ಬೆಟ್ಟಂಪಾಡಿ ಪತ್ತನಾಜೆ ಜಾತ್ರೆಗೆ ಗೊನೆಮುಹೂರ್ತ

0

 

ಬೆಟ್ಟಂಪಾಡಿ: ವರ್ಷದಲ್ಲಿ ಎರಡು ಬಾರಿ ಜಾತ್ರೋತ್ಸವ ನಡೆಯುವ ಸೀಮೆಯ ವಿಶೇಷ ದೇವಾಲಯವಾದ ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ಪತ್ತನಾಜೆ ಜಾತ್ರೋತ್ಸವಕ್ಕೆ ಗೊನೆಮುಹೂರ್ತ ಮೇ.17 ರಂದು ನಡೆಯಿತು. ದೇವಳದ ಅನುವಂಶಿಕ ಆಡಳಿತ‌ ಮೊಕ್ತೇಸರ ವಿನೋದ್ ಕುಮಾರ್ ಬಲ್ಲಾಳ್ ಉಪಸ್ಥಿತರಿದ್ದರು. ಅರ್ಚಕ ದಿವಾಕರ ಭಟ್ ಪ್ರಾರ್ಥಿಸಿದರು.

ವರ್ಷದ ಮೊದಲ‌ ಮತ್ತು ಕೊನೆಯ ಜಾತ್ರೋತ್ಸವವೂ ಬೆಟ್ಟಂಪಾಡಿ ದೇವಾಲಯದಲ್ಲಿ ನಡೆಯುವುದು ಇಲ್ಲಿನ ವಿಶೇಷತೆಯಾಗಿದೆ. ಈ ಬಾರಿ ಪತ್ತನಾಜೆ ಜಾತ್ರೆಯ ಶುಭದಿನದಂದು ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಕಲಾಸಂಘದ ವಾರ್ಷಿಕೋತ್ಸವ, ಸನ್ಮಾನ, ಯಕ್ಷಗಾನ ಕೂಟ, ಬಯಲಾಟ ನಡೆಯಲಿದೆ.

LEAVE A REPLY

Please enter your comment!
Please enter your name here