ಕ್ರಿಸ್ಟೋಫರ್ ಅಸೋಸಿಯೇಶನ್ ಪುತ್ತೂರು ಘಟಕ

0

  • ಅಧ್ಯಕ್ಷ:ಶರೂನ್ ಸಿಕ್ವೇರಾ,ಕಾರ್ಯದರ್ಶಿ:ಆಂಟನಿ ಒಲಿವೆರಾ,ಕೋಶಾಧಿಕಾರಿ:ಮನೋಜ್ ಡಾಯಸ್

ಪುತ್ತೂರು: ತಾಲೂಕಿನ ಕ್ರಿಶ್ಚಿಯನ್ ವಾಹನ ಚಾಲಕ-ಮಾಲಕರನ್ನು ಹೊಂದಿರುವ ಕ್ರಿಸ್ಟೋಫರ್ ಅಸೋಸಿಯೇಶನ್ ಪುತ್ತೂರು ಘಟಕದ 2022-23ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಇತ್ತೀಚೆಗೆ ಸಂತ ವಿಕ್ಟರ್ ಬಾಲಿಕಾ ಪ್ರೌಢಶಾಲೆಯಲ್ಲಿ ಜರಗಿತು.

 

ನೂತನ ಅಧ್ಯಕ್ಷರಾಗಿ ಶರೂನ್ ಸಿಕ್ವೇರಾ ಕಲ್ಲಾರೆ, ಉಪಾಧ್ಯಕ್ಷರಾಗಿ ಎಪಿಎಂಸಿ ರಸ್ತೆ ಆವಿನ್ ಕಾಂಪ್ಲೆಕ್ಸ್ ಮಾಲಕರಾದ ಮೆಲ್ವಿನ್ ಫೆರ್ನಾಂಡೀಸ್, ಕಾರ್ಯದರ್ಶಿಯಾಗಿ ಆಂಟನಿ ಒಲಿವೆರಾ ರೋಟರಿಪುರ, ಜೊತೆ ಕಾರ್ಯದರ್ಶಿಯಾಗಿ ಪಿಂಟೋ ಸ್ಟುಡಿಯೋ ಮಾಲಕ ಅರುಣ್ ಪಿಂಟೋ ಸಾಮೆತ್ತಡ್ಕ, ಕೋಶಾಧಿಕಾರಿಯಾಗಿ ಎಪಿಎಂಸಿ ರಸ್ತೆ ನಿವಾಸಿ ಮನೋಜ್ ಡಾಯಸ್‌ರವರು ಆಯ್ಕೆಯಾಗಿದ್ದು, ಸಮಿತಿ ಸದಸ್ಯರುಗಳಾಗಿ ಲೆಸ್ಲೀ ಲೋಬೋ ಮೊಟ್ಟೆತ್ತಡ್ಕ, ವಿಜಯ್ ಡಿ’ಸೋಜ ಮುರ, ಬ್ರಾಯನ್ ಸಿಕ್ವೇರಾ ಚಿಕ್ಕಪುತ್ತೂರು, ಆಲನ್ ಮಿನೇಜಸ್ ಕಲ್ಲಿಮಾರು, ವಿಕ್ಟರ್ ಶರೂನ್ ಸಿಕ್ವೇರಾ ಗುಂಡ್ಯಡ್ಕ, ಪಾವ್ಲ್ ಮೊಂತೇರೋ ಕಲ್ಲಾರೆ, ರೋಹನ್ ಡಾಯಸ್ ಕಲ್ಲಿಮಾರು, ಪ್ರೀತಿ ಫೆರ್ನಾಂಡೀಸ್ ಎಪಿಎಂಸಿ ರಸ್ತೆ, ನಿಶಾ ಡಾಯಸ್ ಎಪಿಎಂಸಿ ರಸ್ತೆ, ಫೆಬಿಯನ್ ಗೋವಿಯಸ್ ದರ್ಬೆ, ರೋಯ್ಸ್ ಪಿಂಟೋ ದರ್ಬೆ, ನಿರ್ಗಮನ ಅಧ್ಯಕ್ಷ ರೋಶನ್ ಡಾಯಸ್ ಬಪ್ಪಳಿಗೆರವರು ಆಯ್ಕೆಯಾಗಿದ್ದಾರೆ.

ನೂತನ ಅಧ್ಯಕ್ಷರಾದ ಶರೂನ್ ಸಿಕ್ವೇರಾರವರು ಬ್ಲಾಕ್ ಕಾಂಗ್ರೆಸ್ ಕಾರ್ಮಿಕ ಘಟಕದ ಪ್ರಸ್ತುತ ಅಧ್ಯಕ್ಷರಾಗಿ, ಡೊನ್ ಬೊಸ್ಕೊ ಕ್ಲಬ್‌ನ ಮೂರು ಬಾರಿ ಅಧ್ಯಕ್ಷರಾಗಿ, ಮಾಯಿದೆ ದೇವುಸ್ ಚರ್ಚ್‌ನ ಕಲ್ಲಾರೆ ವಾಳೆಯ ಪ್ರತಿನಿಧಿಯಾಗಿ ಮೂರು ಬಾರಿ, ಚರ್ಚ್ ಪಾಲನಾ ಸಮಿತಿಯ ಸದಸ್ಯರಾಗಿ, ಪುತ್ತೂರು ಇಂಟಕ್ ಉಪಾಧ್ಯಕ್ಷರಾಗಿ, ಸಾಮೆತ್ತಡ್ಕ ಯುವಕ ಮಂಡಲದ ಸದಸ್ಯರಾಗಿ, ಕಥೋಲಿಕ್ ಸಭಾದ ಸದಸ್ಯರಾಗಿ, ಕ್ರಿಶ್ಚಿಯನ್ ಯೂನಿಯನ್‌ನ ಮಾಜಿ ಸದಸ್ಯರಾಗಿ ಸೇವೆ ಹಾಗೂ ಪುತ್ತೂರು ನಗರಸಭೆಗೆ ಸಾಮೆತ್ತಡ್ಕ ವಾರ್ಡ್‌ನಿಂದ ಆಭ್ಯರ್ಥಿಯಾಗಿ ಸ್ಪರ್ಧಿಸಿರುತ್ತಾರೆ.

ಕಾರ್ಯದರ್ಶಿಯಾಗಿ ಆಯ್ಕೆಯಾದ ಆಂಟನಿ ಒಲಿವೆರಾರವರು ಸಂತ ವಿಕ್ಟರ್ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ಹಾಗೂ ಸಂತ ಫಿಲೋಮಿನಾ ಕಾಲೇಜಿನ ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿರುತ್ತಾರೆ. ಕೋಶಾಧಿಕಾರಿಯಾಗಿ ಆಯ್ಕೆಯಾದ ಮನೋಜ್ ಡಾಯಸ್‌ರವರು ಎಪಿಎಂಸಿ ರಸ್ತೆ ಕ್ರಿಸ್ಟೋಫರ್ ಕಾಂಪ್ಲೆಕ್ಸ್‌ನಲ್ಲಿ ವ್ಯವಹರಿಸುತ್ತಿರುವ ಕ್ರಿಸ್ಟೋಫರ್ ಸಮೂಹ ಸಂಸ್ಥೆಗಳ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here