ಕೆಯ್ಯೂರು: ಪ್ರಧಾನಮಂತ್ರಿ ಫಸಲ್ ಭಿಮಾ ಯೋಜನೆ, ಫಸಲ್ ಭಿಮಾ ಪಾಠಶಾಲೆ ಕಾರ್ಯಕ್ರಮ

0


ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಕೆಯ್ಯೂರು ಮತ್ತು ಗ್ರಾಮ ಪಂಚಾಯತ್ ಕೆಯ್ಯೂರು ಇದರ ಸಹಯೋಗದಲ್ಲಿ ಪ್ರಧಾನ ಮಂತ್ರಿ ಫಸಲ್ ಭಿಮಾ ಯೋಜನೆ, ಫಸಲ್ ಭಿಮಾ ಪಾಠಶಾಲೆ ಕಾರ್ಯಕ್ರಮವು ಎ.27 ರಂದು ಕೆಯ್ಯೂರು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.

 

ಕಾರ್ಯಕ್ರಮವನ್ನು ಕೆಯ್ಯೂರು, ಕೆದಂಬಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಶಶಿಧರ ರಾವ್ ಬೊಳಿಕ್ಕಲರವರು ದೀಪ ಬೆಳಗಿಸಿ ಉದ್ಘಾಟಿಸಿ ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು. ಕೆಯ್ಯೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಜಯಂತಿ ಎಸ್. ಭಂಡಾರಿ ಸಭಾಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಶ್ರೀ ಕ್ಷೇ ಧ ಗ್ರಾಯೋಜನೆ ದಕ್ಷಿಣ ಕನ್ನಡ – 2 ರ ಜಿಲ್ಲಾ ಯೋಜನಾಧಿಕಾರಿಯಾದ ಗೋಪಾಲ್ ಆಚಾರ್, ಗ್ರಾ.ಪಂ.ಕಾರ್ಯದರ್ಶಿ ಸುರೇಂದ್ರ ರೈ ಇಳಂತಾಜೆ, ತಾಲೂಕು ಕೃಷಿ ಅಧಿಕಾರಿ ಉಮೇಶ್,ಸಿಎಸ್‌ಸಿ ತಾಲೂಕು ನೋಡೆಲ್ ಅಧಿಕಾರಿ ಜಯಪ್ರಸಾದ್, ಕೆಯ್ಯೂರು ಒಕ್ಕೂಟ ಅಧ್ಯಕ್ಷ ಚಂದ್ರಶೇಖರ ಕೆ. ಎಸ್, ಕಟ್ಟತ್ತಾರು ಒಕ್ಕೂಟ ಅಧ್ಯಕ್ಷ ರವಿ ಉಪಸ್ಥಿತರಿದ್ದರು. ಸಭೆಯಲ್ಲಿ ಗ್ರಾಮ ಪಂಚಾಯತ್ ಸದಸ್ಯರು, ಒಕ್ಕೂಟ ಪದಾಧಿಕಾರಿಗಳು, ಸದಸ್ಯರು, ರೈತರು, ಗ್ರಾಪಂ ಸಿಬ್ಬಂದಿಯವರು, ಸಂಜೀವಿನಿ ಸಂಘದ ಸದಸ್ಯರು, ಸಿಎಸ್‌ಸಿ ಸಿಬ್ಬಂದಿಗಳು ಉಪಸ್ಥಿತರಿದ್ದರು. ಅರುಣಾ ಪ್ರಾರ್ಥಿಸಿದರು. ವಲಯ ಮೇಲ್ವಿಚಾರಕಿ ಶುತಿ ಸ್ವಾಗತಿಸಿದರು. ಕೆಯ್ಯೂರು ಸೇವಾ ಪ್ರತಿನಿಧಿ ಜಯ ಪಿ. ರೈ ವಂದಿಸಿದರು. ಕೃಷಿ ಅಧಿಕಾರಿ ಉಮೇಶ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here