ಸವಣೂರು  : ಕಲಿಕಾ ಚೇತರಿಕೆ ವರ್ಷ 2022- 23ರ  ಶಾಲಾ ಪ್ರಾರಂಭೋತ್ಸವ

0

ಸವಣೂರು : ಸವಣೂರು ಸ.ಉ.ಹಿ.ಪ್ರಾ.ಶಾಲೆಯಲ್ಲಿ  ಶಾಲಾ ಪ್ರಾರಂಭೋತ್ಸವ  ಮೇ.16ರಂದು ನಡೆಯಿತು. ಶಾಲಾ ಪ್ರಾರಂಭೋತ್ಸವದ ಅಂಗವಾಗಿ ಸವಣೂರು ಪೇಟೆಯಿಂದ ಶಾಲೆಯವರೆಗೆ ಮೆರವಣಿಗೆ ಮೂಲಕ ಹೊಸ ಸೇರ್ಪಡೆಯಾದ ಮಕ್ಕಳನ್ನು ಸ್ವಾಗತಿಸಲಾಯಿತು.ಬ್ಯಾಂಡ್ ಭಾರಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಲಾಯಿತು.
ಶಾಲೆಯಲ್ಲಿ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸವಣೂರು ಗ್ರಾ.ಪಂ.ಅಧ್ಯಕ್ಷೆ ರಾಜೀವಿ ಶೆಟ್ಟಿ ವಹಿಸಿದ್ದರು. ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಮಹಮ್ಮದ್ ಹನೀಫ್ ಉದ್ಘಾಟಿಸಿದರು.ವೇದಿಕೆಯಲ್ಲಿ ಗ್ರಾ.ಪಂ.ಸದಸ್ಯೆ ಇಂದಿರಾ ಬೇರಿಕೆ,ಶಾಲಾಭಿವೃದ್ದಿ ಸಮಿತಿ  ಉಪಾಧ್ಯಕ್ಷೆ ಜಯಶ್ರೀ ಬಾರಿಕೆ, ಶಿಕ್ಷಣ ಸಂಯೋಜಕಿ ಅಮೃತಕಲಾ,ಶಾಲಾಭಿವೃದ್ದಿ ಸಮಿತಿ ಮಾಜಿ ಅಧ್ಯಕ್ಷ ಶಿವರಾಮ ಗೌಡ ಮೆದು,ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ತಾರಾನಾಥ ಕಾಯರ್ಗ, ರೇಶ್ಮಾ ಮೊದಲಾದವರಿದ್ದರು.
ಶಿಕ್ಷಕರಾದ ಆಶಾಲತಾ, ಆಶಾ ಎಂ, ತುಳಸಿ, ಮೆಬಲ್ ರೋಡ್ರಿಗಸ್, ಶಾಲಾಭಿವೃದ್ದಿ ಸಮಿತಿ ಸದಸ್ಯರು, ವಿದ್ಯಾರ್ಥಿಗಳು, ಪೋಷಕರು ಪಾಲ್ಗೊಂಡಿದ್ದರು. ಶಾಲಾ ಪ್ರಭಾರ ಮುಖ್ಯಗುರು ಬಾಲಕೃಷ್ಣ ಕೆ. ಸ್ವಾಗತಿಸಿದರು, ಶಿಕ್ಷಕ ಛತ್ರ ಕುಮಾರ್ ವಂದಿಸಿದರು. ಶಿಕ್ಷಕಿ ಮಲ್ಲಿಕಾ ನಿರೂಪಿಸಿದರು.

LEAVE A REPLY

Please enter your comment!
Please enter your name here