ಒಡಿಎಫ್ ಪ್ಲಸ್ ಅತ್ಯುತ್ತಮ ಘೋಷಣೆ ಬರಹ

0

  • ಒಳಮೊಗ್ರು ಗ್ರಾಪಂಗೆ ಪ್ರಥಮ ಬಹುಮಾನ ಪ್ರದಾನ

ಪುತ್ತೂರು: ಗ್ರಾಮೀಣ ಸಮುದಾಯದಲ್ಲಿ ಜಾಗೃತಿ ಮೂಡಿಸಲು ಒಡಿಎಫ್ ಪ್ಲಸ್ ಕುರಿತಂತೆ ಘೋಷಣೆಗಳ ಬರಹಗಳಲ್ಲಿ ಪುತ್ತೂರು ತಾಲೂಕಿನ ಒಳಮೊಗ್ರು ಗ್ರಾಮ ಪಂಚಾಯತ್ ಪ್ರಥಮ ಸ್ಥಾನ ಗಳಿಸಿಕೊಂಡಿತ್ತು. ಎ.3 ರಂದು ಮಂಗಳೂರಿನಲ್ಲಿ ನಡೆದ ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಸ್ವಚ್ಛವಾಹಿನಿ ವಾಹನಗಳನ್ನು ಸಂಬಂಧಿಸಿದ ಗ್ರಾಪಂಗಳಿಗೆ ಹಸ್ತಾಂತರ ಕಾರ್ಯಕ್ರಮದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಕೆ.ಎಸ್.ಈಶ್ವರಪ್ಪರವರು ಒಳಮೊಗ್ರು ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು ಮತ್ತು ಕಾರ್ಯದರ್ಶಿ ಜಯಂತಿಯವರಿಗೆ ಬಹುಮಾನ ಸ್ಮರಣಿಕೆ ವಿತರಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕುಮಾರ್, ಜಿಪಂ ಉಪ ಕಾರ್ಯದರ್ಶಿ ಆನಂದ ಕುಮಾರ್, ಪುತ್ತೂರು ಶಾಸಕ ಸಂಜೀವ ಮಠಂದೂರು, ಬಂಟ್ವಾಳ ಶಾಸಕ ರಾಜೇಶ್ ನಾಕ್, ಪುತ್ತೂರು ತಾಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ಮತ್ತಿತರರು ಉಪಸ್ಥಿತರಿದ್ದರು. ಒಡಿಎಫ್ ಪ್ಲಸ್‌ನ ವಿವಿಧ ಘಟಕಗಳ ಬಗ್ಗೆ ಸಾಮಾಹಿಕ ಸುಧಾರಣೆ ತರಲು ಕೇಂದ್ರ ಸರಕಾರದ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಹಾಗೂ ಜಲಶಕ್ತಿ ಮಂತ್ರಾಲಯ ಈ ಆದೇಶ ಮಾಡಿತ್ತು. ಇದರಂತೆ ಗ್ರಾಪಂ ಕಛೇರಿ, ಶಾಲೆ, ಸಮುದಾಯ ಸಂಕೀರ್ಣಗಳು, ಮಾರುಕಟ್ಟೆ, ಸಂತೆ ನಡೆಯುವ ಸ್ಥಳ, ಬಸ್ ನಿಲ್ದಾಣಗಳಲ್ಲಿ ಘೋಷಣೆ ಬರಹಗಳನ್ನು ಬರೆಸಲು ಸೂಚಿಸಿತ್ತು. ಇದರಲ್ಲಿ ಒಳಮೊಗ್ರು ಗ್ರಾಪಂ ಪ್ರಥಮ, ಮಂಗಳೂರು ತಾಲೂಕಿನ ಕುಪ್ಪೆಪದವು ಗ್ರಾಪಂ ದ್ವಿತೀಯ ಮತ್ತು ಉಳಾಬೆಟ್ಟು ಗ್ರಾಪಂ ತೃತೀಯ ಸ್ಥಾನ ಪಡೆದುಕೊಂಡಿತ್ತು.

LEAVE A REPLY

Please enter your comment!
Please enter your name here