ಗಾನಸಿರಿ ಗಾಯಕಿ ಶ್ರೀಲಕ್ಷ್ಮಿ ರವರಿಗೆ ವಿಶ್ವ ಮಾನ್ಯ ಕನ್ನಡಿಗ ಯುವ ಸಂಗೀತ ಪ್ರಶಸ್ತಿ

0

ಪುತ್ತೂರು; ಅಖಲ ಭಾರತೀಯ‌ ಸಾಹಿತ್ಯ ಪರಿಷತ್ತು ಮತ್ತು ಗ್ರಾಮಾಂತರ ಬುದ್ಧಿ ಜೀವಿಗಳ ಬಳಗ ಮೈಸೂರು ವತಿಯಿಂದ ಗಾನಸಿರಿ ಸಂಸ್ಥೆಯ ಮೂಲಕ ಸುಗಮ ಸಂಗೀತ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿರುವ ಗಾನಸಿರಿಯ ಸುಪ್ರಸಿದ್ಧ ಗಾಯಕಿ ಮತ್ತು ಸಹಶಿಕ್ಷಕಿ  ಶ್ರೀಲಕ್ಷ್ಮಿ ಎಸ್ ಪುತ್ತೂರು ಇವರಿಗೆ “ವಿಶ್ವ ಮಾನ್ಯ‌ ಕನ್ನಡಿಗ ಯುವ ಸಂಗೀತ ಪ್ರಶಸ್ತಿಯನ್ನು” ಪ್ರದಾನ ಮಾಡಲಾಯಿತು.

ಕನ್ನಡದ ಹಿರಿಯ ಕವಿಗಳಾದ ಸಿ.ಪಿ.ಕೆ, ಲತಾ ರಾಜಶೇಖರ್, ಡಾ.ಭೇರ್ಯ ರಾಮ್ ಕುಮಾರ್ ಸಹಿತ ಗಣ್ಯಾತಿ ಗಣ್ಯರ ಸಮಕ್ಷಮದಲ್ಲಿ ಶ್ರೀಲಕ್ಷ್ಮಿಯವರು ಪ್ರಶಸ್ತಿ ಸ್ವೀಕರಿಸಿದರು. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಡಾ.ಕಿರಣ್ ಕುಮಾರ್ ಗಾನಸಿರಿ , ಶ್ರೀಲಕ್ಷ್ಮಿ ಎಸ್ ಪುತ್ತೂರು ಮತ್ತು ಸರಿಗಮಪ ಖ್ಯಾತಿಯ ಅತಿಶಯ ಜೈನ್ ರವರ ಗಾಯನ ಕಾರ್ಯಕ್ರಮವಿತ್ತು.

ಕಳೆದ 15 ವರ್ಷಗಳಿಂದ ಗುರುಗಳಾದ ಡಾ. ಕಿರಣ್ ಕುಮಾರ್ ಗಾನಸಿರಿ ಯವರಲ್ಲಿ ಸುಗಮ ಸಂಗೀತವನ್ನು ಅಭ್ಯಾಸ ಮಾಡುತ್ತಾ ಗಾನಸಿರಿ ತಂಡದ ಪ್ರಮುಖ ಗಾಯಕಿಯಾಗಿದ್ದುಕೊಂಡು ಗಾನಸಿರಿಯ ಸಾವಿರಕ್ಕೂ ಹೆಚ್ಚು ಕಾರ್ಯಕ್ರಮಗಳಲ್ಲಿ ಹಾಡಿರುವ ಇವರು ಪ್ರಸ್ತುತ ಗಾನಸಿರಿ ಸಂಸ್ಥೆಯಲ್ಲಿ ಸಹಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ಪುತ್ತೂರಿನ ಪರ್ಲಡ್ಕ ಬೀರಮಲೆಯ ಎಸ್. ಗೋಪಾಲಕೃಷ್ಣ ಆಚಾರ್ಯ ಮತ್ತು ಎಸ್.ರೋಹಿಣಿ ದಂಪತಿಗಳ ಸುಪುತ್ರಿಯಾಗಿರುತ್ತಾರೆ.

LEAVE A REPLY

Please enter your comment!
Please enter your name here