ಪುತ್ತೂರು ಜಾತ್ರೆಗೆ ಸ್ವಚ್ಛತಾ ಅಭಿಯಾನ – ಸ್ವಯಂ ಸೇವಕರಿಂದ ದೇವಳದ ಪರಿಸರ, ಜಾತ್ರೆ ಗದ್ದೆ ಸ್ವಚ್ಛತೆ

0

  • ಸ್ವಚ್ಛತೆಯ ಮೂಲಕ ಪುತ್ತೂರಿನ ಜಾತ್ರೆ ಎಲ್ಲರಿಗೂ ಆದರ್ಶವಾಗಲಿ – ಪಿ.ಜಿ ಜಗನ್ನಿವಾಸ ರಾವ್

 

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರೆಯ ಸಿದ್ದತೆಯ ಹಿನ್ನೆಲೆಯಲ್ಲಿ ಎ.3ರಂದು ಬೆಳಿಗ್ಗೆ ವಿವಿಧ ಸಂಘ ಸಂಸ್ಥೆ ಸೇರಿದಂತೆ ಹಲವಾರು ಸಂಘಟನೆಗಳಿಂದ ಸ್ವಯಂ ಸೇವಕರಾಗಿ ದೇವಳದ ಪರಿಸರ ಮತ್ತು ಜಾತ್ರಾ ಗದ್ದೆಯನ್ನು ಸ್ವಚ್ಛತೆಗೊಳಿಸಿದರು.


ನಗರಸಭಾ ಸ್ಥಳೀಯ ಸದಸ್ಯ ಪಿ.ಜಿ.ಜಗನ್ನಿವಾಸ ರಾವ್ ಅವರು ತೆಂಗಿನ ಕಾಯಿ ಒಡೆಯುವ ಮೂಲಕ ಸ್ವಚ್ಚತೆಗೆ ಚಾಲನೆ ನೀಡಿ ಮಾತನಾಡಿ ಗಂಗೆಯನ್ನು ಶಿರದಲ್ಲಿ ಹೊತ್ತ ಶಿವ ನಿತ್ಯ ಅಭಿಷೇಕ ಪ್ರಿಯವಾಗಿದ್ದು ಆತ ಸ್ವಚ್ಛತೆಗೆ ಪರಿಕಲ್ಪನೆ ಕೊಟ್ಟವ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿ ೮ ವರ್ಷ ಸಂದಿದೆ. ಇವತ್ತು ಪ್ರತಿಯೊಬ್ಬರು ಸ್ವಚ್ಚತೆಯನ್ನು ಕಾಪಾಡಿಕೊಳ್ಳಬೇಕು. ದೇಗುಲ, ಧಾರ್ಮಿಕ ಕ್ಷೇತ್ರಗಳು ನಿರಂತರ ಸ್ವಚ್ಚತೆ ಇರಬೇಕು. ಸ್ವಚ್ಛತೆ ಒಂದು ಭಾರಿ ಮಾತ್ರವಲ್ಲ ನಿರಂತರ ನಡೆಯಬೇಕು. ಪ್ರತಿ ಆದಿತ್ಯವಾರ ದೇವಳದ ನಿತ್ಯ ಕರಸೇವಕರಿಂದ ದೇವಳದಲ್ಲಿ ಸ್ವಚ್ಛತೆ ನಡೆಯುತ್ತದೆ. ಎಲ್ಲಾ ಸಂಘಟನೆ, ಸಂಸ್ಥೆಗಳ ಸಹಕಾರ ನೀಡಿದರೆ ಗದ್ದೆಯಲ್ಲೂ ವಾರದ ಒಂದು ದಿನ ಸ್ವಚ್ಛತೆ ಮಾಡುವ ಮೂಲಕ ಪುತ್ತೂರಿನ ಜಾತ್ರೆ ನಾಡಿನ ಜನತೆಗೆ ಆದರ್ಶವಾಗಿ ಮೂಡಿ ಬರಲಿ ಎಂದರು.

ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ, ಸದಸ್ಯರಾದ ರಾಮಚಂದ್ರ ಕಾಮತ್, ರವೀಂದ್ರನಾಥ ರೈ ಬಳ್ಳಮಜಲು, ರಾಮದಾಸ್ ಗೌಡ, ಶೇಖರ್ ನಾರಾವಿ, ಬಿ.ಐತ್ತಪ್ಪ ನಾಯ್ಕ್, ವೀಣಾ ಬಿ.ಕೆ, ಡಾ. ಸುಧಾ ಎಸ್ ರಾವ್ ಸೇರಿದಂತೆ ದೇವಳದ ಪ್ರಧಾನ ಅರ್ಚಕ ವಿ.ಎಸ್ ಭಟ್ ಮತ್ತು ವಿವಿಧ ಸಂಘ ಸಂಸ್ಥೆಗಳು ಮತ್ತು ಸಂಘಟನೆಯ ಪ್ರಮುಖರು, ಸದಸ್ಯರು ಸ್ವಚ್ಛತೆಯಲ್ಲಿ ಪಾಲ್ಗೊಂಡರು.

LEAVE A REPLY

Please enter your comment!
Please enter your name here