ವಿಟ್ಲ: ಕಟ್ಟಡದ ಮೇಲ್ಬಾಗದಿಂದ ಕುಸಿದ ಹೋಲೋ ಬ್ಲಾಕ್ ಹಲವು ವಾಹನಗಳಿಗೆ ಹಾನಿ

0

ವಿಟ್ಲ: ಭಾರೀ ಮಳೆಗಾಳಿಗೆ ವಿಟ್ಲದ ವಿ.ಎಚ್ ಕಾಂಪ್ಲೆಕ್ಸ್ ನ ಪಾರ್ಕಿಂಗ್ ನಲ್ಲಿ ನಿಲ್ಲಿಸಿದ್ದ ವಾಹನಗಳ ಮೇಲೆ ಕಟ್ಟಡದಿಂದ ಸಿಮೆಂಟ್ ಹೋಲೋ ಬ್ಲಾಕ್‌ಗಳು ಬಿದ್ದು ಹಲವು ವಾಹನಗಳು ಹಾನಿಗೊಂಡ ಘಟನೆ ಏ.13ರಂದು ರಾತ್ರಿ ನಡೆದಿದೆ. ವಿಟ್ಲದಲ್ಲಿ ಎ.13ರಂದು ಸಾಯಂಕಾಲದ ವೇಳೆ ಭಾರೀ ಗಾಳಿ ಸಹಿತ ಮಳೆ ಸುರಿದಿತ್ತು. ವಿ.ಎಚ್ ಕಾಂಪ್ಲೆಕ್ಸ್ ನಲ್ಲಿ ಅಂಗಡಿ ಮಳಿಗೆಗಳ ಮುಂಭಾಗದ ಪಾರ್ಕಿಂಗ್ ನಲ್ಲಿ ದ್ವಿಚಕ್ರ ವಾಹನಗಳನ್ನು ನಿಲ್ಲಿಸಲಾಗಿತ್ತು. ಪಾರ್ಕಿಂಗ್ ನ ಮೇಲ್ಭಾಗಕ್ಕೆ ಬಿಸಿಲಿಗಾಗಿ ಹಸಿರುಬಣ್ಣದ ಪ್ಲ್ಯಾಸ್ಟಿಕ್ ಚಪ್ಪರ ಅಳವಡಿಸಲಾಗಿದ್ದು ಅದರ ಹಗ್ಗವನ್ನು ಮೇಲ್ಬಾಗದಲ್ಲಿ ಕಟ್ಟಲಾಗಿತ್ತು. ವಿಪರೀತ ಗಾಳಿ ಮಳೆಹಿನ್ನಲೆಯಲ್ಲಿ ಸಿಮೆಂಟ್ ನ ಹೋಲೊ ಬ್ಲಾಕ್ ರಾಶಿ ಗಾಳಿಗೆ ಕೆಳಗಡೆ ಕುಸಿದಿದೆ. ಇದರಿಂದ ಐದು ದ್ವಿಚಕ್ರ ವಾಹನಗಳು ಹಾನಿಗೊಂಡಿದೆ. ಮಳೆ ಬರುತ್ತಿದ್ದ ಹಿನ್ನೆಲೆಯಲ್ಲಿ ಸಾರ್ವಜನಿಕರ್ಯಾರೂ ಹೊರಗಡೆ ಇಲ್ಲದ್ದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

LEAVE A REPLY

Please enter your comment!
Please enter your name here