ಕುಂತೂರು ಅರ್ಬಿ ದೇವಸ್ಥಾನದಲ್ಲಿ ಆಟೋಟ ಸ್ಪರ್ಧೆ

0


ನೆಲ್ಯಾಡಿ: ಕಡಬ ತಾಲೂಕಿನ ಕುಂತೂರು ಗ್ರಾಮದ ಅರ್ಬಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಿಷು ಪ್ರಯುಕ್ತ ವಿವಿಧ ಆಟೋಟ ಸ್ಪರ್ಧೆ ನಡೆಯಿತು.
ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪ್ರಶಾಂತ್ ರೈ ಮನವಳಿಕೆಯವರು ಆಟೋಟ ಸ್ಪರ್ಧೆ ಉದ್ಘಾಟಿಸಿ ಮಾತನಾಡಿ, ವಿಷು ತುಳುನಾಡಿನ ವಿಶೇಷವಾದ ಹಬ್ಬ ಮತ್ತು ಸಂಸ್ಕೃತಿ ಆಗಿದೆ. ಹೊಸ ವರುಷದ ಆರಂಭದ ದಿನ ಕೂಡ ಆಗಿದೆ.

ಈ ಸಂದರ್ಭದಲ್ಲಿ ಊರಿನ ಭಕ್ತಾದಿಗಳು ದೇವಸ್ಥಾನದಲ್ಲಿ ಒಟ್ಟು ಸೇರಿ ಧಾರ್ಮಿಕ ಆಚರಣೆಯನ್ನು ಮಾಡುವುದು ಧರ್ಮ ಪ್ರಜ್ಞೆಯನ್ನು ಬೆಳೆಸುತ್ತದೆ ಎಂದು ಹೇಳಿದರು. ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಕೃಷ್ಣ ಕುಮಾರ್ ಅತ್ರಿಜಾಲು, ಪವಿತ್ರಪಾಣಿ ರಾಮಪ್ರದೀಪ್ ಆಚಾರ್ಯ ಹಾಗೂ ವಿವಿಧ ಸಮಿತಿಯ ಪದಾಧಿಕಾರಿಗಳು ಉಪಸ್ಥಿತಿದ್ದರು.

ಚೆನ್ನಕೇಶವ ರೈ ಗುತ್ತುಪಾಲು ಹಾಗೂ ಸುಬ್ರಹ್ಮಣ್ಯ ಗೌಡ ಎರ್ಮಾಳ ಕಾರ್ಯಕ್ರಮ ನಿರೂಪಿಸಿದರು. ಮಹಾಪೂಜೆಯ ಬಳಿಕ ಅರ್ಚಕರಾದ ಕೃಷ್ಣಪ್ರಸಾದ ಉಪಧ್ಯಾಯರು ನೂತನ ವರುಷದ ಪಂಚಾಗವನ್ನು ವಾಚಿಸಿದರು. ಜಿ.ಪಿ.ಶೇಷಪತಿ ರೈ ಮತ್ತು ನಾಗಪ್ಪ ಗೌಡ ಮರುವಂತಿಲರವರು ಆಟೋಸ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಣೆ ಮಾಡಿದರು. ಪುಟಾಣಿಗಳಿಗೆ, ಮಕ್ಕಳಿಗೆ, ಮಹಿಳೆಯರಿಗೆ ಹಾಗೂ ಪುರುಷರಿಗೆ ವಿವಿಧ ಆಟೋಟ ಸ್ಪರ್ಧೆ ಗಳನ್ನು ಏರ್ಪಡಿಸಲಾಗಿತ್ತು.

LEAVE A REPLY

Please enter your comment!
Please enter your name here