ಪಟ್ಲ ಫೌಂಡೇಶನ್ ಟ್ರಸ್ಟ್‌ನಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ-ಮೇ.25 ಕೊನೆಯ ದಿನ

0

ಮಂಗಳೂರು: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಮಂಗಳೂರು ಇದರ ವತಿಯಿಂದ ಯಕ್ಷಗಾನ ಕಲಾವಿದರ (ವೃತ್ತಿಪರ/ಹವ್ಯಾಸಿ/ಮಹಿಳಾ) ಮಕ್ಕಳಿಂದ 2022ನೇ ಸಾಲಿನ ವಿದ್ಯಾರ್ಥಿ ವೇತನಕ್ಕೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಒಂದನೇ ತರಗತಿ ಯಿಂದ ಮೊದಲುಗೊಂಡು ಶೇ.60ಕ್ಕಿಂತ ಮೇಲ್ಪಟ್ಟು ಅಂಕಗಳನ್ನು ಗಳಿಸಿದ ಎಲ್ಲಾ ಯಕ್ಷಗಾನ ಕಲಾವಿದರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಲಾಗುವುದು. ಅರ್ಜಿ ನಮೂನೆಯನ್ನು ಅಂಕಪಟ್ಟಿಯ ಪ್ರತಿಯೊಂದಿಗೆ ಭರ್ತಿ ಮಾಡಿದ ಅರ್ಜಿಗಳನ್ನು ಮಂಗಳೂರಿನ ಎಂ.ಜಿ.ರೋಡಿನ ಅಂಪಾಯರ್ ಮಾಲ್‌ನ 2ನೇ ಆಂತಸ್ತಿನಲ್ಲಿರುವ ಟ್ರಸ್ಟಿನ ಕೋಶಾಧಿಕಾರಿ ಸಿ.ಎ. ಸುದೇಶ್ ಕುಮಾರ್ ರೈಯವರ ಕಛೇರಿಗೆ ಮುಖತಃ ಅಥವಾ ಅಂಚೆ ಮೂಲಕ ತಲುಪಿಸಲು ಕೋರಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ಮೇ.25ಕೊನೆಯ ದಿನವಾಗಿದೆ. ಹೆಚ್ಚಿನ ವಿವರಗಳಿಗಾಗಿ ಡಾ.ಮನುರಾವ್ ಉಪಾಧ್ಯಕ್ಷರು (9844087664) ರವರನ್ನು ಸಂಪರ್ಕಿಸಬಹುದು.

ನಿಯಮಾವಳಿಗಳು: ಅರ್ಜಿ ಸಲ್ಲಿಸಲು ಕನಿಷ್ಠ ಶೇ.60 ಅಂಕಗಳಿರಬೇಕು. ವಿದ್ಯಾರ್ಥಿಯ ಅಂಕಪಟ್ಟಿಯ ಪ್ರತಿ ಹಾಗೂ ಬ್ಯಾಂಕ್ ಉಳಿತಾಯ ಖಾತೆಯ ವಿವರಗಳಿರುವ ಪಾಸ್‌ಬುಕ್ ಪ್ರಥಮ ಪುಟದ ಪ್ರತಿಗಳನ್ನು ಲಗತ್ತಿಸಬೇಕು. 2021-2022ಶೈಕ್ಷಣಿಕ ವರ್ಷದ ಪರೀಕ್ಷೆಯ ನಂತರ ಪ್ರಕಟಗೊಂಡ ಫಲಿತಾಂಶವನ್ನು ನಮೂದಿಸಬೇಕಾಗಿದೆ. ವಿದ್ಯಾರ್ಥಿವೇತನವನ್ನು ಮೇ.೨೯ರಂದು ಅಡ್ಯಾರ್ ಗಾರ್ಡನ್‌ನಲ್ಲಿ ನಡೆಯುವ ಪಟ್ಲ ಸಂಭ್ರಮ 2022 ಕಾರ್ಯಕ್ರಮದಲ್ಲಿ ಖುದ್ದಾಗಿ ಬಂದು ಪಡೆಯಬೇಕು. ಆಯ್ಕೆ ಸಮಿತಿಯ ತೀರ್ಮಾನವೇ ಅಂತಿಮ ಎಂದು ಪಟ್ಲ ಫೌಂಡೇಶನ್ ಟ್ರಸ್ಟ್‌ನ ಪ್ರಕಟನೆ ತಿಳಿಸಿದೆ.

LEAVE A REPLY

Please enter your comment!
Please enter your name here