ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಬೇಸಿಗೆ ಶಿಬಿರ

0

ರಾಮಕುಂಜ: ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ 11 ದಿನಗಳ ಬೇಸಿಗೆ ಶಿಬಿರ ನಡೆಯಿತು.

ವಿವಿಧ ತರಬೇತಿ:
ಶಿಬಿರದಲ್ಲಿ ಕರಕುಶಲ ವಸ್ತುಗಳ ತಯಾರಿಕೆ, ಚಿತ್ರಕಲೆ, ಅಭಿನಯಗೀತೆ, ಪಾಡ್ದನ, ಭರತನಾಟ್ಯ, ಜಾನಪದ ನೃತ್ಯ ಜಾನಪದ ಆಟ, ಗಾಳಿಪಟ ತಯಾರಿಕೆ, ಬರವಣಿಗೆ ಕೌಶಲ, ಹಳ್ಳಿಮದ್ದುಗಳ ಪರಿಚಯ ಮತ್ತು ಉಪಯೋಗ ಹಾಗೂ ಯಕ್ಷಗಾನ ಇವುಗಳ ಬಗ್ಗೆ ತರಬೇತಿ ನೀಡಲಾಯಿತು. ಸ್ಕೌಟ್ ಗೈಡ್ ಮತ್ತು ಕಬ್ ಬುಲ್ ಬುಲ್‌ನ ವಿದ್ಯಾರ್ಥಿಗಳಿಗೆ ಹೊರಸಂಚಾರ ಮತ್ತು ಬೆಂಕಿ ಇಲ್ಲದ ಅಡುಗೆ ಕಾರ‍್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು.

ಸಮರೋಪ:
ಎ.7ರಂದು ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ ನಡೆಯಿತು. ಸಂಸ್ಥೆಯ ಕಾರ‍್ಯದರ್ಶಿ ಸೇಸಪ್ಪ ರೈಯವರು ಸಂದರ್ಭೋಚಿತವಾಗಿ ಮಾತನಾಡಿದರು. ಕಾರ‍್ಯಕ್ರಮದಲ್ಲಿ ಆಡಳಿತಾಧಿಕಾರಿ ಆನಂದ್ ಎಸ್.ಟಿ., ತಾಂತ್ರಿಕ ಸಲಹೆಗಾರ ಜಯೇಂದ್ರ, ನಿಲಯದ ವ್ಯವಸ್ಥಾಪಕ ರಮೇಶ್, ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದ ಮುಖ್ಯಶಿಕ್ಷಕರುಗಳು, ಸಂಪನ್ಮೂಲ ವ್ಯಕ್ತಿಗಳಾದ ಸತೀಶ್ ಆಚಾರ್ಯ, ಹರ್ಷಿತಾ ಮತ್ತು ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದರು.



LEAVE A REPLY

Please enter your comment!
Please enter your name here