ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಯುರೇಕಾ ವಿಜ್ಞಾನ ಶಿಬಿರ ದ ಪ್ರಯುಕ್ತ ಕೌಶಲ್ಯ ಅಭಿವೃದ್ದಿ ಕಾರ್ಯಕ್ರಮ

0

ಪುತ್ತೂರು: ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ನಡೆಯುತ್ತಿರುವ 12 ದಿನಗಳ ರಾಜ್ಯಮಟ್ಟದ ವಿಜ್ಞಾನ ಶಿಬಿರ ಯುರೇಕಾದ ಹನ್ನೊಂದನೇ ದಿನದ ಕಾರ್ಯಕ್ರಮದಲ್ಲಿ ಪುತ್ತೂರು ಆಕಾಂಕ್ಷ ಚಾರೀಟೇಬಲ್ ಟ್ರಸ್ಟ್‌ನ ಸದಸ್ಯರಿಂದ ಕೌಶಲ್ಯ ಅಭಿವೃದ್ದಿ ಎಂಬ ವಿಷಯದ ಕುರಿತಾಗಿ ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ನೀಡಲಾಯಿತು. ಒಟ್ಟು ಮೂರು ಅವಧಿಯಲ್ಲಿ ಈ ಕಾರ್ಯಕ್ರಮ ರೂಪುಗೊಂಡಿತು. ಮೊದಲ ಅವಧಿಯಲ್ಲಿ ಆಕಾಂಕ್ಷ ಚಾರೀಟೇಬಲ್ ಟ್ರಸ್ಟ್‌ನ ಸದಸ್ಯೆ ಸ್ವರ್ಣಲಕ್ಷ್ಮೀ, ವಿದ್ಯಾರ್ಥಿ ಜೀವನದಲ್ಲಿ ಸಾಮಾಜಿಕ ಜಾಲತಾಣಗಳ ಪರಿಣಾಮ ಮತ್ತು ಪ್ರಭಾವದ ಬಗ್ಗೆ ಜಾಗೃತಿಯನ್ನು ಮೂಡಿಸಿದರು.

ಎರಡನೇ ಅವಧಿಯಲ್ಲಿ ಟ್ರಸ್ಟ್‌ನ ಸದಸ್ಯ ಧೀರಜ್ ಬಿ ರವರು ಉತ್ತಮ ನಾಯಕತ್ವದ ಅರ್ಹತೆ ಮತ್ತು ಗುಣಲಕ್ಷಣಗಳನ್ನು ವಿವಿಧ ರೀತಿಯ ಚಟುವಟಿಕೆಗಳ ಮೂಲಕ ವಿವರಿಸಿದರು. ಮೂರನೇ ಅವಧಿಯಲ್ಲಿ ಆಕಾಂಕ್ಷ ಚಾರೀಟೇಬಲ್ ಟ್ರಸ್ಟ್‌ನ ಸದಸ್ಯೆ ಸುಕ್ಷಿತಾ ಭಟ್ ವ್ಯಕ್ತಿತ್ವ ವಿಕಸನದ ಅಗತ್ಯತೆಯ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಿದರು. ಈ ಕಾರ್ಯಕ್ರಮವನ್ನು ಕಾಲೇಜಿನ ಉಪನ್ಯಾಸಕಿ ಸ್ನೇಹ ನಿರ್ವಹಿಸಿದರು. ಬಳಿಕ ಯುರೇಕಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ನೆಹರೂನಗರದ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ(ಸಿಬಿಎಸ್‌ಇ) ಸಂಯೋಜಿತ ಪ್ರಯೋಗಾಲಯ, ಗಣಿತ ಪ್ರಯೋಗಾಲಯ ಮತ್ತು ಸೈನ್ಸ್ ಪಾರ್ಕ್‌ಗೆ ಭೇಟಿ ನೀಡಿದರು.

LEAVE A REPLY

Please enter your comment!
Please enter your name here