ಪುತ್ತೂರು ಜಾತ್ರೆಯ ಪೇಟೆಸವಾರಿಗೆ ಮೆರುಗು ತಂದುಕೊಟ್ಟ `ಪರ್ಲ್‌ಸಿಟಿ ಸ್ಟಾರ್ ನೈಟ್-2022′

0

  • ಸುದ್ದಿ ಸಮೂಹ ಸಂಸ್ಥೆಗಳು, ಒಕ್ಕಲಿಗ ಗೌಡ ಸೇವಾ ಸಂಘದ ಸಹಯೋಗದಲ್ಲಿ ಆಯೋಜನೆ

ಪುತ್ತೂರು: ಮಹತೋಭಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ವಾರ್ಷಿಕ ಜಾತ್ರೋತ್ಸವದ ಅಂಗವಾಗಿ ಸುದ್ದಿ ಸಮೂಹ ಸಂಸ್ಥೆಗಳು ಮತ್ತು ಒಕ್ಕಲಿಗ ಗೌಡ ಸೇವಾ ಸಂಘದ ಸಹಯೋಗದಲ್ಲಿ `ಪರ್ಲ್ ಸಿಟಿ ಸ್ಟಾರ್‌ನೈಟ್ -2022′ ಸುದ್ದಿ ಮಾರ್ಕೆಟಿಂಗ್ ಮ್ಯಾನೇಜರ್ ಸುರೇಶ್ ಶೆಟ್ಟಿ ನಿರ್ದೇಶನದಲ್ಲಿ ಕಾರ್ಯಕ್ರಮ ತೆಂಕಿಲದ ಒಕ್ಕಲಿಗ ಗೌಡ ಸಮುದಾಯ ಭವನದ ಆವರಣದಲ್ಲಿ ಎ.12ರಂದು ಸಂಜೆ ನಡೆಯಿತು.

ಅದ್ದೂರಿ ವೇದಿಕೆಯಲ್ಲಿ, ವರ್ಣರಂಜಿತವಾಗಿ, ವೈಭವೋಪೇತವಾಗಿ ನಡೆದ ಕಾರ್ಯಕ್ರಮವನ್ನು ಜಿ.ಎಲ್.ಆಚಾರ್ಯ ಜ್ಯುವೆಲ್ಲರ್‍ಸ್‌ನ ಮುಖ್ಯಸ್ಥರಾದ ಜಿ.ಎಲ್.ಬಲರಾಮ ಆಚಾರ್ಯ ಅವರು ದೀಪ ಪ್ರಜ್ವಲನೆಗೈಯುವ ಮೂಲಕ ಉದ್ಘಾಟಿಸಿದರು.ಈ ವೇಳೆ ಮಾತನಾಡಿದ ಅವರು, ಪುತ್ತೂರಿನ ಜಾತ್ರೆಯು ಬಹಳ ವಿಶೇಷವಾದುದು.ದೇವರ ಪೇಟೆಸವಾರಿಯು ಒಂದು ರೀತಿ ಹಬ್ಬದ ವಾತಾವರಣ. ಸುದ್ದಿ ಬಳಗ ಪತ್ರಿಕೋದ್ಯಮದ ಜೊತೆಗೆ ಸಾಂಸ್ಕೃತಿಕ ರಂಗ, ಸಾಮಾಜಿಕ ರಂಗದಲ್ಲಿ ಜೊತೆಗೆ ರಾಜಕೀಯ, ಜನಜಾಗೃತಿ ಮೂಡಿಸುವಲ್ಲಿ ಕಾಳಜಿ ವಹಿಸುತ್ತಿದೆ.ಇದರ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿರುವುದು ಶ್ಲಾಘನೀಯ.ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಲಿ ಎಂದು ಶುಭಹಾರೈಸಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ನ್ಯೂರೋಸೈಕಿಯಾಟ್ರಿಸ್ಟ್ ಡಾ.ಗಣೇಶ್ ಪ್ರಸಾದ್ ಮುದ್ರಾಜೆ ಮಾತನಾಡಿ, ಸುದ್ದಿ ಸಮೂಹದ ಮೂಲಕ ಒಂದು ಕ್ರಾಂತಿಯನ್ನೇ ಪುತ್ತೂರಿನಲ್ಲಿ ಮಾಡಲಾಗಿದೆ. ಸೋಷಿಯಲ್ ಮೀಡಿಯಾದ ಗೋಲ್‌ಮಾಲ್, ಭ್ರಷ್ಟಾಚಾರದ ವಿಷಯಗಳು ಇತ್ಯಾದಿ ಅನೇಕ ವಿಚಾರಗಳಲ್ಲಿ ಸಮಾಜಮುಖಿ ಚಿಂತನೆಯನ್ನು ಇಟ್ಟುಕೊಂಡು ಕೆಲಸ ಮಾಡುತ್ತಿದೆ.ಓರ್ವ ವ್ಯಕ್ತಿ ಸಮಾಜಕ್ಕೆ, ದೇಶಕ್ಕೆ ಪೂರಕವಾಗಿ ಹೇಗೆ ಬದುಕಬೇಕು ಎನ್ನುವ ನೆಲೆಯಲ್ಲಿ ಸುದ್ದಿ ಸಮೂಹ ಸಂಸ್ಥೆಗಳ ಮುಖ್ಯಸ್ಥರಾದ ಡಾ.ಯು.ಪಿ. ಶಿವಾನಂದರು ಕ್ರಾಂತಿಯನ್ನು ಮಾಡುತ್ತಿದ್ದಾರೆ ಎಂದರು.

ಇನ್ನೋರ್ವ ಮುಖ್ಯ ಅತಿಥಿ, ಜನ್ಮ ಫೌಂಡೇಶನ್ ಟ್ರಸ್ಟ್‌ನ ಅಧ್ಯಕ್ಷರಾದ ಡಾ| ಹರ್ಷಕುಮಾರ್ ರೈ ಮಾಡಾವು ಮಾತನಾಡಿ, ಪುತ್ತೂರು ಜಾತ್ರೆಯ ಸಂದರ್ಭದಲ್ಲಿ ಇಂತಹ ವೈಶಿಷ್ಟ್ಯಪೂರ್ಣ ಕಾರ್ಯಕ್ರಮ ನಡೆಯುತ್ತಿರುವುದು ಬಹಳ ಹೆಮ್ಮಯ ವಿಚಾರ.ಇದು ಜಾತ್ರೋತ್ಸವದ ಮೆರುಗನ್ನು ಹೆಚ್ಚಿಸುವ ಜೊತೆಗೆ ಪುತ್ತೂರಿನ ಘನತೆಯನ್ನು ಹತ್ತೂರಿಗೆ ಪಸರಿಸುವುದರಲ್ಲಿ ಸಂಶಯವಿಲ್ಲ ಎಂದು ಅಭಿಪ್ರಾಯಪಟ್ಟರು.

ವೇದಿಕೆಯಲ್ಲಿ ವೈದ್ಯರ್‍ಸ್ ಆಯುರ್ವೇದ ಥೆರಫಿ ಸೆಂಟರ್‌ನ ಮಾಲಕ ಡಾ.ಪ್ರಶಾಂತ್ ಜನ, ವನಸ್ಥಾ ಸಂಸ್ಥೆಯ ಮಾರ್ಕೆಟಿಂಗ್ ಮ್ಯಾನೇಜರ್ ದೀಪಕ್ ತಲಪಾಡಿ, ಸುದ್ದಿ ಗ್ರೂಪ್ ಆಫ್ ಕಂಪನಿಯ ಮಾರ್ಕೆಟೆಂಗ್/ಅಡ್ವರ್ಟೈಸಿಂಗ್ ಮ್ಯಾನೇಜರ್ ಸುರೇಶ್ ಶೆಟ್ಟಿ ಉಪಸ್ಥಿತರಿದ್ದರು.

ಸುದ್ದಿ ಬಿಡುಗಡೆ ಪುತ್ತೂರು ಸಿಇಒ ಸೃಜನ್ ಊರುಬೈಲು, ಸುದ್ದಿ ಬೆಳ್ತಂಗಡಿ ಸಿಇಒ ಸಿಂಚನಾ ಊರುಬೈಲು ಮತ್ತು ಸುದ್ದಿ ಸಮೂಹ ಸಂಸ್ಥೆಗಳ ನಿರ್ದೇಶಕರಾದ ಶೋಭಾ ಶಿವಾನಂದ್ ಅವರು ಅತಿಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಿದರು.ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷರಾದ ವಿಶ್ವನಾಥ ಗೌಡ ಕೆಯ್ಯೂರು ಸ್ವಾಗತಿಸಿದರು.ಒಕ್ಕಲಿಗ ಗೌಡ ಸೇವಾ ಸಂಘದ ಸಲಹಾ ಸಮಿತಿ ಅಧ್ಯಕ್ಷರಾದ ಚಿದಾನಂದ ಬೈಲಾಡಿಯವರು ವಂದಿಸಿದರು. ನಿರೂಪಕಿ ದೀಕ್ಷಾ ರೈ ಕಾರ್ಯಕ್ರಮ ನಿರೂಪಿಸಿದರು.

ವರುಣನ ಸಿಂಚನ-ಬತ್ತದ ಉತ್ಸಾಹ:

ಸಂಜೆ 7.15 ಕ್ಕೆ ಕಾರ್ಯಕ್ರಮ ಆರಂಭಗೊಂಡಿದ್ದು, ರಾತ್ರಿ 2 ಗಂಟೆಯವರೆಗೆ ಸುಮಾರು 6 ಗಂಟೆಗಳ ಕಾಲ ಅದ್ಧೂರಿಯಾಗಿ ವೈಭವೋಪೇತವಾಗಿ ಕಾರ್ಯಕ್ರಮ ನಡೆಯಿತು.ನಡುನಡುವೆ ಬಿಟ್ಟು ಬಿಟ್ಟು ಸುರಿದ ಮಳೆಯನ್ನೂ ಲೆಕ್ಕಿಸದೆ ಪ್ರೇಕ್ಷಕರು ಸ್ಟಾರ್‌ನೈಟ್ ಸಂಭ್ರಮದಲ್ಲಿ ಪಾಲ್ಗೊಂಡು ರಸಭರಿತ ಕ್ಷಣಗಳನ್ನು ಆಸ್ವಾದಿಸಿದರು.ನಟ, ನಿರೂಪಕ, ನಿರ್ದೇಶಕ, ಸೆಲೆಬ್ರಿಟಿ ಹೋಸ್ಟ್ ವಿಜೆ ವಿನೀತ್ ಮತ್ತು ನಿರೂಪಕಿ ದೀಕ್ಷಾ ರೈ ಅವರ ಜೋಡಿ ನಿರೂಪಣೆಯು ಕಾರ್ಯಕ್ರಮದ ಸೊಬಗನ್ನು ಮತ್ತಷ್ಟು ಹೆಚ್ಚಿಸಿತು.

ಕಲರ್ ಫುಲ್ ಸ್ಟೇಜ್‌ನಲ್ಲಿ ಮೇಳೈಸಿದ ಸಾಂಸ್ಕ್ರತಿಕ ವೈಭವ:

ಆರಂಭದಲ್ಲಿ ಶ್ರೀಶಬರಿ ಚೆಂಡೆ ತಂಡದಿಂದ ಆಕರ್ಷಕ ಚೆಂಡೆವಾದನ ಪ್ರೇಕ್ಷಕರನ್ನು ರಂಜಿಸಿತು.ಜೊತೆಗೆ ಗೀತಾ ನೃತ್ಯಾಲಯ ಉಜಿರೆ ತಂಡದ ನೃತ್ಯ ಪ್ರದರ್ಶನಗಳು ಮನರಂಜಿಸಿದವು.ಟೀಮ್ ಡಿಫರೆಂಟ್ ವತಿಯಿಂದ ಆಕರ್ಷಕ ತೆಯ್ಯಂ ಪ್ರದರ್ಶನವು ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿತು.ಜೊತೆಗೆ ಖ್ಯಾತ ಹಾಸ್ಯಕಲಾವಿದರಾದ ಉಮೇಶ್ ಮಿಜಾರ್ ಮತ್ತು ತಂಡದಿಂದ ಭರ್ಜರಿ ಹಾಸ್ಯ ಪ್ರದರ್ಶನವು ಪ್ರೇಕ್ಷಕರನ್ನು ನಗೆಗಡಲಿನಲ್ಲಿ ತೇಲಿಸಿತು.ಜೊತೆಗೆ ಡಿಝೆನ್, ಶ್ರೀದೇವಿ ನೃತ್ಯಾರಾಧನಾ ಕಲಾಕೇಂದ್ರ ಮತ್ತು ಆರ್ಯನ್ಸ್ ಡ್ಯಾನ್ಸ್ ಸ್ಟುಡಿಯೋ ತಂಡದ ನೃತ್ಯಪ್ರದರ್ಶನಗಳು ಪ್ರೇಕ್ಷಕರ ಮೈನವಿರೇಳಿಸಿದವು.

ಅಷ್ಟೇ ಅಲ್ಲದೆ,ರೂಪದರ್ಶಿಗಳಿಂದ ಸಾಂಪ್ರದಾಯಿಕ ರ್‍ಯಾಂಪ್‌ವಾಕ್ ಕಾರ್ಯಕ್ರಮದ ಝಲಕ್‌ನ್ನು ಇನ್ನಷ್ಟು ಹೆಚ್ಚಿಸಿತು.ಮಾಡೆಲ್ ವಿಜೇತಾ ಪೂಜಾರಿ ನೇತೃತ್ವದಲ್ಲಿ ಮಾಡೆಲ್‌ಗಳಾದ ವಿದ್ಯಾಶೆಟ್ಟಿ, ಸೈಮನ್ ಬಿ.ಎಸ್., ಇಂದುಶ್ರೀ, ಅಕ್ಷತಾ, ಹರ್ಷಿತಾ, ಸಾಕ್ಷಿತಾ, ಅನನ್ಯಾ, ಅಪೂರ್ವ ಅವರು ಆಕರ್ಷಕ ರ್‍ಯಾಂಪ್‌ವಾಕ್ ಮಾಡಿ ಮನರಂಜಿಸಿದರು.

ತಾರಾ ಆಕರ್ಷಣೆ:

ಸ್ಯಾಂಡಲ್‌ವುಡ್ ಸೇರಿದಂತೆ ವಿವಿಧ ಚಿತ್ರರಂಗಗಳಲ್ಲಿ ಮಿಂಚಿದ ಪ್ರತಿಭೆಗಳಾದ ಅವಳಿ ಸೋದರಿಯರಾದ ಅದ್ವಿತಿ ಶೆಟ್ಟಿ ಮತ್ತು ಅಶ್ವಿತಿ ಶೆಟ್ಟಿಯವರು ತಾರಾ ಆಕರ್ಷಣೆಯಾಗಿ ಮೆರುಗು ತಂದುಕೊಟ್ಟರು.ಜೊತೆಗೆ ಖ್ಯಾತ ನಟ ಆಕ್ಷನ್ ಕಿಂಗ್ ಅರ್ಜುನ್ ಕಾಪಿಕಾಡ್,ವೀಡಿಯೋ ಕ್ರಿಯೇಟರ್ ಶುಭಂ, ಎದೆ ತುಂಬಿ ಹಾಡುವೆನು ಖ್ಯಾತಿಯ ಗಾಯಕ ಸಂದೇಶ್ ನೀರುಮಾರ್ಗ, ಹಿನ್ನೆಲೆ ಗಾಯಕ ಸುಪ್ರೀತ್ ಗಾಂಧಾರ, ಸೂಪರ್ ಮಾಡೆಲ್ ವಿಜೇತ ಪೂಜಾರಿ, ಕೊರಿಯೋಗ್ರಾ-ರ್ ನವೀನ್ ಶೆಟ್ಟಿ, ಗಾಯಕ ವಿನೋದ್ ಆಚಾರ್ಯ, ನಟಿ ಹಾಗೂ ರೂಪದರ್ಶಿ ವರ್ಷಾ ಆಚಾರ್ಯ, ಗಾಯಕ ಶ್ರವಣ್ ಕುಮಾರ್, ಗಾಯಕಿ ಸವಿತಾ ಅವಿನಾಶ್, ನಟ-ನಿರ್ದೇಶಕ ಸುಂದರ್ ರೈ ಮಂದಾರ, ವೀಡಿಯೋ ಕ್ರಿಯೇಟರ್ ಸಂದೀಪ್ ದೇವಾಡಿಗ ಮತ್ತು ಮನೋಹರ್ ಬ್ರಹ್ಮಾವರ್ ಭಾಗವಹಿಸಿ ವಿಶೇಷ ಮೆರುಗು ತಂದುಕೊಟ್ಟರು.

ಬೈಕ್ ಅನಾವರಣ:

ಕಾರ್ಯಕ್ರಮದಲ್ಲಿ ಪ್ರಸಿದ್ಧ ಟೂವೀಲರ್ ತಯಾರಿಕಾ ಸಂಸ್ಥೆ ಹೋಂಡಾದ ಎರಡು ವಿನೂತನ ಮಾದರಿಯ ಬೈಕ್‌ಗಳನ್ನು ಅನಾವರಣಗೊಳಿಸಲಾಯಿತು.ಕಾಂಚನ ಹೋಂಡಾದ ಅಂಗಸಂಸ್ಥೆ ಬಿಗ್‌ವಿಂಗ್ ವತಿಯಿಂದ ಹೋಂಡಾ ಹೈನೆಸ್ಟ್ ಮತ್ತು ಹೋಂಡಾ ಸಿಬಿ350 ಆರ್ ಮಾದರಿಯ ಬೈಕ್‌ಗಳನ್ನು ವೇದಿಕೆಯಲ್ಲಿ ನೆಕ್ಸ್ಟ್‌ಜೆನ್ ಪಬ್ಲಿಶಿಂಗ್ ಪ್ರೈವೇಟ್ ಲಿಮಿಟೆಡ್‌ನ ಸೌತ್‌ರೀಜನ್‌ನ ಜನರಲ್ ಮ್ಯಾನೇಜರ್ ಗಿರೀಶ್ ಶೇಟ್ ಅನಾವರಣಗೊಳಿಸಿದರು.

ಸಹಯೋಗ:

ಕಾರ್ಯಕ್ರಮದ ಟೈಟಲ್ ಸ್ಪಾನ್ಸರ್ ಆಗಿ ಜಿ.ಎಲ್. ಆಚಾರ್ಯ ಜ್ಯುವೆಲ್ಲರ್‍ಸ್, ಪವರ್ಡ್ ಬೈ ಸ್ಪಾನ್ಸರ್‌ಗಳಾಗಿ ವನಸ್ಥಾ, ಎಸ್‌ಆರ್‌ಕೆ ಲ್ಯಾಡರ್‍ಸ್ ಸಹಯೋಗ ನೀಡಿದ್ದು, ಸಹ ಪ್ರಾಯೋಜಕರಾಗಿ ಕುಮ್‌ಕುಮ್ ಫ್ಯಾಷನ್ಸ್, ಕೋಕೋಗುರು, ಶ್ರೀಕುರುಂಜಿ ಇನ್ರಾಸ್ಟ್ರಕ್ಚರ್ ಪ್ರೈ.ಲಿ., ಮುಳಿಯ ಜ್ಯುವೆಲ್ಲರ್‍ಸ್, ವೈದ್ಯರ್‍ಸ್ ಆಯುರ್ವೇದ, ಜನ್ಮ  ಫೌಂಡೇಷನ್ ಟ್ರಸ್ಟ್, ಅರುಣಾ ಏಜೆನ್ಸೀಸ್, ಸಂಯುಕ್ತ ಮೋಟಾರ್‍ಸ್, ಎಲೆಕ್ಟ್ರಿಕಲ್ ಪಾಯಿಂಟ್, ಡೀನೆಟ್ ಸರ್ವಿಸಸ್ ಪ್ರೈ.ಲಿ., ಮಹಾಸತಿ ಬಿಲ್ಡರ್‍ಸ್ ಆಂಡ್ ಡೆವಲಪರ್‍ಸ್, ಪ್ರಭು ಟೇಸ್ಟೀ ಚಾಟ್ಸ್, ಅಕ್ಷಯ ಕಾಲೇಜು, ಶಕ್ತಿ ಎಜುಕೇಶನ್ ಟ್ರಸ್ಟ್, ಲಕ್ಷ್ಮೀ ಇಂಡಸ್ಟ್ರೀಸ್, ಸವಿತಾಝ್, ಮೆಟ್ರೋ ಚಿಪ್ಸ್, ಲಹರಿ ಡ್ರೈ-ಟ್ಸ್ ಆಂಡ್ ಚಾಕೊಲೇಟ್ಸ್, ಎಂ.ಸಂಜೀವ ಶೆಟ್ಟಿ, ಮಾರ್ಕ್ ಟೆಲಿಕಾಂ, ಎಸ್‌ಕೆ ಕನ್‌ಸ್ಟ್ರಕ್ಷನ್ಸ್, ವಿಸ್ಮಯ, ಅನೀಶ್ ಎಲೆಕ್ಟ್ರಿಕಲ್ಸ್, ಓಂಕಾರ್ ಸ್ವೀಟ್ಸ್, ಇಕೋ-ಶ್, ಮಾನಕ ಜ್ಯುವೆಲ್ಲರ್‍ಸ್, ಎನ್‌ಎಚ್ ಎಂಟರ್‌ಪ್ರೈಸಸ್, ಪಾಲಾರ್ ಎಂಟರ್‌ಪ್ರೈಸಸ್, ಸುರೇಶ್ ವಾಟರ್ ಸಪ್ಲೈ, ಎವಿಜಿ ಅಸೋಸಿಯೇಟ್ಸ್, ಶಿಲ್ಪಾ ಗ್ಯಾಸ್ ಇಕ್ವಿಪ್‌ಮೆಂಟ್ಸ್, ಶ್ರೀಗಣೇಶ್ ಅಸೋಸಿಯೇಟ್ಸ್ ಆಂಡ್ ಇಂಟೀರಿಯರ್‍ಸ್, ಅಭಯ್ ಮಾರ್ಬಲ್ಸ್, ನೀಲಮ್ ಗಾರ್ಮೆಂಟ್ಸ್, ಗೀತಾ ಬಾರ್ ರೆಸ್ಟೋರೆಂಟ್, ಪುತ್ತೂರು ಡಯಾಗ್ನಾಸ್ಟಿಕ್ ರಿಸರ್ಚ್ ಸೆಂಟರ್ ಪ್ರೈ.ಲಿ., ವಿ ಮಾರ್ಟ್ ಹೈಪರ್ ಮಾರ್ಕೆಟ್, ಪೂವರಿ ತಿಂಗೊಲ್ದ ಮಾಸ ಪತ್ರಿಕೆ, ಐಆರ್‌ಸಿಎಂಡಿ, ಎಸ್‌ಡಿಪಿ ಆಯುರ್ವೇದ, ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘ, ಹಾರಕೆರೆ ಆರ್ಕಿಟೆಕ್ಟ್, ಕೋಸ್ಟಲ್ ಹೋಮ್, ಬೂಂದ್, ಐಟಿ ಸ್ಕ್ವೇರ್ ಸ್ಮಾರ್ಟ್ ಸೊಲ್ಯೂಷನ್ಸ್, ಪಲಾರ ರೆಸ್ಟೋರೆಂಟ್, ಚಾವಡಿ, ಉದಯಗಿರಿ ಫ್ಯಾಮಿಲಿ ರೆಸ್ಟೋರೆಂಟ್, ಐಶ್ವರ್ಯ ಹರ್ಬಲ್ ಬ್ಯೂಟಿ ಪಾರ್ಲರ್, ಕೆನರಾ ಬ್ಯಾಂಕ್, ವಿಕೇರ್ ಲ್ಯಾಬೊರೇಟರೀಸ್, ಚೇತನಾ ಹಾಸ್ಪಿಟಲ್ ಸಹಕರಿಸಿದರು.

ಕಟ್ಟೆಪೂಜೆ:

ಪುತ್ತೂರು ಮಹಾಲಿಂಗೇಶ್ವರ ದೇವರ ಪೇಟೆಸವಾರಿಯ ಹಿನ್ನೆಲೆಯಲ್ಲಿ ಸ್ಟಾರ್‌ನೈಟ್ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಒಕ್ಕಲಿಗ ಗೌಡ ಸಮುದಾಯ ಭವನದ ಆವರಣದಲ್ಲಿದ್ದ ಕಟ್ಟೆಗೆ ದೇವರು ಆಗಮಿಸಿ ಪೂಜೆ ಸ್ವೀಕರಿಸಿದರು. ಒಕ್ಕಲಿಗ ಗೌಡ ಸೇವಾ ಸಂಘದ ಪದಾಧಿಕಾರಿಗಳ ಸಹಿತ ಸಾವಿರಾರು ಭಕ್ತಾದಿಗಳು ದೇವರ ದರ್ಶನ ಪಡೆದು, ಪ್ರಸಾದ ಸ್ವೀಕರಿಸಿ ಕೃತಾರ್ಥರಾದರು.

ಲಂಚ-ಭ್ರಷ್ಟಾಚಾರ ವಿರುದ್ಧದ ಸುದ್ದಿ ಜನಾಂದೋಲನ ಫಲಕ ವಿತರಣೆ

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕರಾದ ಡಾ.ಯು.ಪಿ.ಶಿವಾನಂದರವರು ಮಾತನಾಡಿ, ಎಲ್ಲೆಡೆ ಸಭೆ ಸಮಾಂಭಗಳಲ್ಲಿ ಲಂಚ ಭ್ರಷ್ಟಾಚಾರದ ವಿರುದ್ಧ ಪ್ರತಿಜ್ಞೆ ಸ್ವೀಕರಿಸಲಾಗುತ್ತಿದೆ. ಫಲಕ, ಬ್ಯಾನರ್‌ಗಳನ್ನು ಅಳವಡಿಸಲಾಗುತ್ತಿದೆ.ಎಲ್ಲರಿಗೆ ಮನರಂಜನೆ ನೀಡುವುದರೊಂದಿಗೆ ಉತ್ತಮ ಜೀವನ ಲಭಿಸಲಿ, ಲಂಚ ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣವಾಗಲಿ ಎನ್ನುವ ಹಾರೈಕೆಯೊಂದಿಗೆ `ಲಂಚ ಭ್ರಷ್ಟಾಚಾರ ವಿರುದ್ಧದ ಫಲಕವನ್ನು ವೇದಿಕೆಯಲ್ಲಿದ್ದ ಗಣ್ಯರಿಗೆ ಹಸ್ತಾಂತರಿಸಿದರು.

LEAVE A REPLY

Please enter your comment!
Please enter your name here