ಎ.22:ಮಣ್ಣಾಪು ಕ್ಷೇತ್ರದಲ್ಲಿ ‘ಮಾಯೋದ ಪರೆಲ್-ಮಣ್ಣಾಪುದ ನಿರೆಲ್’ ತುಳು ಭಕ್ತಿಗೀತೆ ಬಿಡುಗಡೆ, ಧ್ರುವತಾರೆಗಳಿಗೆ ಗೌರವ ಸಮರ್ಪಣೆ

0

ಪುತ್ತೂರು: ಕೆಮ್ಮಿಂಜೆ ಗ್ರಾಮದ ಮೊಟ್ಟೆತ್ತಡ್ಕ ಮಣ್ಣಾಪು ಶ್ರೀ ಸ್ವಾಮಿ ಕೊರಗಜ್ಜ ಮತ್ತು ಶ್ರೀ ಆದಿನಾಗ ಬ್ರಹ್ಮ ಮೊಗೇರ್ಕಳ ದೈವಸ್ಥಾನದಲ್ಲಿ ಮಣ್ಣಾಪು ಕ್ಷೇತ್ರದ ಕಾರಣಿಕ ಶಕ್ತಿ ಸ್ವಾಮಿ ಕೊರಗಜ್ಜ ದೈವದ ತುಳು ಭಕ್ತಿಗೀತೆ ‘ಮಾಯೋದ ಪರೆಲ್-ಮಣ್ಣಪುದ ನಿರೆಲ್’ ಬಿಡುಗಡೆ ಹಾಗೂ ತುಳುನಾಡ ಭಕ್ತಿ ಗಾಯನ ಲೋಕದ ಧ್ರುವತಾರೆಗಳಿಗೆ ಗೌರವ ಸಮರ್ಪಣಾ ಕಾರ್ಯಕ್ರಮ ಎ.22 ರಂದು ಸಂಜೆ ಮಣ್ಣಾಪು ಶ್ರೀ ಕ್ಷೇತ್ರದಲ್ಲಿ ನಡೆಯಲಿದೆ.

ಏಳ್ಮುಡಿ ವಿಶ್ವಾಸ್ ಎಂಟರ್‌ಪ್ರೈಸಸ್‌ನ ಶ್ರೀಕಾಂತ್ ಶೆಣೈಯವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ರೇಖನಾಥ ರೈ ಸಂಪ್ಯದಮೂಲೆ, ಶ್ರೀ ಕ್ಷೇತ್ರ ಮಣ್ಣಾಪು ಇದರ ಅಧ್ಯಕ್ಷ ವಿಶ್ವನಾಥ ಆರ್.ಕೆಮ್ಮಿಂಜೆ, ದೈವದ ಪ್ರಧಾನ ಅರ್ಚಕರಾದ ಕುಂಡ ಮುಗೇರ ಹಾಗೂ ಅಣ್ಣು, ಮಧ್ಯಸ್ತ ಗಣೇಶ್ ಪೂಜಾರಿ ಕೆಮ್ಮಿಂಜೆ, ಪ್ರಧಾನ ಕಾರ್ಯದರ್ಶಿ ದಿನೇಶ್ ಕೆಮ್ಮಿಂಜೆ, ನಿಂತಿಕಲ್ ಆರಾಧ್ಯ ಫೊಟೊ ಸ್ಟುಡಿಯೋದ ಯತಿನ್ ಕೆ, ಯುವ ಸಾಹಿತ್ಯಗಾರ ಯಶವಂತ ಕಲಾಯಿರವರು ಭಾಗವಹಿಸಲಿರುವರು. ಈ ಸಂದರ್ಭದಲ್ಲಿ ತುಳುನಾಡ ಅದ್ಭುತ ಗಾಯಕ, ಗಾಯನ ಲೋಕದ ಧ್ರುವತಾರೆ ಗುಣಪ್ರಸಾದ್ ಕುಕ್ಕಟೆ ಹಾಗೂ ಗಾಯಕಿ ಪೂಜಾ ಸನಿಲ್‌ರವರಿಗೆ ಗೌರವ ಕಾರ್ಯಕ್ರಮ ನಡೆಯಲಿರುವುದು. ಸಂಜೆ ಗಂಟೆ ಐದರಿಂದ ಮಣ್ಣಾಪು ಶ್ರೀ ಸ್ವಾಮಿ ಕೊರಗಜ್ಜ ಭಜನಾ ಮಂಡಳಿ ಹಾಗೂ ಪಾಲಿಂಜೆ ಶ್ರೀ ಮಹಾವಿಷ್ಣು ಮಹಿಳಾ ಭಜನಾ ಮಂಡಳಿ ಸದಸ್ಯರಿಂದ ಭಜನಾ ಕಾರ್ಯಕ್ರಮ ನೆರವೇರಲಿದೆ ಎಂದು ಶ್ರೀ ಕ್ಷೇತ್ರ ಮಣ್ಣಾಪು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here