ಆಲಂಕಾರಿನಲ್ಲಿ ದಿ.ಕಮಲಾಕ್ಷ ರೈಯವರಿಗೆ ಸಾರ್ವಜನಿಕ ಶ್ರದ್ಧಾಂಜಲಿ ಸಭೆ

0

ಆಲಂಕಾರು : ಸಾಮಾಜಿಕ, ಧಾರ್ಮಿಕ ಕ್ಷೇತ್ರಗಳಲ್ಲಿ ಮುಖಂಡರಾಗಿ ಇತ್ತೀಚೆಗೆ ನಿಧನರಾದ ಶರವೂರು ಶ್ರೀದುರ್ಗಾಪರಮೇಶ್ವರಿ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷರಾದ ಕಮಲಾಕ್ಷ ರೈ ಪರಾರಿಗುತ್ತು ಸಾರ್ವಜನಿಕ ಶ್ರದ್ಧಾಂಜಲಿ ಕಾರ್ಯಕ್ರಮ ಆಲಂಕಾರು ಹಾಲು ಉತ್ಪಾದಕರ ಸಹಕಾರ ಸಂಘದ ಸಭಾಭವನದಲ್ಲಿ ನಡೆಯಿತು.

 

ಆಲಂಕಾರು ಲಯನ್ಸ್ ಕ್ಲಬ್ ಅಧ್ಯಕ್ಷರಾದ ದಯಾನಂದ ರೈ ಮನವಳಿಕೆಗುತ್ತು ನುಡಿನಮನ ಸಲ್ಲಿಸಿ ದಿ.ಕಮಲಾಕ್ಷ ರೈಯವರು ಶ್ರೀ ಕ್ಷೇತ್ರ ಶರವೂರು ದುರ್ಗಾ ಪರಮೇಶ್ವರೀ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾಗಿ , ವಿವಿಧ ದೈವ ದೇವರುಗಳ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದವರು ಆಲಂಕಾರು ಲಯನ್ಸ್ ಕ್ಲಬ್ ನ ಸಕ್ರಿಯ ಸದಸ್ಯರಾಗಿ ಸೇವೆ ಸಲ್ಲಿಸಿದವರು.ಮನಷ್ಯನ ಹುಟ್ಟು ಸಾವಿನ ನಡುವೆ ಮಾಡಿದ ಸಾಧನೆಯನ್ನು,ಸಮಾಜ ಸೇವೆಯನ್ನು ಹಾಗು ಪರೋಪಕಾರವನ್ನು , ಸತ್ಕರ್ಮ ಗಳನ್ನು ಸಮಾಜ ಗುರುತಿಸುತ್ತದೆ.

ದಿ.ಕಮಲಾಕ್ಷ ರೈ ಯವರು ಸಮಾಜಮುಖಿಯಾಗಿ ಕೆಲಸ ಮಾಡಿದವರು ಅವರ ಅತ್ಮಕ್ಕೆ ಭಗವಂತ ಚಿರಶಾಂತಿ ಕರುಣಿಸಲೆಂದು ಪ್ರಾರ್ಥಿಸಿದರು. ಶ್ರೀ ಕ್ಷೇತ್ರ ಶರವೂರು ದುರ್ಗಾ ಪರಮೇಶ್ವರೀ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ದಾಮೋದರ ಗೌಡ ಕಕ್ವೆಯವರು ನುಡಿನಮನ ಸಲ್ಲಿಸಿ ಶ್ರೀ ಕ್ಷೇತ್ರ ಶರವೂರು ದುರ್ಗಾ ಪರಮೇಶ್ವರೀ ದೇವಸ್ಥಾನದಲ್ಲಿ ದಿ.ಕಮಲಾಕ್ಷ ರೈಯವರಿಗೆ ಮೇ.17 ರಂದು ದೇವಸ್ಥಾನದ ವತಿಯಿಂದ ಶ್ರದ್ದಾಂಜಲಿ ಸಭೆ ಮಾಡುವುದಾಗಿ ತಿಳಿಸಿದರು.

ಆಲಂಕಾರು ಮೂರ್ತೆ ದಾರ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಮುತ್ತಪ್ಪ ಪೂಜಾರಿ ನೈಯ್ಯಲ್ಗರವರು ಮಾತನಾಡಿ ಕಮಲಾಕ್ಷ ರೈ ಯವರ ಅಕಲಿಕಾ ಮರಣ ವನ್ನು ಊಹಿಸಲು ಸಾಧ್ಯವಿಲ್ಲ ಹಾಗು ಅವರು ಸದಾ ನಮ್ಮ ಒಡನಾಡಿಯಾಗಿದ್ದರು ಎಂದು ತಿಳಿಸಿ ಅವರ ಜೀವನದ ಬಗ್ಗೆ ತಿಳಿಸಿದರು.ದ.ಕ ಜಿಲ್ಲಾ ಏಂಡೋ ಸಲ್ಪಾನ್ ವಿರೋಧಿ ಹೋರಾಟ ಸಮಿತಿಯ ಅಧ್ಯಕ್ಷ ಪೀರ್ ಮಹಮ್ಮದ್ ಸಾಹೇಬ್ ಮಾತನಾಡಿ ದಿ.ಕಮಲಾಕ್ಷ ರೈಯವರು ನನ್ನ ಅಣ್ಣನಂತೆ ಇದ್ದವರು ಏಂಡೋ ವಿರೋದಿ ಹೊರಾಟದಲ್ಲಿ ಅನೇಕ ಬಾರಿ ಬೆಂಗಳೂರಿಗೆ ನನ್ನ ಜೂತೆ ಬಂದವರು.ಉಪಕಾರ ಸ್ಮರಣೆ ಮಾಡುವ ವ್ಯಕ್ತಿಯಾಗಿ,ಪರೋಪಕಾರಿಯಾಗಿ ಬೆಳೆದವರು,ಜನ ಸಾಮಾನ್ಯರಲ್ಲಿ ಪ್ರೀತಿ ವಿಶ್ವಾಸ ವನ್ನು ಇಟ್ಟವರು ಎಲ್ಲಾ ಕ್ಷೇತ್ರಗಳಲ್ಲಿ ಮಾಡಿದ ಕಮಲಾಕ್ಷ ರೈ ಯವರ ಅತ್ಮಗೆ ಭಗವಂತ ಚಿರಶಾಂತಿ ಕರುಣಿಸಲಿ ಎಂದು ತಿಳಿಸಿದರು.ಶ್ರೀ ಕ್ಷೇತ್ರ ಶರವೂರು ದುರ್ಗಾ ಪರಮೇಶ್ವರೀ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಮಾಜಿ ಅಧ್ಯಕ್ಷ ಪೂವಪ್ಪ ನಾಯ್ಕ್ ಎಸ್ ಮಾತನಾಡಿ ದಿ.ಕಮಲಾಕ್ಷ ರೈ ಯವರು ಯಾವುದೇ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡವರು.ಹಿಡಿದ ಕೆಲಸವನ್ನು ಸಾದಿಸಿ ತೋರಿಸುವ ವ್ಯಕ್ತಿಯಾಗಿದ್ದರು ,ಸಾರ್ವಜನಿಕ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು ತನ್ನ ಕುಟುಂಬವನ್ನು ಕೂಡ ಪ್ರೀತಿಸುತ್ತಿದ್ದರು.ಎಲ್ಲಾ ಕಡೆಗಳಲ್ಲಿ ಹಾಗು ವಿವಿಧ ಕ್ಷೇತ್ರಗಳಲ್ಲಿ ತನ್ನನು ತಾನು ತೊಡಗಿಸಿಕೊಂಡು ಕ್ರೀಯಾಶೀಲಾ ವ್ಯಕ್ತಿಯಾಗಿದ್ದರು ಎಂದು ತಿಳಿಸಿ ನುಡಿನಮನ ಸಲ್ಲಿಸಿದರು.

ಆಲಂಕಾರು ವಲಯ ಬಂಟರ ಸಂಘದ ಅಧ್ಯಕ್ಷರಾದ ಸೇಸಪ್ಪ ರೈ.ಕೆ,ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಪ್ರಶಾಂತ ರೈ ಯಂ, ಮನವಳಿಕೆ ಗುತ್ತಿನ ಯಾಜಮಾನ ರಮಾನಾಥ ರೈ ಮನವಳಿಕೆಗುತ್ತು, ಪುತ್ತೂರು ತಾಲೂಕ್ಕು ಕರ್ನಾಟಕ ಪತ್ರಕರ್ತ ಸಂಘದ ಮಾಜಿ ಅಧ್ಯಕ್ಷ ಸದಾಶಿವ ಶೆಟ್ಟಿ ಮಾರಂಗ ದಿ.ಕಮಲಾಕ್ಷ ರೈಯವರ ಒಡನಾಟದ ಬಗ್ಗೆ , ಅವರ ಕಾರ್ಯವೈಖರಿ ಹಾಗು ಅವರ ಜೀವನ ಚರಿತ್ರೆಯ ಬಗ್ಗೆ ಸಭೆಗೆ ತಿಳಿಸಿ ಅಗಲಿದ ಅವರ ಅತ್ಮಕ್ಕೆ ಭಗವಂತ ಚಿರಶಾಂತಿ ಕರುಣಿಸಲೆಂದು ಪ್ರಾರ್ಥಿಸಿದರು.

 

ಸಭೆಯಲ್ಲಿ ದಿ.ಕಮಲಾಕ್ಷ ರೈ ಪರಾರಿಗುತ್ತುರವರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಒಂದು ನಿಮಿಷದ ಮೌನ ಪ್ರಾರ್ಥನೆ ಸಲ್ಲಿಸಿದರು. ಲೋಕನಾಥ ರೈ ಕೇಲ್ಕ ರಾಮಕುಂಜ ರವರು ಕಾರ್ಯಕ್ರಮ ನಿರೂಪಿಸಿ ಧನ್ಯವಾದ ಸಮರ್ಪಿಸಿದರು.ಕಾರ್ಯಕ್ರಮದಲ್ಲಿ ಪೆರಾಬೆ ಗ್ರಾ.ಪಂ ಅಧ್ಯಕ್ಷರಾದ ಮೋಹನದಾಸ ರೈ ಪರಾರಿಗುತ್ತು, ಆಲಂಕಾರು ಸಿ.ಎ ಬ್ಯಾಂಕ್ ಉಪಾಧ್ಯಕ್ಷ ಪ್ರದೀಪ್ ರೈ ಮನವಳಿಕೆ, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಪದ್ಮಪ್ಪ ಗೌಡ .ಕೆ, ಆಲಂಕಾರು ರಿಕ್ಷಾ ಚಾಲಕ ಮಾಲಕ ಸಂಘದ ಅಧ್ಯಕ್ಷ ಪುರಂದರ ಗೌಡ, ಆಲಂಕಾರು ಹಾಲು ಉತ್ಪಾದಕರ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ಹಾಗು ಹಾಲಿ ನಿರ್ದೇಶಕ ರಾಧಾಕೃಷ್ಣ ರೈ ಮನವಳಿಕೆಗುತ್ತು.ಆಲಂಕಾರು ಲಯನ್ಸ್ ಕ್ಲಬ್ ನ ಕಾರ್ಯದರ್ಶಿ ನಿತ್ಯಾನಂದ ಶೆಟ್ಟಿ, ಪ್ರಮುಖರಾದ ಚಂದ್ರಶೇಖರ.ಕೆ ಆಲಂಕಾರು, ಸುಧಕರ ರೈ ಮನವಳಿಕೆ, ವಿಠಲ ರೈ ಮನವಳಿಕೆ, ಜನಾರ್ಧನ್ ಬಿ.ಎಲ್,ಅಬೂಬಕ್ಕರ್ ನೆಕ್ಕರೆ, ಸಂಕಪ್ಪ ಗೌಡ ಗೌಡ ಗೌಡತ್ತಿಗೆ,ಸುಭಾಸ್ ಶೆಟ್ಟಿ ಆರುವಾರ,ಮಾಧವ ಪೂಜಾರಿ ಕಯ್ಯಾಪ್ಪೆ,ಚೆನ್ನಕೇಶವ ರೈ ಗುತ್ತುಪಾಲು, ದಿ.ಕಮಲಾಕ್ಷ ರೈ ಯವರ ಸಹೋದರರಾದ ಪರಾರಿಗುತ್ತು ಕರುಣಾಕರ ರೈ,ಆಲಂಕಾರು ಶ್ರೀ ದುರ್ಗಾ ಟವರ್ ್ಸ ನ ಮಾಲಕರಾದ ರಾಧಾಕೃಷ್ಣ ರೈ ಅಳಿಯಂದಿರಾದ ಶ್ರೀಧರ ರೈ,ಶಿವರಾಮ ರೈ ಹಾಗು ಅವರ ಕುಟುಂಬಸ್ಥರು ಸೇರಿದಂತೆ ಹಲವುಮಂದಿ ಶ್ರದ್ದಾಂಜಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here