ಎ.30: ನೂಜಿಬಾಳ್ತಿಲ ಶಾಲಾ ಸಹಶಿಕ್ಷಕಿ ಲೂಸಿ ಸಿ.ಕೆ. ನಿವೃತ್ತಿ

0

ನೆಲ್ಯಾಡಿ: ಕಡಬ ತಾಲೂಕಿನ ನೂಜಿಬಾಳ್ತಿಲ ಸರಕಾರಿ ಉ.ಹಿ.ಪ್ರಾ.ಶಾಲೆಯ ಸಹಶಿಕ್ಷಕಿ ಲೂಸಿ ಸಿ.ಕೆ.,ರವರು ಎ.30ರಂದು ಕರ್ತವ್ಯದಿಂದ ನಿವೃತ್ತರಾಗಲಿದ್ದಾರೆ. ಇವರು ಕಳೆದ28 ವರ್ಷಗಳಿಂದ ಪುತ್ತೂರು ಹಾಗೂ ಕಡಬ ತಾಲೂಕಿನ ವಿವಿಧ ಶಾಲೆಗಳಲ್ಲಿ ಸಹಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ.

1996 ರಲ್ಲಿ ಪುತ್ತೂರು ತಾಲೂಕಿನ ಕರ್ನೂರು ಗ್ರಾಮದ ಗೋಳಿದಡಿ ಸರಕಾರಿ ಹಿ.ಪ್ರಾ.ಶಾಲೆಗೆ ಸಹಶಿಕ್ಷಕರಾಗಿ ಸೇರ್ಪಡೆಗೊಂಡಿದ್ದರು. ಇಲ್ಲಿಂದ 1998 ರಲ್ಲಿ ಇಚ್ಲಂಪಾಡಿ ಗ್ರಾಮದ ನೇರ್ಲ ಸರಕಾರಿ ಹಿ.ಪ್ರಾ.ಶಾಲೆಗೆ ವರ್ಗಾವಣೆಗೊಂಡಿದ್ದರು. ನಂತರ 2001 ರಲ್ಲಿ ರೆಂಜಿಲಾಡಿ ಗ್ರಾಮದ ಮೀನಾಡಿ ಸರಕಾರಿ ಕಿ.ಪ್ರಾ.ಶಾಲೆಗೆ ವರ್ಗಾವಣೆಗೊಂಡು ಅಲ್ಲಿಂದ2016ರಲ್ಲಿ ನೂಜಿಬಾಳ್ತಿಲ ಸರಕಾರಿ ಉ.ಹಿ.ಪ್ರಾ.ಶಾಲೆಗೆ ವರ್ಗಾವಣೆಗೊಂಡು ಆಗಮಿಸಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಇವರು ಶಿರಾಡಿ ಸರಕಾರಿ ಹಿ.ಪ್ರಾ.ಶಾಲೆಯಲ್ಲಿ ಪ್ರಾಥಮಿಕ, ಉದನೆ ಸಂತ ಅಂತೋನಿ ಪ್ರೌಢಶಾಲೆಯಲ್ಲಿ ಪ್ರೌಢಶಿಕ್ಷಣ ಹಾಗೂ ಮಂಗಳೂರಿನ ಕಪಿತಾನಿಯೋ ಶಿಕ್ಷಕರ ತರಬೇತಿ ಸಂಸ್ಥೆಯಲ್ಲಿ ಶಿಕ್ಷಕ ತರಬೇತಿ ಪಡೆದುಕೊಂಡಿದ್ದರು. ಪ್ರಸ್ತುತ ರೆಂಜಿಲಾಡಿ ಗ್ರಾಮದ ಸರೋಳಿಯಲ್ಲಿ ವಾಸ್ತವ್ಯವಿದ್ದು ಇವರ ಪತಿ ವಿ.ಕೆ.ವರ್ಗೀಸ್‌ರವರು ಕೃಷಿಕರಾಗಿದ್ದಾರೆ. ಇವರ ಹಿರಿಯ ಪುತ್ರಿ ಅನುಷಾರವರು ಎಂ.ಎಸ್ಸಿ., ಬಿ.ಎಡ್.,ಪದವೀಧರರಾಗಿದ್ದಾರೆ. ಇನ್ನೋರ್ವ ಪುತ್ರಿ ಆಶಿನಿ ವಿ.ವಿ. ಕೆಮಿಸ್ಟ್ ಪದವೀಧರರಾಗಿದ್ದು ಹಾಸನದಲ್ಲಿ ಅಲ್ಟ್ರಾ ಲ್ಯಾಬೊರೇಟರಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಪುತ್ರ ಅಶ್ವಿನ್ ವಿ.ವಿ. ಮಂಗಳೂರಿನ ಅಲೋಸಿಯಸ್ ಕಾಲೇಜಿನಲ್ಲಿ ಬಿ.ಎಸ್ಸಿ.ವ್ಯಾಸಂಗ ಮಾಡುತ್ತಿದ್ದಾರೆ.

LEAVE A REPLY

Please enter your comment!
Please enter your name here