ಆತೂರು ಸದಾಶಿವ ಮಹಾಗಣಪತಿ ದೇವಸ್ಥಾನದ ಜಾತ್ರಾ ಮಹೋತ್ಸವ-ದರ್ಶನ ಬಲಿ

0

 

 

ರಾಮಕುಂಜ: ಕಡಬ ತಾಲೂಕು ಕೊಯಿಲ ಗ್ರಾಮದ ಆತೂರು ಶ್ರೀ ಸದಾಶಿವ ಮಹಾಗಣಪತಿ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವದ ಅಂಗವಾಗಿ ಮಾ.31ರಂದು ಬೆಳಿಗ್ಗೆ ದರ್ಶನ ಬಲಿ ನಡೆಯಿತು.

ಮಾ.29ರಂದು ರಾತ್ರಿ ಧ್ವಜಾರೋಹಣದೊಂದಿಗೆ ವರ್ಷಾವಧಿ ಜಾತ್ರಾ ಮಹೋತ್ಸವ ಆರಂಭಗೊಂಡಿತ್ತು. ಬಳಿಕ ದೇವರ ಬಲಿ ಹೊರಟು ಉತ್ಸವ ನಡೆಯಿತು. ಮಾ.30ರಂದು ರಾತ್ರಿ ಬಲಿ ಹೊರಟು ಉತ್ಸವ, ಆತೂರಿನಿಂದ ಗೋಕುಲನಗರ, ಕೆ.ಸಿ.ಫಾರ್ಮ್ ತನಕ ಪೇಟೆ ಸವಾರಿ, ಕಟ್ಟೆಪೂಜೆಗಳು ನಡೆಯಿತು. ಮಾ.31ರಂದು ಬೆಳಿಗ್ಗೆ ಉತ್ಸವ ಆರಂಭಗೊಂಡು ಮಧ್ಯಾಹ್ನ ದರ್ಶನ ಬಲಿ, ಅಂಗಣದಲ್ಲಿ ದೇವರ ಬಂಡಿ ರಥೋತ್ಸವ, ಬಟ್ಟಲು ಕಾಣಿಕೆ, ನಂತರ ಮಹಾಪೂಜೆ, ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ರಾತ್ರಿ ಬಲಿ ಹೊರಟು ಉತ್ಸವ, ಆನೆಗುಂಡಿಯವರೆಗೆ ಪೇಟೆ ಸವಾರಿ, ಆನೆಗುಂಡಿಯಲ್ಲಿ ಕೆರೆ ಉತ್ಸವ, ಕಟ್ಟೆಪೂಜೆ, ಆನೆಗುಂಡಿ ಬೂಡಿನಿಂದ ದುಗಲಾಯಿ ದೈವದ ಭಂಡಾರ ತರುವುದು, ದೇವಸ್ಥಾನದಲ್ಲಿ ರಂಗಪೂಜೆ ನಡೆಯಿತು. ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಉತ್ಸವಾದಿಗಳು ನಡೆಯಿತು. ಪವಿತ್ರಪಾಣಿ ವೆಂಕಟ್ರಮಣ ಕುದ್ರೆತ್ತಾಯ, ಅರ್ಚಕ ವಿಷ್ಣುಮೂರ್ತಿ ಬಡೆಕ್ಕಿಲಾಯರವರು ಪೂಜಾ ವಿಧಿ ವಿಧಾನಗಳಲ್ಲಿ ಸಹಕರಿಸಿದರು.

ವ್ಯವಸ್ಥಾಪನಾ ಸಮಿತಿ ಯದುಶ್ರೀ ಆನೆಗುಂಡಿ, ಸದಸ್ಯರುಗಳಾದ ಬಾಲಕೃಷ್ಣ ನಾಯ್ಕ ಏಣಿತಡ್ಕ, ವನಜ ಪಲ್ಲಡ್ಕ, ಮೋಹಿನಿ ಪಾನ್ಯೇಲು, ಮುರಳಿಕೃಷ್ಣ ಕೆ.ಬಡಿಲ, ವಿನಯಕುಮಾರ್ ರೈ ಕೊಯಿಲ ಪಟ್ಟೆ, ಶ್ರೀರಾಮ ಕೆಮ್ಮಾರ, ಸಂಜೀವ ಗೌಡ ಕೊನೆಮಜಲು, ಉತ್ಸವ ಸಮಿತಿ ಅಧ್ಯಕ್ಷ ಪಾಂಡೇಲುಗುತ್ತು ಚಂದ್ರಹಾಸ ರೈ ಬುಡಲೂರು, ಪ್ರಧಾನ ಕಾರ್ಯದರ್ಶಿ ವಿನೋದ್ ಕುಮಾರ್ ಪಲ್ಲಡ್ಕ, ಉಪಾಧ್ಯಕ್ಷರಾದ ಮೋಹನದಾಸ ಶೆಟ್ಟಿ ಬಡಿಲ, ರಾಜೀವ ಗೌಡ ಪೊಸಲಕ್ಕೆ, ದಯಾನಂದ ದಾಸ್ ಪಾಣಿಗ, ರುಕ್ಮಯ ಪಲ್ಲಡ್ಕ, ಕಾರ್ಯದರ್ಶಿಗಳಾದ ಶಾಂತರಾಮ ಬೇಂಗದಪಡ್ಪು, ರಮೇಶ ಪೆರ್ಲ, ಅಭಿವೃದ್ಧಿ ಸಮಿತಿ ಅಧ್ಯಕ್ಷ ಶೀನಪ್ಪ ಗೌಡ ವಳಕಡಮ, ಉಪಾಧ್ಯಕ್ಷರಾದ ಜಗನ್ನಾಥ ಶೆಟ್ಟಿ ಕಾರೆಗುಡ್ಡೆ, ಭವಾನಿ ಶಂಕರ್ ಪರಂಗಾಜೆ, ರಾಮ್ ನಾಯ್ಕ್ ಏಣಿತ್ತಡ್ಕ, ಬಾಲಕೃಷ್ಣ ಗೌಡ ಬೇಂಗದಪಡ್ಪು, ಪ್ರಧಾನ ಕಾರ್ಯದರ್ಶಿ ಚೇತನ್ ಆನೆಗುಂಡಿ ಸೇರಿದಂತೆ ಉಪಸಮಿತಿ ಸದಸ್ಯರು, ಗ್ರಾಮಸ್ಥರು ಪಾಲ್ಗೊಂಡಿದ್ದರು.

ಇಂದು ಮಹಾರಥೋತ್ಸವ:
ಎ.1ರಂದು ಬೆಳಿಗ್ಗೆ ಬಲಿ ಹೊರಟು ಉತ್ಸವ ನಡೆಯಲಿದೆ. ರಾತ್ರಿ ಬಲಿ ಹೊರಟು ಉತ್ಸವ, ರಕ್ತೇಶ್ವರಿ ಮತ್ತು ಹುಲಿ ದೈವಗಳ ನುಡಿಕಟ್ಟುಗಳು ನಡೆದು ಮಹಾರಥೋತ್ಸವ ನಡೆಯಲಿದೆ. ಬಳಿಕ ಅಶ್ವತ್ಥ ಕಟ್ಟೆಪೂಜೆಗಳು ನಡೆಯಲಿದೆ. ಎ.೨ರಂದು ಸಂಜೆ ದೇವರ ಅವಭೃತೋತ್ಸವ ನಡೆದು ಧ್ವಜಾವರೋಹಣ ನಡೆಯಲಿದೆ. ಎ.೩ರಂದು ದುಗಲಾಯಿ ದೈವದ ನೇಮೋತ್ಸವ ನಡೆಯಲಿದೆ.

ಸುದ್ದಿ ಯುಟ್ಯೂಬ್ ಚಾನೆಲ್‌ನಲ್ಲಿ ನೇರ ಪ್ರಸಾರ:
ಮಾ.31ರಂದು ನಡೆದ ದರ್ಶನ ಬಲಿ, ಬಟ್ಟಲು ಕಾಣಿಕೆ ಕಾರ್ಯಕ್ರಮದ ನೇರ ಪ್ರಸಾರ ಸುದ್ದಿ ಯುಟ್ಯೂಬ್ ಚಾನೆಲ್ ಹಾಗೂ ಸುದ್ದಿಬಿಡುಗಡೆ ಪೇಸ್‌ಬುಕ್ ಪೇಜ್‌ನಲ್ಲಿ ನೇರ ಪ್ರಸಾರಗೊಂಡಿತು. ಎ.1ರಂದು ರಾತ್ರಿ ನಡೆಯಲಿರುವ ಶ್ರೀ ದೇವರ ಮಹಾರಥೋತ್ಸವ ಸುದ್ದಿ ಯುಟ್ಯೂಬ್ ಚಾನೆಲ್ ಹಾಗೂ ಸುದ್ದಿಬಿಡುಗಡೆ ಪೇಸ್‌ಬುಕ್ ಪೇಜ್‌ನಲ್ಲಿ ನೇರ ಪ್ರಸಾರಗೊಳ್ಳಲಿದೆ.

LEAVE A REPLY

Please enter your comment!
Please enter your name here