ನರಿಮೊಗರು ಪ್ರಾಥಮಿಕ ಶಾಲಾ ಪ್ರಾರಂಭೋತ್ಸವ

0

  • ಮಕ್ಕಳೇ ನಿಮ್ಮ ಬೇಡಿಕೆ ಈಡೇರಿಸಲು ನಾವು ಸದಾಸಿದ್ದ-ನಳಿನಿ ಲೋಕಪ್ಪ ಗೌಡ

 

ಪುತ್ತೂರು: ನರಿಮೊಗರು ಸ.ಉ.ಹಿ.ಪ್ರಾ.ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ ನಡೆಯಿತು. ಮುಂಡೂರು ಮೃತ್ಯುಂಜಯೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಅಧ್ಯಕ್ಷ ಲೋಕಪ್ಪ ಗೌಡ ಕರೆಮನೆ, ನಳಿನಿ ಲೋಕಪ್ಪ ಗೌಡ ಹಾಗೂ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಕೃಷ್ಣರಾಜ್ ಜೈನ್ ಅವರು ಮಕ್ಕಳನ್ನು ಆರತಿ ಬೆಳಗಿಸಿ ಸ್ವಾಗತಿಸಿದರು. ಬ್ಯಾಂಡ್, ವಾದ್ಯಗಳು ಶಾಲಾ ಪ್ರಾರಂಭೋತ್ಸವಕ್ಕೆ ಮೆರುಗು ನೀಡಿತು.

ನಳಿನಿ ಲೋಕಪ್ಪ ಗೌಡ ಮಾತನಾಡಿ ಮಕ್ಕಳೇ ನಿಮ್ಮ ಜೊತೆ ನಾವಿದ್ದೇವೆ, ಶಾಲಾ ಕಲಿಕೆಗೆ ಸಂಬಂಧಿಸಿದ ನಿಮ್ಮ ಯಾವುದೇ ಬೇಡಿಕೆಯನ್ನು ಈಡೇರಿಸಲು ನಾವು ಸದಾ ಸಿದ್ದರಿದ್ದೇವೆ ಎಂದು ಹೇಳಿದರು.

ಸ್ಥಳೀಯ ವಾರ್ಡ್ ಸದಸ್ಯ ಉಮೇಶ್, ಮುಖ್ಯ ಗುರು ಜುಸ್ತಿನಾ ಲಿಡ್ವಿನ್ ಡಿಸೋಜಾ, ಹಾಗೂ ಅಧ್ಯಾಪಕ ವೃಂದದವರು, ಎಸ್‌ಡಿಎಂಸಿ ಸದಸ್ಯರು, ಪೋಷಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here