರು. ಈ ಬಗ್ಗೆ ಪ್ರತಿಪಕ್ಷ ಸದಸ್ಯ ರವಿರಾಜ ರೈ ಸಜಂಕಾಡಿ ಮಾತನಾಡಿ  ಯಾವುದೇ ಶಾಸಕರು ವಿಧಾನ ಮಂಡಲ ಕಲಾಪದಲ್ಲೂ ನಾವು ನಮ್ಮದು ಎಂದು ಪಕ್ಕವನ್ನು ಪ್ರತಿಬಿಂಬಿಸುವ ಕೆಲಸ ಮಾಡುತ್ತಿಲ್ಲ. ಮತ್ತೆ ನೀನು ಯಾವ ಲೆಕ್ಕ ಬಹುಮತ ಇದೆಯಾದರೆ  ನಮಗೆ ತಿಳಿಸದೆ ಹೇಗೆ  ಕಾಮಗಾರಿ   ನಡೆಸುತ್ತೀರಿ ನೋಡುವ ಎಂದು ಆಕ್ರೋಶ.    ವ್ಯಕ್ತಪಡಿಸಿದರು. ಇವರೊಂದಿಗೆ ಕಲಾವತಿ  ಪಟ್ಜಡ್ಕ ಧ್ವನಿ ಗೂಡಿಸಿದರು. 
 ಸಭೆಯಲ್ಲಿ ಸದಸ್ಯರಾದ ರವಿರಾಜ ರೈ ಸಜಂಕಾಡಿ, ಧರ್ಮೇಂದ್ರ ಕುಲಾಲ್ ಪದಡ್ಕ, ವಸಂತ ಗೌಡ ಕನ್ನಯ, ವೆಂಕಟೇಶ್ ಸುಳ್ಯಪದವು, ಲಿಂಗಪ್ಪ ಗೌಡ ಮುಂಡೋಳೆ, ಕುಮಾರ್ ಅಂಬಟೆಮೂಲೆ, ರವಿಚಂದ್ರ ಸಾರೆಪ್ಪಾಡಿ, ಪದ್ಮನಾಭ ಕನ್ಡಡ್ಕ, ಕಲಾವತಿ ಗೌಡ ಪಟ್ಲಡ್ಕ, ಜ್ಯೋತಿ ಅಂಬಟೆಮೂಲೆ, ಸುಜನಾ ಎಂ, ಪುಷ್ಪಲತಾ ದೇಚಕಜೆ, ಹೇಮಾವತಿ ಮೂಂಡೋಳೆ, ದಮಯಂತಿ ಕೆಮನಡ್ಕ, ಸುಶೀಲಾ ಪಕ್ಯೋಡು, ಉಪಸ್ಥಿತರಿದ್ದರು.
ಗ್ರಾ.ಪಂ ಗುಮಾಸ್ತ ಜಯಾಪ್ರಸಾದ ರೈ ಕುತ್ಯಾಳ ಸ್ವಾಗತಿಸಿ, ವಂದಿಸಿದರು.ಪಿಡಿಒ ವಸೀಮ ಗಂಧದ ಸರಕಾರಿ ಸುತೋಲೆ ಓದಿದರು.ಪಂ ಸಿಬ್ಬಂದಿಗಳು ಸಹಕರಿಸಿದರು.
ಚಿತ್ರ ಬಡಗನ್ನೂರು ಗ್ರಾ.ಪಂ ಸಭೆಯು ಗ್ರಾ.ಪಂ ಅಧ್ಯಕ್ಷೆ ಶ್ರೀಮತಿ ಕೆ ರವರ ಅಧ್ಯಕ್ಷತೆಯಲ್ಲಿ ನಡೆಯಿತು.

LEAVE A REPLY

Please enter your comment!
Please enter your name here