ಕುಂಜೂರು ದುರ್ಗಾಪರಮೇಶ್ವರಿ ದೇವಸ್ಥಾನದ ಪ್ರತಿಷ್ಠ ವರ್ಧಂತಿ, ಜಾತ್ರೋತ್ಸವದ ಆಮಂತ್ರಣ ಬಿಡುಗಡೆ

0

ಪುತ್ತೂರು:ಆರ್ಯಾಪು ಗ್ರಾಮದ ಕುಂಜೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಎ.29ರಂದು ನಡೆಯಲಿರುವ ಪ್ರತಿಷ್ಠಾ ವರ್ಧಂತಿ ಉತ್ಸವ ಹಾಗೂ ಮೇ.2 ಹಾಗೂ ೩ರಂದು ನಡೆಯಲಿರುವ ವರ್ಷಾವಧಿ ಜಾತ್ರೋತ್ಸವದ ಆಮಂತ್ರಣ ಪತ್ರಿಕೆಯು ಎ.೨ರ ಯುಗಾದಿಯಂದು ನೆರವೇರಿತು.

ಶ್ರೀದೇವಿಗೆ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿದ ಬಳಿಕ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಲಾಯಿತು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರದೀಪಕೃಷ್ಣ ಬಂಗಾರಡ್ಕ ಮಾತನಾಡಿ, ಕೋವಿಡ್-19ನಿಂದಾಗಿ ಕಳೆದ ಎರಡು ವರ್ಷಗಳಲ್ಲಿ ದೇವರ ಜಾತ್ರೋತ್ಸವ ಸರಳವಾಗಿ ನಡೆದಿರುತ್ತದೆ. ಭಕ್ತಾದಿಗಳ ಆಶಯದಂತೆ ಈ ವರ್ಷ ಜಾತ್ರೋತ್ಸವವನ್ನು ವಿಜೃಂಭನೆಯಿಂದ ನಡೆಸಲಾಗುವುದು. ಇದಕ್ಕೆ ಪ್ರತಿಯೊಬ್ಬರು ಸಹಕರಿಸುವಂತೆ ಅವರು ಮನವಿ ಮಾಡಿದರು.

ದೇವಸ್ಥಾನದ ಅರ್ಚಕರಾದ ಸದಾನಂದರವಿ ಭಟ್, ಕೇಶವ ಭಟ್, ರಾಧಾಕೃಷ್ಣ ಕಲ್ಲೂರಾಯ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಮಹಾಲಿಂಗ ನಾಯ್ಕ ಮಚ್ಚಿಮಲೆ, ಚಂದಪ್ಪ ಪೂಜಾರಿ ಕುಂಜೂರು, ವಿಶ್ವನಾಥ ಕುಲಾಲ್ ಮಚ್ಚಿಮಲೆ, ನವೀನ ಕುಮಾರ್ ಜಿ.ಟಿ., ಉಮಾವತಿ, ಶುಭಕರ ರಾವ್ ಪಿಲಿಪಂಜರ, ಲೀಲಾವತಿ ಕುಂಜೂರು ಗ್ರಾಮಸ್ಥರಾದ ಶೈಲೇಶ್ ಮಚ್ಚಿಮಲೆ, ಕಿಟ್ಟಣ್ಣ ರೈ ಬಂಗಾರಡ್ಕ, ಅಭಿಲಾಷ್ ರೈ ಬಂಗಾರಡ್ಕ, ಲೋಕೇಶ್ ಗೌಡ ಬಂಗಾರಡ್ಕ, ಅಶೋಕ ಕುಂಜೂರು, ಬಾಲಕೃಷ್ಣ ಮಚ್ಚಿಮಲೆ, ಪ್ರಶಾಂತ ಬಲ್ಯಾಯ ದೊಡ್ಡಡ್ಕ, ಈಶ್ವರ ಎಂ.ಎಸ್., ಯತೀಶ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯರು, ವಿವಿಧ ಭಜನಾ ಮಂಡಳಿಯ ಸದಸ್ಯರು, ವಿಶ್ವ ಯುವಕ ಮಂಡಲದ ಸದಸ್ಯರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here