ಗುಮ್ಮಟೆಗದ್ದೆ ಶಾಲಾ ರಸ್ತೆ ಕಾಂಕ್ರಿಟೀಕರಣ ಉದ್ಘಾಟನೆ

0

ಪುತ್ತೂರು; ಬೆಟ್ಟಂಪಾಡಿ ಗ್ರಾ.ಪಂ ವ್ಯಾಪ್ತಿಯ ಗುಮ್ಮಟೆಗದ್ದೆಯಿಂದ ಗುಮ್ಮಟೆಗದ್ದೆ ಶಾಲಾ ರಸ್ತೆಗೆ ಶಾಸಕರ ರೂ.10. ಲಕ್ಷ ಅನುದಾನದ ಕಾಂಕ್ರೀಟ್ ಕಾಮಗಾರಿಯು ಎ.9ರಂದು ಉದ್ಘಾಟನೆಗೊಂಡಿತು.

 


ಕಾಮಗಾರಿಯನ್ನು ಉದ್ಘಾಟಿಸಿದ ಶಾಸಕ ಸಂಜೀವ ಮಠಂದೂರು ಮಾತನಾಡಿ, ಗ್ರಾಮದ ಅಭಿವೃದ್ಧಿಯಾದಾಗ ದೇಶದ ಅಭಿವೃದ್ಧಿ ಸಾಧ್ಯ. ಹೀಗಾಗಿ ಗ್ರಾಮೀಣ ಭಾಗದ ರಸ್ತೆ, ನೀರು, ಮನೆ, ವಿದ್ಯುತ್ ಮೊದಲಾದ ಮೂಲಭೂತ ಸೌಲಭ್ಯಗಳ ಪೂರೈಸುವುದು, ಕೃಷಿ ಕಾರ್ಯಗಳಿಗೆ ಪೂರಕವಾಗಿ ಆದ್ಯತೆ ನೀಡಿ ಅನುದಾನ ಒದಗಿಸಲಾಗುತ್ತಿದೆ ಎಂದರು.

ಶಾಸಕರಿಗೆ ಸನ್ಮಾನ;
ರಸ್ತೆ ಕಾಂಕ್ರೀಟೀಕರಣಕ್ಕೆ ಅನುದಾನ ಒದಗಿಸಿಕೊಟ್ಟ ಶಾಸಕ ಸಂಜೀವ ಮಠಂದೂರುರವರನ್ನು ಕಾಪ್ಯ ಅಂಬೆಲಾರ್ ತರವಾಡು ಮನೆಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಬೆಟ್ಟಂಪಾಡಿ ಗ್ರಾ.ಪಂ ಅಧ್ಯಕ್ಷೆ ಪವಿತ್ರ, ಉಪಾಧ್ಯಕ್ಷ ವಿನೋದ್ ಕುಮಾರ್ ರೈ ಗುತ್ತು, ಸದಸ್ಯರಾದ ಪ್ರಕಾಶ್ ರೈ ಬೈಲಾಡಿ, ಉಮಾವತಿ ಸುಬ್ಬಪ್ಪ ಮಣಿಯಾಣಿ, ವಿದ್ಯಾಶ್ರೀಸುರೇಶ್, ಬಿಜೆಪಿ ಗ್ರಾಮಾಂತರ ಮಂಡಲದ ಪ್ರಧಾನ ಕಾರ್ಯದರ್ಶಿ ನಿತೀಶ್ ಕುಮಾರ್ ಶಾಂತಿವನ, ಇರ್ದೆ-ಬೆಟ್ಟಂಪಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ಹರೀಶ್ ಎಂ.ಬಿ., ಬಿಜೆಪಿ ಶಕ್ತಿ ಕೇಂದ್ರ ಜಗನ್ನಾಥ ರೈ ಕೊಮ್ಮಂಡ, ಒಳಮೊಗ್ರು ಗ್ರಾ.ಪಂ ಸದಸ್ಯ ಮಹೇಶ್ ರೈ ಕೇರಿ, ಬೆಟ್ಟಂಪಾಡಿ ಗ್ರಾ.ಪಂ ಮಾಜಿ ಸ್ಥಳೀಯರಾದ ಕೊಗ್ಗು ಮಣಿಯಾಣಿ, ಕಾಪ್ಯ ಅಂಬೆಲಾರ್ ತರವಾಡು ಮನೆ ಟ್ರಸ್ಟ್‌ನ ಅಧ್ಯಕ್ಷ ಗೋಪಾಲಕೃಷ್ಣ ಮಣಿಯಾಣಿ, ಸುಬ್ಬಪ್ಪ ಮಣಿಯಾಣಿ, ತಿಮ್ಮಪ್ಪ ಗೌಡ ಕಲ್ಪಣೆ, ಹೊನ್ನಪ್ಪ ಗೌಡ ಕಲ್ಪಣೆ, ಹರೀಶ್, ಹೊನ್ನಪ್ಪ, ಮಂಜುನಾಥ, ಪುರುಷೋತ್ತಮ, ಮೋನಪ್ಪ ಗೌಡ ಗುಮ್ಮಟೆಗದ್ದೆ, ದಿನೇಶ್ ಮಣಿಯಾಣಿ ಗುಮ್ಮಟೆಗದ್ದೆ, ಚೇತನ್, ಕೃಷ್ಣಪ್ಪ ಸೇರಿದಂತೆ ಹಲವು ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here