ಸಹ್ಯಾದ್ರಿಯಲ್ಲಿ ವಿಜ್ಞಾನ ಯೋಜನೆ ಸ್ಪರ್ಧೆ: ಶಾಂತಿನಗರ ಸರಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳ ತಂಡಕ್ಕೆ ಬಹುಮಾನ

0

ಪುತ್ತೂರು: ಮಂಗಳೂರಿನ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜ್‌ನಲ್ಲಿ ನಡೆದ ವಿಜ್ಞಾನ ಯೋಜನೆ `SSTH 2k21′ ’ ಸ್ಪರ್ಧೆಯಲ್ಲಿ ಕೋಡಿಂಬಾಡಿಯ ಶಾಂತಿನಗರ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳ ವಿಜ್ಞಾನ ಯೋಜನೆಗೆ ಬಹುಮಾನ ಲಭಿಸಿದೆ. ವಿಜ್ಞಾನ ಯೋಜನೆ ಸ್ಪರ್ಧೆಯಲ್ಲಿ ಶಾಂತಿನಗರ ಸರಕಾರಿ ಪ್ರೌಢಶಾಲೆಯ 7 ತಂಡಗಳಲ್ಲಿ 13 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪ್ರತಿ ತಂಡಗಳು ನಗದು ಬಹುಮಾನ ಗಳಿಸಿದ್ದು 2 ತಂಡಗಳಿಗೆ ಸಮಾಧಾನಕರ ಬಹುಮಾನ ಲಭಿಸಿದೆ. ವಿದ್ಯಾರ್ಥಿಗಳ ಈ ಯೋಜನೆಗಳಿಗೆ ಕು. ಚಂದನ ಮತ್ತು ಕು. ಕುಂಕುಮ ಮಾರ್ಗದರ್ಶನ ನೀಡಿದ್ದರು. ಸಹ್ಯಾದ್ರಿ ಕಾಲೇಜಿನ ನಿತೇಶ್ ಹಾಗೂ ದಿವಿತ್ ಸಹಕರಿಸಿದ್ದರು.

Bio spray ನಲ್ಲಿ ತಮಿಝಾ (ಖತೀಜ ಮತ್ತು ರಫೀಕ್‌ರವರ ಪುತ್ರಿ), ಪ್ರಜ್ಞಾ ಬಿ. ಎಸ್(ಪುಷ್ಪ. ಬಿ ಮತ್ತು ಸತೀಶ್ ನಾಯ್ಕರವರ ಪುತ್ರಿ), Organic cockroach replantನಲ್ಲಿ ಕೀರ್ತನ್. ಡಿ. ಕೆ (ವಸಂತಿ ಮತ್ತು ಕೆ. ಧರ್ಣಪ್ಪ ಗೌಡರವರ ಪುತ್ರ), ಶ್ರಾವಣ್. ಎಮ್ (ಪೂವಮ್ಮ ಮತ್ತು ರಂಗಪ್ಪರವರ ಪುತ್ರ), Solar grass cutterನಲ್ಲಿ ಅಕ್ಷಯ್ ಕುಮಾರ್ ವೈ. (ಯಶೋದ ಮತ್ತು ಸೇಸಪ್ಪರವರ ಪುತ್ರ), ಶಿವಕಮಾರ್ (ಹೊನ್ನಮ್ಮ ಮತ್ತು ಆನಂದರವರ ಪುತ್ರ), ವಿದ್ಯಾರ್ಥಿ ಮಿತ್ರ ಕರೆಹಲಗೆ (black board)ಧೀರಜ್ (ಸುಶೀಲ ಮತ್ತು ಎಲ್ಯಣ್ಣ ಗೌಡರವರ ಪುತ್ರ),Bio weedi cideನಲ್ಲಿ ಭವಿಷ್ಯ(ಸುಮಿತ್ರ ಮತ್ತು ಸುರೇಶ ಆಚಾರ್ಯರವರ ಪುತ್ರಿ), ಈಮಶ್ರೀ(ಕಮಲ ಮತ್ತು ನೋಣಯ್ಯ ಪೂಜಾರಿಯವರ ಪುತ್ರಿ), Organic dee fog product vehicles windows ನಲ್ಲಿ ಕೌಶಿಕ್ (ಕಮಲ ಮತ್ತು ಕಾಂತಪ್ಪರವರ ಪುತ್ರ), ಯಕ್ಷಿತ್ (ನೀಲಾವತಿ ಮತ್ತು ರಾಮಣ್ಣರವರ ಪುತ್ರ)Sun chacing solar baced arconaite driar ನಲ್ಲಿ ಜಿತನ್(ಭವಾನಿ ಮತ್ತು ಕೃಷ್ಣಪ್ಪರವರ ಪುತ್ರ), ಸುಶಾಂತ್(ಶ್ವೇತ ಮತ್ತು ಶಾಂತಕುಮಾರರವರ ಪುತ್ರ)ರವರು ಬಹುಮಾನ ಗಳಿಸಿದ್ದಾರೆ ಎಂದು ಶಾಲಾ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here