ಮೇ.17-19: ರೆಂಜಲಾಡಿ ಬದ್ರಿಯಾ ಜುಮಾ ಮಸೀದಿಯಲ್ಲಿ 26ನೇ ಆಧ್ಯಾತ್ಮಿಕ ದಿಕ್ರ್ ಹಲ್ಕಾ ವಾರ್ಷಿಕ, ಧಾರ್ಮಿಕ ಮತ ಪ್ರವಚನ

0

  • ಮೇ.17ರಂದು ಹನೀಫ್ ನಿಝಾಮಿಯವರಿಂದ ಧಾರ್ಮಿಕ ಪ್ರಭಾಷಣ

ಪುತ್ತೂರು: ಬದ್ರಿಯಾ ಜುಮಾ ಮಸೀದಿ ರೆಂಜಲಾಡಿ ಇದರ ಆಶ್ರಯದಲ್ಲಿ 26ನೇ ಆಧ್ಯಾತ್ಮಿಕ ದಿಕ್ರ್ ಹಲ್ಕಾ ವಾರ್ಷಿಕ ಹಾಗೂ ಮೂರು ದಿನಗಳ ಧಾರ್ಮಿಕ ಮತ ಪ್ರವಚನ ಮೇ.17 ರಿಂದ ಮೇ.19ರ ವರೆಗೆ ರೆಂಜಲಾಡಿ ಮಸೀದಿ ವಠಾರದಲ್ಲಿ ನಡೆಯಲಿದೆ.

 


ಮೇ.17ರಂದು ಮತ ಪ್ರವಚನ ಉದ್ಘಾಟನೆ ನಡೆಯಲಿದ್ದು ರೆಂಜಲಾಡಿ ಮಸೀದಿಯ ಸದರ್ ಅಬೂಬಕ್ಕರ್ ಮುಸ್ಲಿಯಾರ್ ದುವಾ ನೆರವೇರಿಸಲಿದ್ದಾರೆ. ರೆಂಜಲಾಡಿ ಮಸೀದಿಯ ಖತೀಬ್ ರಫೀಕ್ ಫೈಝಿ ಮಾಡನ್ನೂರು ಕಾರ್ಯಕ್ರಮ ಉದ್ಘಾಟಿಸಲಿದ್ದು ರೆಂಜಲಾಡಿ ಮಸೀದಿಯ ಪ್ರಧಾನ ಕಾರ್ಯದರ್ಶಿ ಹಾಜಿ ಝೈನುದ್ದೀನ್ ಜೆ.ಎಸ್ ಅಧ್ಯಕ್ಷತೆ ವಹಿಸಲಿದ್ದಾರೆ. ಖ್ಯಾತ ಪ್ರಭಾಷಣಗಾರ ಮಹಮ್ಮದ್ ಹನೀಫ್ ನಿಝಾಮಿ ಕಾಸರಗೋಡು ಮುಖ್ಯ ಪ್ರಭಾಷಣ ನಡೆಸಲಿದ್ದಾರೆ.
ಮೇ.18ರಂದು ತಿಂಗಳಾಡಿ ಮಸ್ಜಿದುಲ್ ಬಾರಿ ಖತೀಬ್ ಮಹಮ್ಮದ್ ಅಮಾನಿ ದುವಾ ನಿರ್ವಹಿಸಲಿದ್ದು ಪುತ್ತೂರು ನವಮಿ ಇಮಾಂ ಅರೆಬಿಕ್ ಕಾಲೇಜಿನ ಪ್ರಾಂಶುಪಾಲ ಕೆ.ಎಂ ಅಬ್ಬಾಸ್ ಫೈಝಿ ಪುತ್ತಿಗೆ ಮುಖ್ಯ ಪ್ರಭಾಷಣ ನಡೆಸಲಿದ್ದಾರೆ.

ಮೇ.೧೯ರಂದು ಮಗ್ರಿಬ್ ನಮಾಜಿನ ಬಳಿಕ ದಿಕ್ರ್ ಹಲ್ಕಾ ವಾರ್ಷಿಕ ಮಜ್ಲಿಸ್ ನಡೆಯಲಿದ್ದು ಆಧ್ಯಾತ್ಮಿಕ ಪಂಡಿತ ಮಹಮೂದುಲ್ ಫೈಝಿ ಓಲೆಮುಂಡೋವು ದಿಕ್ರ್ ಮಜ್ಲಿಸ್‌ಗೆ ನೇತೃತ್ವ ನೀಡಲಿದ್ದಾರೆ. ನಂತರ ಸಮಾರೋಪ ಸಮಾರಂಭ ನಡೆಯಲಿದ್ದು ರೆಂಜಲಾಡಿ ಮಸೀದಿಯ ಗೌರವಾಧ್ಯಕ್ಷ ವಿ.ಎಚ್ ಅಬ್ದುಲ್ ಶಕೂರ್ ಹಾಜಿ ಅಧ್ಯಕ್ಷತೆ ವಹಿಸಲಿದ್ದಾರೆ. ಕುಂಬ್ರ ಕೆಐಸಿ ಪ್ರಾಂಶುಪಾಲ ಅನೀಸ್ ಕೌಸರಿ ಪ್ರಾಸ್ತಾವಿಕ ಭಾಷಣ ನಡೆಸಲಿದ್ದು ಖ್ಯಾತ ವಾಗ್ಮಿ ಕೆ.ಆರ್ ಹುಸೈನ್ ದಾರಿಮಿ ರೆಂಜಲಾಡಿ ಮುಖ್ಯ ಪ್ರಭಾಷಣ ನಡೆಸಲಿದ್ದಾರೆ. ಹಲವು ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ರೆಂಜಲಾಡಿ ಬದ್ರಿಯಾ ಜುಮಾ ಮಸೀದಿಯ ಅಧ್ಯಕ್ಷ ಇಬ್ರಾಹಿಂ ಕಡ್ಯ ಹಾಗೂ ಪ್ರ.ಕಾರ್ಯದರ್ಶಿ ಹಾಜಿ ಝೈನುದ್ದೀನ್ ಜೆ.ಎಸ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here