ಏ.4 -ಮೇ.15:ಫಿಲೋಮಿನಾದಲ್ಲಿ ಹುಡುಗ-ಹುಡುಗಿಯರಿಗೆ ಬೇಸಿಗೆ ಕ್ರಿಕೆಟ್/ಅಥ್ಲೆಟಿಕ್ಸ್/ವೈಟ್‌ಲಿಪ್ಟಿಂಗ್ ತರಬೇತಿ ಶಿಬಿರ

0

ಪುತ್ತೂರು: ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಸಂತ ಫಿಲೋಮಿನಾ ಕಾಲೇಜಿನ ದೈಹಿಕ ಶಿಕ್ಷಣ ವಿಭಾಗದ ಆಶ್ರಯದಲ್ಲಿ ಏಳು ವರ್ಷ ಮೇಲ್ಪಟ್ಟ ಹುಡುಗ-ಹುಡುಗಿಯರಿಗೆ ಕ್ರಿಕೆಟ್/ಅಥ್ಲೆಟಿಕ್ಸ್/ವೈಟ್‌ಲಿಪ್ಟಿಂಗ್ ಬೇಸಿಗೆ ತರಬೇತಿ ಶಿಬಿರವು ಏ.೪ ರಿಂದ ಮೇ ೧೫ರ ವರೆಗೆ ಕಾಲೇಜಿನ ಕ್ರೀಡಾಂಗಣದಲ್ಲಿ ಜರಗಲಿದೆ.

ನುರಿತ ಕೋಚಿಂಗ್ ವೃಂದ, ಆಸ್ಟ್ರೋ ಟರ್ಫ್ ಪಿಚ್, ಜಿಮ್ ಸೌಲಭ್ಯ, ಉತ್ತಮ ಕ್ರಿಕೆಟ್ ಕ್ರೀಡಾಂಗಣ, ವೈಜ್ಞಾನಿಕ ತರಬೇತಿ, ಕೆಎಸ್‌ಸಿಎನೊಂದಿಗೆ ಸಂಯೋಜನೆ ಹೊಂದಿದ್ದು, ಆಸಕ್ತರು ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಎಲ್ಯಾಸ್ ಪಿಂಟೋ(9448549616), ರಾಜೇಶ್ ಮೂಲ್ಯ(9964084411)ರವರನ್ನು ಸಂಪರ್ಕಿಸಬಹುದಾಗಿದೆ ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here