ವಿಟ್ಲ: ಚಲಿಸುತ್ತಿದ್ದ ವೇಳೆ ಹಠಾತ್ತನೆ ನಿಲ್ಲಿಸಿದ ಬೈಕ್‌ ನ ಹಿಂಭಾಗಕ್ಕೆ 112 ತುರ್ತು ಸೇವೆಯ ವಾಹನ ಡಿಕ್ಕಿ – ಸವಾರರಿಬ್ಬರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರು

0

ವಿಟ್ಲ: ಬೈಕ್ ಸವಾರರೋರ್ವರು ಹಟತ್ತನೆ ಬ್ರೇಕ್ ಹಾಕಿದ ಹಿನ್ನೆಲೆಯಲ್ಲಿ ಹಿಂಭಾಗದಿಂದ ಸಂಚರಿಸುತ್ತಿದ್ದ 112 ತುರ್ತು ಸೇವೆಯ ವಾಹನ ಡಿಕ್ಕಿಯಾದ ಘಟನೆ ವಿಟ್ಲ – ಕಾಸರಗೋಡು ರಸ್ತೆಯ ಕಾಶಿಮಠ ಎಂಬಲ್ಲಿ ನಡೆದ ಬಗ್ಗೆ ವರದಿಯಾಗಿದೆ.

ಬೈಕ್ ನಲ್ಲಿ ಸಂಚರಿಸುತ್ತಿದ್ದ ವಿನಯ್ ಹಾಗೂ ಶಿವರಾಮ್ ರವರು ಸಣ್ಣ ಪುಟ್ಟಗಾಯಗಳೊಂದಿಗೆ ಪಾರಾದವರಾಗಿದ್ದಾರೆ. ಬೈಕ್ ಸವಾರ ಉಕ್ಕುಡ ಕಡೆಯಿಂದ ವಿಟ್ಲ ಭಾಗಕ್ಕೆ ತೆರಳುತ್ತಿದ್ದ ವೇಳೆ ಕಾಶೀಮಠ ಎಂಬಲ್ಲಿ ರಸ್ತೆಯಲ್ಲಿ ಇರಿಸಲಾಗಿದ್ದ  ಬ್ಯಾರಿಕೇಡ್ ಸಮೀಪ ಮುಂಭಾಗದಿಂದ ಬಂದ ವಾಹನವನ್ನು ಕಂಡು ಹಠಾತ್ತನೆ ಬ್ರೇಕ್ ಹಾಕಿದ್ದರು.  ಈ ವೇಳೆ ಹಿಂಭಾಗದಿಂದ ಬರುತ್ತಿದ್ದ  112 ತುರ್ತು ಸೇವೆಯ ವಾಹನ ಬೈಕ್‌ನ ಹಿಂಭಾಗಕ್ಕೆ ಡಿಕ್ಕಿಯಾಗಿದ್ದು, ಘಟನೆಯಿಂದಾಗಿ ಬೈಕ್ ಸವಾರರಿಬ್ಬರು ರಸ್ತೆಗೆ ಬಿದ್ದಿದ್ದರು. ಸಣ್ಣಪುಟ್ಟ ಗಾಯವಾಗಿದ್ದ ಅವರನ್ನು  ಕೂಡಲೇ ವಿಟ್ಲದ‌ ಸರಕಾರಿ ಆಸ್ಪತ್ರೆಗೆ ಕರೆತಂದು ಪ್ರಥಮ ಚಿಕಿತ್ಸೆ ನೀಡಿ ಮನೆಗೆ ಕಳುಹಿಸಿಕೊಡಲಾಗಿದೆ. nಈ ಬಗ್ಗೆ ಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here