ಮಂಗಳೂರು ವಿ.ವಿ ಸ್ನಾತಕ, ಸ್ನಾತಕೋತ್ತರ ಪದವಿ ರ‍್ಯಾಂಕ್ ಪ್ರಕಟ

0

  • ಸ್ನಾತಕ 6, ಸ್ನಾತಕೋತ್ತರ 11 ಸೇರಿದಂತೆ ಫಿಲೋಮಿನಾ ಕಾಲೇಜಿಗೆ 17 ರ‍್ಯಾಂಕ್‌ಗಳು
  • ಸ್ನಾತಕೋತ್ತರ ವಿಭಾಗದ ಜೈನಾಬತ್ ರಮ್ಸೀನಾ, ಸುಶ್ಮಿತಾರವರಿಗೆ ಪ್ರಥಮ ರ‍್ಯಾಂಕ್
  • ಎಂಕಾಂ-8, ಬಿಎಸ್ಸಿ-3, ಬಿಬಿಎ-2, ಬಿಎ-1 ರ‍್ಯಾಂಕ್ , ಎಂಎಸ್ಸಿ ಕಂಪ್ಯೂಟರ್ ಸೈನ್ಸ್,ಎಂಎಸ್ಸಿ ಫಿಸಿಕ್ಸ್,ಎಂಎಸ್‌ಡಬ್ಲ್ಯೂಗೆ ತಲಾ 1 ರ‍್ಯಾಂಕ್

ಪುತ್ತೂರು: ಮಂಗಳೂರು ವಿಶ್ವವಿದ್ಯಾನಿಲಯ(ವಿ.ವಿ)ವು 2020-21ನೇ ಸಾಲಿನ ಸ್ನಾತಕ ಹಾಗೂ ಸ್ನಾತಕೋತ್ತರ ಪದವಿ ರ‍್ಯಾಂಕ್‌ಗಳು ಪ್ರಕಟಗೊಂಡಿದ್ದು, ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಸಂತ ಫಿಲೋಮಿನಾ ಕಾಲೇಜಿನ ಸ್ನಾತಕ ಹಾಗೂ ಸ್ನಾತಕೋತ್ತರ ಪದವಿ ವಿಭಾಗಕ್ಕೆ ಬರೋಬ್ಬರಿ 17 ರ‍್ಯಾಂಕ್‌ಗಳು ಲಭಿಸಿವೆ.

 

 

ಸ್ನಾತಕ ವಿಭಾಗದಲ್ಲಿ 6 ರ‍್ಯಾಂಕ್‌ಗಳು ಹಾಗೂ ಸ್ನಾತಕೋತ್ತರ ಪದವಿ ವಿಭಾಗದಲ್ಲಿ 11  ರ‍್ಯಾಂಕ್‌ಗಳು ಲಭಿಸಿದ್ದು, ಕಾಲೇಜಿನ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಗರಿಷ್ಟ ರ‍್ಯಾಂಕ್‌ಗಳು ಲಭಿಸಿರುವುದಾಗಿದೆ. ಈ ಹಿಂದೆ ನಾಲ್ಕೈದು ಬಾರಿ 9 ರ‍್ಯಾಂಕ್‌ಗಳು ಕಾಲೇಜಿಗೆ ಲಭಿಸಿದ ದಾಖಲೆ ಹೊಂದಿತ್ತು. ಈ ಬಾರಿಯ ರ‍್ಯಾಂಕ್ ಪಡೆದುಕೊಂಡವರಲ್ಲಿ 16 ಮಂದಿ ಮಹಿಳೆಯರು, ಓರ್ವ ಮಾತ್ರ ಪುರುಷ ಆಗಿದ್ದು ಕಾಲೇಜಿನಲ್ಲಿ ಮಹಿಳೆಯರೇ ಮೇಲುಗೈ ಎನಿಸಿಕೊಂಡಿದ್ದಾರೆ. 17 ರ‍್ಯಾಂಕ್‌ಗಳಲ್ಲಿ ಎಂಕಾಂಗೆ ಗರಿಷ್ಟ 8  ರ‍್ಯಾಂಕ್‌ಗಳು ಲಭಿಸಿದ್ದು, ಉಳಿದಂತೆ ಎಂಎಸ್ಸಿ ಕಂಪ್ಯೂಟರ್ ಸೈನ್ಸ್, ಎಂಎಸ್ಸಿ ಫಿಸಿಕ್ಸ್, ಎಂಎಸ್‌ಡಬ್ಲ್ಯೂ ತಲಾ 1 ರ‍್ಯಾಂಕ್, ಬಿಎಸ್ಸಿ 3 , ಬಿಬಿಎ 2, ಬಿಎ 1 ರ‍್ಯಾಂಕ್‌ಗಳು ಲಭಿಸಿವೆ.

ಸ್ನಾತಕ ವಿಭಾಗ:
ಸ್ನಾತಕ ವಿಭಾಗದಲ್ಲಿ ಬಿಎಸ್ಸಿಯ ಅನು ಡಿ(ಸುಳ್ಯ ದೆಂಗೋಡಿ ಚೆನ್ನಪ್ಪ ಡಿ ಹಾಗೂ ಜಯ ಎ.ರವರ ಪುತ್ರಿ)ರವರು ಶೇ.೯೬.೪೩ ಅಂಕಗಳೊಂದಿಗೆ ೪ನೇ ರ‍್ಯಾಂಕ್, ಬಿಬಿಎ ವಿಭಾಗದ ರಾಶಿಯಾ ರೈ ಎಂ(ದೇಲಂಪಾಡಿ ನಿವಾಸಿ ರಾಮಕೃಷ್ಣ ರೈ ಹಾಗೂ ವಿಶಾಲಾಕ್ಷಿರವರ ಪುತ್ರಿ)ರವರು ಶೇ.೮೯.೫೯ ಅಂಕಗಳೊಂದಿಗೆ ೫ನೇ ರ‍್ಯಾಂಕ್, ಬಿಎ ವಿಭಾಗದಲ್ಲಿ ಚೇತನಾ ಎನ್(ನಿಡ್ಪಳ್ಳಿ ನಿವಾಸಿ ಶ್ರೀಪತಿ ಭಟ್ ಹಾಗೂ ಜಯಲಕ್ಷ್ಮೀರವರ ಪುತ್ರಿ)ರವರು ಶೇ.೮೬.೧೦ ಅಂಕಗಳೊಂದಿಗೆ ೬ನೇ ರ‍್ಯಾಂಕ್, ಬಿಬಿಎ ವಿಭಾಗದ ಶ್ರೇಯಾ ಕೆ.ಎಸ್(ಬದಿಯಡ್ಕ ನಿವಾಸಿ ಶ್ರೀಧರ ಕೆ ಹಾಗೂ ಸುನೀತಾ ಕೆ.ರವರ ಪುತ್ರಿ)ರವರು ಶೇ.೮೮.೮೪ ಅಂಕಗಳೊಂದಿಗೆ ೭ನೇ ರ‍್ಯಾಂಕ್, ಬಿಎಸ್ಸಿ ವಿಭಾಗದ ರೆನಿಲ್ಡಾ ಜೋಯ್ಸ್ ಮಾರ್ಟಿಸ್(ಪರ್ಲಡ್ಕ ರೊನಾಲ್ಡ್ ಮಾರ್ಟಿಸ್ ಹಾಗೂ ಲಿಲ್ಲಿ ಮೇರಿ ಮಾರ್ಟಿಸ್‌ರವರ ಪುತ್ರಿ)ರವರು ಶೇ.೯೫.೬೦ ಅಂಕಗಳೊಂದಿಗೆ ೯ನೇ ರ‍್ಯಾಂಕ್, ಬಿಎಸ್ಸಿ ವಿಭಾಗದ ರಮ್ಯಶ್ರೀ ರೈ(ಕೈಕಾರ ನಿವಾಸಿ ಸುಧಾಕರ ರೈ ಹಾಗೂ ಭಾರತಿ ಎಸ್.ರೈಯವರ ಪುತ್ರಿ)ರವರು ಶೇ.೯೫.೫೫ ಅಂಕಗಳೊಂದಿಗೆ ೧೦ನೇ ರ‍್ಯಾಂಕ್‌ಗಳನ್ನು ಪಡೆದಿರುತ್ತಾರೆ.

ಸ್ನಾತಕೋತ್ತರ ವಿಭಾಗ:
ಕಾಲೇಜಿನ ಸ್ನಾತಕೋತ್ತರ ಪದವಿಯಲ್ಲಿ ಅಂಕಗಳನ್ನು ಸಂಚಿತ ಗ್ರೇಡ್ ಪಾಯಿಂಟ್ ಸರಾಸರಿಯಲ್ಲಿ ನೀಡಲಾಗುತ್ತಿದ್ದು, ಅದರಂತೆ ಎಂಎಸ್ಸಿ ಕಂಪ್ಯೂಟರ್ ಸೈನ್ಸ್‌ನ ಜೈನಾಬತ್ ರಮ್ಸೀನಾ ಎನ್(ಬೆಳ್ಳಾರೆ ನಿವಾಸಿ ಹನೀಫ್ ಎನ್.ಎಂ ಹಾಗೂ ನಸೀಮಾ ಕೆ.ಎಂರವರ ಪುತ್ರಿ)ರವರು ಶೇ.೯.೨೫ ಅಂಕಗಳೊಂದಿಗೆ ಪ್ರಥಮ ರ‍್ಯಾಂಕ್, ಎಂಎಸ್ಸಿ ಫಿಸಿಕ್ಸ್‌ನ ಸುಶ್ಮಿತಾ ಕೆ(ನೈತಾಡಿ ನಿವಾಸಿ ಸುಭಾಶ್‌ಚಂದ್ರ ಕೆ ಹಾಗೂ ಯಶೋಧರವರ ಪುತ್ರಿ)ರವರು ಶೇ.೮.೪೬ ಅಂಕಗಳೊಂದಿಗೆ ಪ್ರಥಮ ರ‍್ಯಾಂಕ್, ಎಂಎಸ್‌ಡಬ್ಲ್ಯೂನ ಸಾರಮ್ಮ ಟಿ.ಜೆ(ಸಿದ್ಧಾಪುರ ನಿವಾಸಿ ಜೋಸೆಫ್ ಹಾಗೂ ಲಿಲ್ಲಿರವರ ಪುತ್ರಿ)ರವರು ಶೇ.೮.೩೩ ಅಂಕಗಳೊಂದಿಗೆ ದ್ವಿತೀಯ ರ‍್ಯಾಂಕ್, ಎಂಕಾಂನ ನಿರೀಶ್ಮಾ ಎನ್.ಸುವರ್ಣ(ಅಮ್ಮುಂಜ ನಿವಾಸಿ ಎಂ.ನೇಮಾಕ್ಷ ಸುವರ್ಣ ಹಾಗೂ ಭವಾನಿರವರ ಪುತ್ರಿ)ರವರು ಶೇ.೮.೪೩ ಅಂಕಗಳೊಂದಿಗೆ ನಾಲ್ಕನೇ ರ‍್ಯಾಂಕ್, ಎಂಕಾಂನ ಯಶಸ್ವಿನಿ ಬಿ(ಸುಳ್ಯ ಅಲೆಟ್ಟಿ ನಿವಾಸಿ ಸೂರ‍್ಯನಾರಾಯಣ ಭಟ್ ಬಿ ಹಾಗೂ ಜಯಲಕ್ಷ್ಮೀ ಬಿರವರ ಪುತ್ರಿ)ರವರು ಶೇ.೮.೩೩ ಅಂಕಗಳೊಂದಿಗೆ ೫ನೇ ರ‍್ಯಾಂಕ್, ಎಂಕಾಂನ ರಕ್ಷಾ ಎಸ್.ವಿ(ಮೂಡಿಗೆರೆ ನಿವಾಸಿ ವೀರಪ್ಪ ಗೌಡ ಹಾಗೂ ಪುಷ್ಪಾರವರ ಪುತ್ರಿ)ರವರು ಶೇ.೮.೩೩ ಅಂಕಗಳೊಂದಿಗೆ ೫ನೇ ರ‍್ಯಾಂಕ್, ಎಂಕಾಂನ ನಿವಿನ್ ಕೊರೆಯಾ(ಸಕಲೇಶಪುರ ನಿವಾಸಿ ಪ್ರಕಾಶ್ ಕೊರೆಯಾ ಹಾಗೂ ಟ್ರೆಸ್ಸಿರವರ ಪುತ್ರ)ರವರು ಶೇ.೮.೨೭ ಅಂಕಗಳೊಂದಿಗೆ ೬ನೇ ರ‍್ಯಾಂಕ್, ಎಂಕಾಂನ ಶ್ರಾವ್ಯ ಎನ್.ಎಸ್(ಸುಳ್ಯ ಬಾಣಬೆಟ್ಟು ನಿವಾಸಿ ಸಾಂತಪ್ಪ ಎನ್ ಹಾಗೂ ಪದ್ಮಾವತಿ ಪಿರವರ ಪುತ್ರಿ)ರವರು ಶೇ.೮.೨೩ ಅಂಕಗಳೊಂದಿಗೆ ೭ನೇ ರ‍್ಯಾಂಕ್, ಎಂಕಾಂನ ಭವ್ಯಶ್ರೀ ವೈ(ಕಾಸರಗೋಡು ನಿವಾಸಿ ಯಾದವ ಆಚಾರ್ಯ ಹಾಗೂ ಗೀತಾ ಬಿ.ರವರ ಪುತ್ರಿ)ರವರು ಶೇ.೮.೨೩ ಅಂಕಗಳೊಂದಿಗೆ ೭ನೇ ರ‍್ಯಾಂಕ್, ಎಂಕಾನ ರಮ್ಯ ಎಂ(ಕಾವು ನಿವಾಸಿ ಶಿವಪ್ಪ ನಾಕ್ ಹಾಗೂ ಸರಸ್ವತಿರವರ ಪುತ್ರಿ)ರವರು ಶೆ.೮.೧೭ ಅಂಕಗಳೊಂದಿಗೆ ೯ನೇ ರ‍್ಯಾಂಕ್, ಎಂಕಾಂನ ಸ್ವಾತಿ ಎಂ(ನೆಟ್ಟಣಿಗೆ ಮುಡ್ನೂರು ನಿವಾಸಿ ದಿ.ಚೋಮ ನಾಕ್ ಹಾಗೂ ಗೀತಾರವರ ಪುತ್ರಿ)ರವರು ಶೇ.೮.೧೩ ಅಂಕಗಳೊಂದಿಗೆ ೧೦ನೇ ರ‍್ಯಾಂಕ್ ಗಳಿಸಿಕೊಂಡಿದ್ದಾರೆ ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.

ಸಂಸ್ಥೆಯ ಮುಕುಟಕ್ಕೆ ಮತ್ತೊಂದು ಗರಿ…
ಸಂತ ಫಿಲೋಮಿನಾ ಕಾಲೇಜು ತನ್ನ ಸ್ಥಾಪನೆಯಿಂದಲೂ ಶಿಕ್ಷಣ ಹಾಗೂ ಕ್ರೀಡಾ ಕ್ಷೇತ್ರಗಳಲ್ಲಿ ತನ್ನದೇ ಆದ ಅದ್ವಿತೀಯ ಸ್ಥಾನವನ್ನು ಗಳಿಸಿದೆ. ದೇಶ-ವಿದೇಶಗಳಲ್ಲಿ ಸಮಾಜಕ್ಕೆ ಗಣನೀಯ ಕೊಡುಗೆಯನ್ನು ನೀಡುತ್ತಿರುವ ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳು ಇದಕ್ಕೆ ಸಾಕ್ಷಿ. ಸಂಸ್ಥೆಯು ನೀಡುವ ವಿದ್ಯೆಯ ಗುಣಮಟ್ಟವು ವಿದ್ಯಾರ್ಥಿಗಳ ಫಲಿತಾಂಶಗಳಲ್ಲಿ ಪ್ರತಿಫಲಿಸುವುದು ನಮಗೆ ಸಂತಸದ ವಿಷಯ. ಹದಿನೇಳು ರ‍್ಯಾಂಕ್‌ಗಳನ್ನು ಪಡೆದು ಸಂಸ್ಥೆಯ ಮುಕುಟಕ್ಕೆ ಮತ್ತೊಂದು ಗರಿ ಪೋಣಿಸಿದೆ ಮತ್ತು ಈ ಘನತೆ ಇನ್ನೂ ಉನ್ನತಿಗೇರಲಿ ಎಂದು ಹಾರೈಸುತ್ತೇನೆ. ರ‍್ಯಾಂಕ್ ವಿಜೇತರಿಗೆ ಶುಭ ಕೋರುತ್ತಾ ಅವರ ಯಶಸ್ಸಿಗೆ ಕಾರಣೀಕರ್ತ ಆಡಳಿತ ಮಂಡಳಿಗೆ, ಉಪನ್ಯಾಸಕರಿಗೆ, ಪೋಷಕರಿಗೆ ಹಾಗೂ ಹಿರಿಯ ವಿದ್ಯಾರ್ಥಿಗಳಿಗೆ ಹೃದಯಾಂತರಾಳದಿಂದ ಧನ್ಯವಾದ ಸಮರ್ಪಿಸುತ್ತೇನೆ. -ವಂ|ಡಾ|ಆಂಟನಿ ಪ್ರಕಾಶ್ ಮೊಂತೇರೋ, ಪ್ರಾಂಶುಪಾಲರು, ಸಂತ ಫಿಲೋಮಿನಾ ಕಾಲೇಜು

LEAVE A REPLY

Please enter your comment!
Please enter your name here