ಕಡಬ: ಎಸ್‌ಐ ರುಕ್ಮ ನಾಯ್ಕ್ ಅವರಿಗೆ ಸಮ್ಮಾನ, ಬೀಳ್ಕೊಡುಗೆ

0

ಕಡಬ: ಇಲ್ಲಿನ ಆರಕ್ಷಕ ಠಾಣೆಯಿಂದ ಬೆಳ್ಳಾರೆ ಆರಕ್ಷಕ ಠಾಣೆಗೆ ವರ್ಗಾವಣೆಗೊಂಡ ಎಸ್‌ಐ ರುಕ್ಮ ನಾಯ್ಕ್ ಅವರನ್ನು ಕಡಬ ಆರಕ್ಷಕ ಠಾಣೆಯ ಸಭಾಂಗಣದಲ್ಲಿ ಜರಗಿದ ಸಮಾರಂಭದಲ್ಲಿ ಸಮ್ಮಾನಿಸಿ ಬೀಳ್ಕೊಡಲಾಯಿತು.

 

ಸಮ್ಮಾನ ಸ್ವೀಕರಿಸಿ ಮಾತನಾಡಿದ ಎಸ್‌ಐ ರುಕ್ಮ ನಾಯ್ಕ್ ಅವರು ಕಡಬದ ಜನತೆಯ ಪ್ರೀತಿ, ಸಿಬಂದಿಗಳ ಸಹಕಾರ ಹಾಗೂ ಮೇಲಾಧಿಕಾರಿಗಳ ಮಾರ್ಗದರ್ಶನ ಕಡಬದಲ್ಲಿ ಕರ್ತವ್ಯದಲ್ಲಿದ್ದಾಗ ಉತ್ತಮ ಸೇವೆ ನೀಡಲು ಸಾಧ್ಯವಾಗಿದೆ. ನನ್ನ ಸೇವೆಯ ಅವಧಿಯಲ್ಲಿ ಸಹಕರಿಸಿದ ಎಲ್ಲರಿಗೂ ಆಭಾರಿಯಾಗಿದ್ದೇನೆ ಎಂದರು. ಕೋವಿಡ್ ಲಾಕ್‌ಡೌನ್‌ನ ಸಂಕಷ್ಟದ ಸಂದರ್ಭದಲ್ಲಿ ಸರಕಾರದ ಕಟ್ಟುನಿಟ್ಟಿನ ನಿಯಮಾವಳಿಗಳನ್ನು ಜಾರಿಗೆ ತರಬೇಕಾದ ಅನಿವಾರ್ಯತೆಯಲ್ಲಿ ಕರ್ತವ್ಯ ನಿರ್ವಹಿಸಲು ಎಲ್ಲರೂ ಉತ್ತಮ ಸಹಕಾರ ನೀಡಿದ್ದಾರೆ. ಮಾಧ್ಯಮಗಳು, ಸ್ಥಳೀಯ ಸಂಘ ಸಂಸ್ಥೆಗಳ ಸಹಕಾರ ಅನನ್ಯವಾದುದು ಎಂದು ಅವರು ಸ್ಮರಿಸಿಕೊಂಡರು. ಎಎಸ್‌ಐ ಆಗಿ ಪದೋನ್ನತಿ ಪಡೆದು ಉಪ್ಪಿನಂಗಡಿ ಠಾಣೆಗೆ ವರ್ಗಾವಣೆಗೊಂಡ ಕನಕರಾಜ್, ವೇಣೂರು ಠಾಣೆಗೆ ವರ್ಗಾವಣೆಗೊಂಡ ಹೆಡ್ ಕಾನ್‌ಸ್ಟೇಬಲ್ ಮೋನಪ್ಪ ಗೌಡ ಅವರನ್ನು ಸಮ್ಮಾನಿಸಲಾಯಿತು. ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕ ಉಮೇಶ್ ಉಪ್ಪಳಿಕೆ ಅವರು ಅಧ್ಯಕ್ಷತೆ ವಹಿಸಿ ಶುಭಹಾರೈಸಿದರು. ಕಡಬ ಠಾಣಾ ಎಸ್‌ಐ ಆಂಜನೇಯ ರೆಡ್ಡಿ , ಸಿಬಂದಿಗಳಾದ ಭವಿತ್ ರೈ, ಹರೀಶ್ , ಮಹೇಶ್, ಹಿಂಜಾವೇ ಮುಖಂಡ ರವಿರಾಜ್ ಶೆಟ್ಟಿ ಕಡಬ, ಭೀಮ್ ಆರ್ಮಿ ಸಂಘಟನೆಯ ಜಿಲ್ಲಾಧ್ಯಕ್ಷ ಅಣ್ಣಿ ಏಳ್ತಿಮಾರ್ ಅವರು ಶುಭ ಹಾರೈಸಿದರು. ತನಿಖಾ ವಿಭಾಗದ ಎಸ್‌ಐ ಶ್ರೀಕಾಂತ್ ರಾಥೋಡ್ ಉಪಸ್ಥಿತರಿದ್ದರು. ಠಾಣಾ ಸಿಬ್ಬಂದಿಗಳು, ಗೃಹರಕ್ಷಕ ದಳದ ಸಿಬ್ಬಂದಿಗಳು, ಮಾಧ್ಯಮ ಪ್ರತಿನಿಧಿಗಳು ಹಾಗೂ ಸಾರ್ವಜನಿಕರು ವರ್ಗಾವಣೆಗೊಂಡ ಎಸ್‌ಐ ಹಾಗೂ ಸಿಬಂದಿಗಳನ್ನು ಗೌರವಿಸಿದರು. ಠಾಣಾ ಸಿಬಂದಿ ಹರೀಶ್ ಸ್ವಾಗತಿಸಿ, ವಂದಿಸಿದರು. ಪತ್ರಕರ್ತ ನಾಗರಾಜ್ ಎನ್.ಕೆ. ನಿರೂಪಿಸಿದರು.

ಕಡಬ:ಎಸ್‌ಐ ರುಕ್ಮ ನಾಯ್ಕ್ ಅವರನ್ನು ಸಮ್ಮಾನಿಸಲಾಯಿತು.

LEAVE A REPLY

Please enter your comment!
Please enter your name here