ಮಿತ್ತೂರಿನಲ್ಲಿ ಎಂ.ಆರ್.ಪಿ.ಎಲ್. ನ HiQ ಘಟಕ ಶುಭೋದಯ ಫ್ಯೂಯೆಲ್ಸ್ ಶುಭಾರಂಭ

0

  • ಕೃಷಿಕರು ಕೃಷಿಯೊಂದಿಗೆ ಉದ್ಯಮ ಮಾಡಿದಾಗ ಬದಲಾವಣೆ ಸಾಧ್ಯ: ಸಂಜೀವ ಮಠಂದೂರು
  • ಗ್ರಾಮ ವಿಕಾಸದ ಕಲ್ಪನೆ ಈ‌ ಶುಭೋದಯದಿಂದ ಸಾಕಾರಗೊಂಡಿದೆ: ಎಸ್.ಆರ್.ರಂಗಮೂರ್ತಿ
ವಿಟ್ಲ:  ಕೃಷಿಕರು ಕೃಷಿಯೊಂದಿಗೆ ಉದ್ಯಮ ಮಾಡಿದಾಗ ಬದಲಾವಣೆ ಸಾಧ್ಯ.  ಸವಾಲುಗಳನ್ನು ಮೆಟ್ಟಿನಿಂತ ಧೀಮಂತ ವ್ಯಕ್ತಿ ಬೈಪದವು ಗೋಪಾಲಕೃಷ್ಣ ಭಟ್. ಓರ್ವ ಕೃಷಿಕರಾಗಿ  ಗ್ರಾಮ ನಿರ್ಮಾಣದ ಮೂಲಕ‌ ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡುವ ಮೂಲಕ ಇತರರಿಗೆ ಅವರು ಮಾದರಿಯಾಗಿದ್ದಾರೆ. ಎಂ.ಆರ್.ಪಿ.ಎಲ್. ತನ್ನ ಉತ್ಪನ್ನಗಳ ಕ್ವಾಲಿಟಿಗೆ ಎಂದು ರಾಜಿ ಮಾಡಿಕೊಂಡಿಲ್ಲ. ಸಂಸ್ಥೆಯ ಸಂಪಾದನೆಯಲ್ಲಿ  ಒಂದಂಶವನ್ನು ಸಮಾಜದ ಏಳಿಗೆಗಾಗಿ ನೀಡುತ್ತಿರುವುದು ಅಭಿನಂದನೀಯ ಎಂದು ಪುತ್ತೂರು ಶಾಸಕರಾದ ಸಂಜೀವ ಮಠಂದೂರುರವರು ಹೇಳಿದರು. 
ಅವರು ಏ.24ರಂದು  ಮಾಣಿ-ಮೈಸೂರು ಹೆದ್ದಾರಿಯ ಮಿತ್ತೂರು ಎಂಬಲ್ಲಿ ಗೋಪಾಲಕೃಷ್ಣ ಭಟ್ ಬೈಪದವು ರವರ ಮಾಲಕತ್ವದ ಎಂ.ಆರ್.ಪಿ.ಎಲ್. ನ HiQನ ಘಟಕ ಶುಭೋದಯ ಫ್ಯೂಯೆಲ್ಸ್ ನ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕೃಷಿಯೊಂದಿಗೆ ಇಂತಹ ಉದ್ದಿಮೆಗಳನ್ನು‌ ನಡೆಸಲು ಸಾಧ್ಯ ಎಂದು ಗೋಪಾಲಕೃಷ್ಣ ಭಟ್ ರವರು ತೋರಿಸಿಕೊಟ್ಟಿದ್ದಾರೆ. ಉದ್ಯಮಿಯಾಗಿ ಇತರರಿಗೆ ಉದ್ಯೋಗ ನೀಡಿ ಊರಿನ ಏಳಿಗೆಗಾಗಿ ಇವರ ಪ್ರಯತ್ನ ಅಭಿನಂದನೀಯ. ಸ್ವದೇಶಿ ಚಿಂತನೆಯ ಉದ್ಯಮ ದೇಶದಲ್ಲಿ ಬರಬೇಕು. ಆಗ ಹಳ್ಳಿ ಹಳ್ಳಿಗಳಲ್ಲಿ ಗ್ರಾಮಸ್ವರಾಜ್ಯದ ಪರಿಕಲ್ಪನೆ‌ ಸಾಕಾರವಾಗುತ್ತದೆ‌. ಪ್ರತಿ ಹಳ್ಳಿಗಳು ನಗರಗಳಾಗಿ ಪರಿವರ್ತನೆಯಾಗಲು ಸಾಧ್ಯ. ಗ್ರಾಮದ ಏಳಿಗೆಗಾಗಿ ತನ್ನನ್ನು ತಾನು ತೊಡಗಿಸಿಕೊಂಡ ವ್ಯಕ್ತಿ ಬೈಪದವು ಗೋಪಾಲಕೃಷ್ಣ ಭಟ್. ಅವರ ಕನಸಿನ ಕೂಸು ಶುಭೋದಯ ಫ್ಯೂಯೆಲ್ಸ್ ಇದೀಗ  ಲೋಕಾರ್ಪಣೆ ಗೊಂಡಿದ್ದು ಜನರು ಸಹಕಾರ ನೀಡಬೇಕೆಂದು ಹೇಳಿ ಶುಭಕೋರಿದರು.
 ಎಸ್.ಆರ್.ರಂಗಮೂರ್ತಿ ಪುಣಚರವರು ಸಂಸ್ಥೆಯನ್ನು ಉದ್ಘಾಟಿಸಿ ಮಾತನಾಡಿ  ಇಡ್ಕಿದುವಿಗೆ  ಇಡೀ‌ ದೇಶದಲ್ಲೇ ಹೆಸರಿದೆ. ಕಾರಣ ಬಹಳ ಹಳೇಯದಾಗಿರುವ ಸಂಘಟನೆ ಕಾರ್ಯ ಪ್ರಭಲವಾಗಿ ಬೆಳೆದಿರುವುದು. ಸಂಘದ ಪ್ರೇರಣೆಯಿಂದ ಗ್ರಾಮ ವಿಕಾಸದ ಕೆಲಸ ಗ್ರಾಮದಲ್ಲಾಗಿದೆ.  ಇದರ ಮಾಡೆಲ್ ನೋಡಲೂ ಇಡೀ ದೇಶದಿಂದ ಇಡ್ಕಿದುವಿಗೆ ಜನ ಬಂದಿದ್ದಾರೆ. ಗ್ರಾಮ ವಿಕಾಸದ ಚಟುವಟಿಕೆಯಿಂದ ಇಡೀ ದೇಶಕ್ಕೆ  ಇಡ್ಕಿದು ಗ್ರಾಮ ಮಾದರಿ‌ಯಾಗಿದೆ. ಗ್ರಾಮ ವಿಕಾಸದ ಕಲ್ಪನೆ ಈ‌ ಶುಭೋದಯದಲ್ಲಿ ಸಾಕಾರಗೊಂಡಿದೆ. ಜಗತ್ತಿನ ಆರ್ಥಿಕ ವ್ಯವಸ್ಥೆ ಕುಸಿಯುತ್ತಿದೆ‌. ಆದರೆ ಭಾರದಲ್ಲಿ ಗಣನೀಯವಾಗಿ ಮೇಲಕ್ಕೇರುತ್ತಿದೆ. ಇದಕ್ಕೆ ಕಾರಣ ಪ್ರಧಾನಿಯವರ ಟೀಮ್ ನ ಆರ್ಥಿಕ ಹಾಗೂ ಜಾಗತಿಕ ನೀತಿ. ಇದೊಂದು ಅತ್ಯದ್ಬುತ ಸೃಷ್ಟಿ. ಈ ಶುಭೋದಯ ಫ್ಯೂಯೆಲ್ಸ್ ಗೋಪಾಲಕೃಷ್ಣ ಭಟ್ ಬೈಪದವುರವರ ನಿಷ್ಠೆ ಮತ್ತು ಪ್ರಾಮಾಣಿಕತೆಗೆ ಸಿಕ್ಕ ಪ್ರತಿಫಲ ಎಂದರು.
 ಸುಬ್ರಮಣ್ಯ ಭಟ್ ಕೆ. ಉರಿಮಜಲುರವರು ಮಾತನಾಡಿ ಮಿತ್ತೂರಿನ ಹೆಸರು ಹತ್ತೂರಿನಲ್ಲಿ ಪಸರಿಸುವ ಕೆಲಸ ಈ ಶುಭೋದಯ ಫ್ಯೂಯೆಲ್ಸ್ ನಿಂದ ಆಗಲಿ ಎಂದು ಹೇಳಿ ಶುಭಹಾರೈಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ  ಎಂ.ಆರ್.ಪಿ. ಎಲ್ ನ ಚೀಫ್ ರೀಜನಲ್ ಮ್ಯಾನೇಜರ್ ಲಕ್ಷ್ಮೀಶ ರಾವ್ ರವರು ಮಾತನಾಡಿ ದಕ್ಷಿಣ ಕನ್ನಡ ಮತ್ತು ಉತ್ತರ ಕೇರಳದಲ್ಲಿ ಎಂ.ಆರ್.ಪಿ.ಎಲ್. ನ ಇಂತಹ ೩೪ ಔಟ್ಲೇಟ್ ಗಳು  ಕಾರ್ಯಾಚರಿಸುತ್ತಿದೆ. ಮುಂದಿನ ದಿನಗಳಲ್ಲಿ ದೇಶದ ಹಲವೆಡೆ ಔಟ್ಲೇಟ್ ತೆರೆಯುವ ಇರಾದೆ ಸಂಸ್ಥೆಗೆ ಇದೆ. ಗ್ರಾಹಕರಿಂದ ನಮಗೆ  ಉತ್ತಮ ಸ್ಪಂಧನೆ ದೊರೆತಿದೆ. ನಮ್ಮ ಪ್ರಾಡೆಕ್ಟ್ ಫ್ಯೂರ್ & ಗ್ಯಾರೆಂಟಿಯಾಗಿದೆ. ಕ್ವಾಲಿಟಿ ಬಗ್ಗೆ ಯಾವುದೇ ರಾಜಿ ಇಲ್ಲ.  ಈ ಬಗ್ಗೆ ಯಾವುದೇ ಸಂದೇಹ ಬೇಡ ಎಂದರು. 
 ಕೋಲ್ಪೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಸುರೇಶ್ ಕೆ.ಯಸ್. ಮುಕ್ಕುಡರವರು‌ ಮಾತನಾಡಿ ಗೋಪಾಲಕೃಷ್ಣ ಭಟ್ ಬೈಪದವುರವರ ಕಳೆದ ಮೂರು ವರ್ಷಗಳ ಪ್ರಯತ್ನ ಈಗ ಈಡೇರಿದೆ. ಹಲವಾರು ಕಷ್ಟ ನಷ್ಟಗಳನ್ನು ಸಹಿಸಿ ಮುನ್ನಡೆದ ಅವರು  ಶುಭೋದಯ ಫ್ಯೂಯೆಲ್ಸ್ ಅನ್ನು ಕಟ್ಟಿದ್ದಾರೆ. ಸಂಸ್ಥೆಗೆ ಶುಭವಾಗಲಿ ಎಂದರು. 
ಕೋಲ್ಪೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದ ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಪಿ. ರಾಜಾರಾಮ ಶೆಟ್ಟಿ ಕೋಲ್ಪೆಗುತ್ತುರವರು ಮಾತನಾಡಿ ಶುಭೋದಯ ಫ್ಯೂಯೆಲ್ಸ್ ಇಡ್ಕಿದುವಿನ ಹಿರಿಮೆಗೆ ಮತ್ತೊಂದು ಗರಿ.‌  ಮಾಲಕರ ಕಳೆದ ಹಲವಾರು ಸಮಯಗಳ ಪ್ರಯತ್ನದ ಫಲವಾಗಿ ಸಂಸ್ಥೆ ಇಂದು‌ ತಲೆ ಎತ್ತಿ ನಿಂತಿದೆ.   ಎಂ.ಆರ್.ಪಿ.ಎಲ್ ಪ್ರಾಡೆಕ್ಟ್ ಬಗ್ಗೆ ಜನರಿಗೆ ಸರಿಯಾದ ಮಾಹಿತಿ ಇದೆ. ಆದ್ದರಿಂದ ಜನರಿಗೆ ಈ ಬಗ್ಗೆ ತಿಳಿಯಪಡಿಸುವ ಅಗತ್ಯವಿಲ್ಲ. ಇಂತಹ ದೊಡ್ಡ ದೊಡ್ಡ ಉದ್ದಿಮೆಗಳು ನಮ್ಮ ಗ್ರಾಮದಲ್ಲಿ ಪ್ರಾರಂಭವಾದರೆ ನಮ್ಮ ಗ್ರಾಮದ ಮಂದಿಗೆ ಉದ್ಯೋಗ ದೊರೆಯುತ್ತದೆ. ಇಂತಹ ಉದ್ದಿಮೆಗಳು ನಮ್ಮ ಗ್ರಾಮದಲ್ಲಿ ಒಂದಷ್ಟು ಆಗಲಿ ಎಂದು ಹೇಳಿ ಶುಭಹಾರೈಸಿದರು. 
 ಇಡ್ಕಿದು ಗ್ರಾ.ಪಂ. ಅಧ್ಯಕ್ಷರಾದ ಎಂ. ಸುಧೀರ್‌ಕುಮಾರ್ ಶೆಟ್ಟಿ ಮಿತ್ತೂರುರವರು ಮಾತನಾಡಿ ಶುಭೋದಯ ಫ್ಯೂಯೆಲ್ಸ್ ಇದೀಗ ಜನರ ಸೇವೆಗೆ ಸಿದ್ದವಾಗಿದೆ. ಬೆಳೆಯುತ್ತಿರುವ ಇಡ್ಕಿದು ಗ್ರಾಮಕ್ಕೆ ಇದೊಂದು ಆಸ್ತಿ. ಗ್ರಾಮದಲ್ಲಿರುವ ಪ್ರತಿಯೊಬ್ಬರ ಮನಸ್ಸಲ್ಲಿ ಗ್ರಾಮದ ಬೆಳವಣಿಗೆಯಾಗಬೇಕೆನ್ನುವ ತುಡಿತವಿದ್ದರೆ ಗ್ರಾಮದ ಅಭಿವೃದ್ಧಿ ಸಾಧ್ಯ.  ಎಂ.ಆರ್.ಪಿ.ಎಲ್.‌ ಸೇವೆಯೊಂದಿಗೆ ಮೌಲ್ಯ ತೆ ನೀಡುವ ಸಂಸ್ಥೆಯಾಗಿದೆ. ಅದರ ಔಟ್ಲೇಟ್ ಒಂದು ನಮ್ಮಲ್ಲಿ ಪ್ರಾಂಭವಾಗಿರುವುದು ತುಂಬಾ ಸಂತಸದ ವಿಚಾರವಾಗಿದೆ. ಸಂಸ್ಥೆ ಅಭಿವೃದ್ಧಿ ಹೊಂದಲಿ ಎಂದು ಹೇಳಿ ಶುಭಹಾರೈಸಿದರು. 
ಇಡ್ಕಿದು ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಸುಧಾಕರ ಶೆಟ್ಟಿ ಮಿತ್ತೂರುರವರು ಮಾತನಾಡಿ  ಇದೊಂದು‌ ಸಂತಸದ ಕ್ಷಣ. ಸುಂದರ ಸುಸಜ್ಜಿತ ಔಟ್ಲೇಟ್ ಇಂದು ಇಲ್ಲಿ ಉದ್ಘಾಟನೆ ಗೊಂಡಿದೆ.  ಸಾಮಾನ್ಯ ಕೃಷಿಕರಾಗಿ ಮೇಲೆ ಬಂದವರು ಗೋಪಾಲ ಕೃಷ್ಣ ಭಟ್ ಬೈಪದವುರವರು. ಇಡ್ಕಿದು ಸೇವಾ ಸಹಕಾರಿ  ಸಂಘದ ಬೆಳವಣಿಗೆಯಲ್ಲಿ ಇವರ ಪಾತ್ರವೂ ಬಹಳಷ್ಠಿದೆ. ಸಂಸ್ಥೆಯ‌ ಬೆಳವಣಿಗೆಗೆ ಎಲ್ಲರ ಸಹಕಾರ ಅತೀ ಅಗತ್ಯ ಎಂದರು.
ಬೈಪದವು ಗೋಪಾಲಕೃಷ್ಣ ಭಟ್ ರವರು ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕ‌ ಮಾತುಗಳನ್ನಾಡಿದರು. ಕೀರ್ತನಾ ಕಿಶೋರ್ ಪ್ರಾರ್ಥಿಸಿದರು. ಪ್ರಪುಲ್ಲ ಚಂದ್ರ ಪಿ.ಜಿ. ಕೋಲ್ಪೆ ಕಾರ್ಯಕ್ರಮ ನಿರೂಪಿಸಿದರು‌.  ಸಂಸ್ಥೆಯ ಮಾಲಕರ ಪುತ್ರ ಶಿವಕಿರಣ್ ವಂದಿಸಿದರು. ಸಂಸ್ಥೆಯ ಮಾಲಕರ  ಪತ್ನಿ ಶುಭ ಹಾಗೂ ಪುತ್ರ ರಾಮಕಿಶೋರ್ ಸಹಕರಿಸಿದರು.

LEAVE A REPLY

Please enter your comment!
Please enter your name here