ತಾಜಾ ತರಕಾರಿ, ಹಣ್ಣು ಹಂಪಲುಗಳು, ಸಾಂಪ್ರದಾಯಿಕ ತಿಂಡಿ ತಿನಸುಗಳ ಇನ್‌ಸ್ಟಾ ಬಾಸ್ಕೆಟ್ ಮಳಿಗೆ ಬೊಳುವಾರಿನಲ್ಲಿ ಶುಭಾರಂಭ

0

 

ಪುತ್ತೂರು:ಉತ್ತಮ ಗುಣಮಟ್ಟದ ತಾಜಾ ತರಕಾರಿ, ಹಣ್ಣು, ಹಂಪಲುಗಳು, ಸಾಂಪ್ರದಾಯಿಕ ತಿಂಡಿ ತಿನಸುಗಳು, ಚಾಟ್ಸ್ ಎಲ್ಲವನ್ನೂ ಒಂದೇ ಸೂರಿನಡಿಯಲ್ಲಿ ಸ್ಪರ್ಧಾತ್ಮಕ ದರದಲ್ಲಿ ನೀಡುವ ನಿಟ್ಟಿನಲ್ಲಿ ಬೊಳುವಾರು ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಯ ಬಳಿ ಇನ್‌ಸ್ಟಾ ಬಾಸ್ಕೆಟ್ ಮಳಿಗೆ ಮೇ ೧೬ರಂದು ಶುಭಾರಂಭಗೊಂಡಿತು.ರಾಜ್ಯ ಇಂಧನ ಮತ್ತು ಕನ್ನಡ ಸಂಸ್ಕೃತಿ ಖಾತೆಯ ಸಚಿವ ಮತ್ತು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ವಿ.ಸುನಿಲ್ ಕುಮಾರ್ ಅವರು ನೂತನ ಸಂಸ್ಥೆಯನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಸಚಿವರು, ಉದ್ಯಮದಲ್ಲಿ ಹೊಸತನ, ಪರಿಶ್ರಮ ಇಲ್ಲದಿದ್ದರೆ ಯಾವ ಉದ್ಯಮ ಕೂಡಾ ಯಶಸ್ವಿಯಾಗಲು ಸಾಧ್ಯವಿಲ್ಲ.ಈ ನಿಟ್ಟಿನಲ್ಲಿ ಹೊಸತನ, ಪರಿಶ್ರಮ ಇದ್ದಲ್ಲಿ ಉದ್ಯಮ ಯಶಸ್ವಿಯಾಗುತ್ತದೆ ಎಂದರು.ಪ್ರಸ್ತುತ ಶಿಕ್ಷಣ ಕ್ಷೇತ್ರದಲ್ಲಿ ನಾವಿಷ್ಟು ವೈದ್ಯರು, ಇಂಜಿನಿಯರ್‌ಗಳನ್ನು ಕೊಡುತ್ತಿದ್ದೇ ವೆ ಎಂದು ಪೋಷಕರಿಂದ ಹಾಗು ಶಿಕ್ಷಣ ಸಂಸ್ಥೆಗಳಿಂದ ಉತ್ತರ ಬರುತ್ತದೆ.ಆದರೆ ನನ್ನ ಮಗ, ಮಗಳು ಒಳ್ಳೆಯ ಉದ್ಯಮಿ ಆಗಬೇಕೆಂದು ಯಾರು ಕೂಡಾ ಅಪೇಕ್ಷೆ ಪಡುವುದಿಲ್ಲ.ಇಂತಹ ಸಂದರ್ಭದಲ್ಲಿ ಪುತ್ತೂರಿನ ಯುವಕರ ಪ್ರಯತ್ನ ಎಲ್ಲಾ ಪೋಷಕರಿಗೂ ಹೊಸತೊಂದು ಮಾದರಿಯಾಗಿದ್ದು ಈ ರೀತಿಯ ಯುವಕರ ತಂಡ ಇನ್ನು ಹೆಚ್ಚು ಹೆಚ್ಚು ನಿರ್ಮಾಣ ಆಗಬೇಕು.ಎಲ್ಲಾ ಕ್ಷೇತ್ರದಲ್ಲಿ ಯುವಕರು ಎಚ್ಚೆತ್ತುಕೊಳ್ಳಬೇಕೆಂದ ಸಚಿವರು,ತರಕಾರಿ ಮಾರಾಟ ಮಾಡುವುದು ಸಣ್ಣ ಉದ್ಯಮ ಅಲ್ಲ. ತರಕಾರಿ ಜೊತೆಗೆ ಚಾಟ್ಸ್‌ಗಳು ಸೇರಿಕೊಂಡು ಇವತ್ತು ಇದು ಆಕರ್ಷಣೆಯ ಕೇಂದ್ರವಾಗುತ್ತದೆ ಎಂದರು.

 


ದೂರದೃಷ್ಟಿ ಕಲ್ಪನೆ, ಸದುದ್ದೇಶ ಈಡೇರಲಿ: ಇಂತಹ ಇನ್‌ಸ್ಟಾ ಬಾಸ್ಕೆಟ್ ಕೇವಲ ಉದ್ಯಮ ಮಾತ್ರವಲ್ಲ ಯುವಕರಿಗೆ ಪ್ರೇರಣೆ ನೀಡಲಿದೆ.ಪುತ್ತೂರು ಬಿಸಿನೆಸ್ ವೆಂಚರ್‍ಸ್‌ನ ಯುವಕರ ತಂಡದ ಮಳಿಗೆ ಒಂದೇ ಮಳಿಗೆಗೆ ಸೀಮಿತವಾಗದೆ ಅವರ ಈ ಉದ್ಯಮ ಇನ್ನಷ್ಟು ಜಿಲ್ಲೆಗಳಿಗೆ, ಅಂತರ್ ಜಿಲ್ಲೆಗಳಿಗೆ ವಿಸ್ತರಿಸಲಿ ಎಂದು ಹೇಳಿದ ಸಚಿವರು, ಗ್ರಾಹಕರಿಗೆ ಅಗತ್ಯವಿರುವುದನ್ನು ತಲುಪಿಸುವ ಕಾರ್ಯ ದೊಡ್ಡ ಪ್ರಮಾಣದಲ್ಲಿ ಮಾಡಬೇಕು.ಗ್ರಾಹಕರ ಅಭಿರುಚಿಗಳನ್ನು ಅರ್ಥ ಮಾಡಿಕೊಳ್ಳಬೇಕು. ಜನ ಸಾಮಾನ್ಯರ ಬೇಡಿಕೆಗಳನ್ನು ಅರ್ಥ ಮಾಡಿಕೊಂಡು ಅದನ್ನು ತಲುಪಿಸುವ ಕೆಲಸ ಮಾಡಬೇಕು.ದೂರ ದೃಷ್ಟಿಯ ಕಲ್ಪನೆ, ಸದುzಶ ಇಟ್ಟುಕೊಂಡು ಯುವಕರ ತಂಡ ಮಾಡಿದ ಈ ಕಾರ್ಯ ಯಶಸ್ವಿಯಾಗಲಿ ಎಂದು ಹಾರೈಸಿದರು.

ಇನ್‌ಸ್ಟಾ ಬಾಸ್ಕೆಟ್ ಮೂಲಕ ಅರಸನಾಗಿ ಬದುಕುವ ಸಂದೇಶ: ಶಾಸಕ ಸಂಜೀವ ಮಠಂದೂರು ಅವರು ಮಾತನಾಡಿ ಕರ್ನಾಟಕ ಸರಕಾರ ಉದ್ಯಮಿ ಆಗು ಉದ್ಯೋಗ ನೀಡು ಎಂಬ ಸಂದೇಶ ನೀಡುತ್ತದೆ.ದೇಶದ ಪ್ರಧಾನಿಯವರು ಆತ್ಮನಿರ್ಭರ ಭಾರತ ಆಗಬೇಕೆಂಬ ಸಂದೇಶ ಕೊಡುತ್ತಾರೆ. ಪ್ರತಿಯೊಬ್ಬರು ಸ್ವಾಭಿಮಾನಿ, ಸ್ವಾವಲಂಬಿಗಳಾಗಿ ಎಂದು ಸರಕಾರ ಸಂದೇಶ ಕೊಡಬೇಕಾದರೆ ಹಿರಿಯರು ಹೇಳಿದ ಮಾತಿನಂತೆ ಆಳಾಗಿ ಬದುಕಬೇಡ.ಅರಸನಾಗಿ ಬದುಕು ಎಂಬಂತೆ ಇವತ್ತು ಅರಸನಾಗಿ ಹೇಗೆ ಬದುಕಬೇಕೆಂದು ಹೇಳಿ ಇನ್‌ಸ್ಟಾ ಬಾಸ್ಕೆಟ್ ಮೂಲಕ ಒಂದಷ್ಟು ಯುವಕರಿಗೆ ಸಂದೇಶ ಕೊಡುವ ಕೆಲಸ ಮಾಡಲಾಗಿದೆ ಎಂದರು. ಆಧುನಿಕ ಜಗತ್ತಿನಲ್ಲಿ ಶರವೇಗದಲ್ಲಿ ಜೀವನ ಮಾಡುತ್ತಿರುವ ಕಾಲಘಟ್ಟದಲ್ಲಿ ನಮ್ಮ ಬೇಕು ಬೇಡವನ್ನೂ ಶರವೇಗದಲ್ಲಿ ಪೂರೈಸುವ ಕೆಲಸವೇ ಇನ್‌ಸ್ಟಾ ಬಾಸ್ಕೆಟ್.ಆಧುನಿಕತೆಗೆ ವೈಜ್ಞಾನಿಕತೆಗೆ ಇವತ್ತಿನ ಕಾಲಸ್ಥಿತಿಗೆ ಪೂರಕವಾಗಿ ಬದಲಾವಣೆಯನ್ನು ಜನ ಬಯಸುತ್ತಾರೆ.ಅದಕ್ಕೆ ಪೂರಕವಾಗಿ ದೊಡ್ಡ ದೊಡ್ಡ ಮಾಲುಗಳು ನಮ್ಮನ್ನು ಆಕರ್ಷಣೆ ಮಾಡುವ ಸಂದರ್ಭದಲ್ಲಿ ಅದೇ ರೀತಿಯಲ್ಲಿ ನಮ್ಮ ಯುವಕರ ಹಳ್ಳಿಯ ಮಾಲುಗಳು ಕೂಡಾ ಇನ್‌ಸ್ಟಾ ಬಾಸ್ಕೆಟ್ ಮೂಲಕ ಜನರಿಗೆ ಅವಶ್ಯಕತೆ ಪೂರೈಸುವ ಕೆಲಸ ಮಾಡುತ್ತದೆ. ಟಾಟಾ ಬಿರ್ಲ, ಅಂಬಾನಿ, ಅದಾನಿಯನ್ನು ನೋಡಿzವೆ ಕೇಳಿzವೆ. ಆದರೆ ೫೦ ಮಂದಿ ಸೇರಿ ಅದಾನಿ ಅಂಬಾನಿಯಾಗಬೇಕೆಂದು ಪುತ್ತೂರಿನಿಂದ ಹೊರಟಿರುವುದು ಇತರರಿಗೆ ಮಾದರಿ.ಪುತ್ತೂರು ಜಿಲ್ಲೆಯಾಗಿ ಪರಿವರ್ತನೆಯಾಗುವ ಸಂದರ್ಭದಲ್ಲಿ ಜಿಲ್ಲಾ ಕೇಂದ್ರದಲ್ಲಿರುವ ಎಲ್ಲಾ ಸೌಲಭ್ಯಗಳೂ ನಮ್ಮ ಯುವಕರ ಮೂಲಕ ಸಿಗಲಿ ಎಂದು ಹಾರೈಸಿದರು.

ರೂ.೨೫ ಸಾವಿರದ ಸಣ್ಣ ಮೊತ್ತದಿಂದ ಪಾಲುದಾರಿಕೆಗೆ ಸೇರುವಿಕೆ: ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿರುವ ಪುತ್ತೂರು ಬ್ಯುಸಿನೆಸ್ ವೆಂಚರ್‍ಸ್‌ನ ಪಾಲುದಾರರಾದ ಕೇಶವಪ್ರಸಾದ್ ಮುಳಿಯ ಅವರು ಮಾತನಾಡಿ ಧರ್ಮದಷ್ಟೆ ಪ್ರಾಮುಖ್ಯತೆ ವ್ಯವಹಾರ ಪಡೆಯುತ್ತದೆ.ಕೊರೋನಾದ ಸಂದರ್ಭದಲ್ಲಿ ಹೊಸತನ ಮಾಡುವ ಯೋಚನೆ ಮೂಡಿತ್ತು.ಅದಕ್ಕೆ ಪೂರಕವಾಗಿ ನಮಗೆ ಅನೇಕರ ಮಾರ್ಗದರ್ಶನವೂ ಸಿಕ್ಕಿತ್ತು. ಮುಂದಿನ ದಿನ ಇನ್ನು ಹೆಚ್ಚಿನ ಉದ್ಯಮ ಈ ಮೂಲಕ ಮಾಡುವ ಯೋಚನೆ ಇದೆ.ಇದರ ಪಾಲುದಾರಿಕೆಗೆ ರೂ.೨೫ ಸಾವಿರದ ಸಣ್ಣ ಮೊತ್ತದಿಂದ ಸೇರಬಹುದು.ಮುಂದೆ ಇನ್ನೊಂದು ಉದ್ಯಮ ಮಾಡುವಲ್ಲಿ ಪುತ್ತೂರು ಬ್ಯುಸಿನೆಸ್ ವೆಂಚರ್‍ಸ್‌ನ ಗುರಿಯಾಗಿದೆ ಎಂದರು.

ಗೌರವ: ಇನ್‌ಸ್ಟಾ ಬಾಸ್ಕೆಟ್ ಮಳಿಗೆಗೆ ಸ್ಥಳ ಒದಗಿಸಿಕೊಟ್ಟ ಮುಳಿಯ ಫ್ಯಾಮಿಲಿಯ ಪರವಾಗಿ ಸುಲೋಚನಾ ಶ್ಯಾಮ ಭಟ್ ಅವರನ್ನು ಬಿಸಿನೆಸ್ ವೆಂಚರ್‍ಸ್ ಪಾಲುದಾರರು ಸನ್ಮಾನಿಸಿದರು. ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಮುರಳಿಕೃಷ್ಣ ಹಸಂತಡ್ಕ ಮತ್ತು ಮುರಳೀಧರ ಅವರು ಸುಲೋಚನಾ ಶ್ಯಾಮ ಭಟ್ ಅವರಿಗೆ ಹೂ ಗುಚ್ಚ ನೀಡಿದರು.

ಎಲ್ಲಿ ವ್ಯವಸ್ಥೆ ಬೇಕೋ ಅಲ್ಲಿಗೆ ನಾವು ಪ್ರೇರಣೆ ಕೊಡಲಿzವೆ: ಪಾಲುದಾರ ಕೃಷ್ಣಮೋಹನ್ ಕುಮಾರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ದೊಡ್ಡ ದೊಡ್ಡ ವ್ಯವಸ್ಥೆಗಳು ನಮ್ಮಲ್ಲಿ ಇದೆ.ಆದರೆ ಸಣ್ಣ ಮಟ್ಟದಲ್ಲಿ ಕಾಲೇಜಿನಿಂದ ಹೊರಬರುವಾಗ ಬಹಳಷ್ಟು ಹೊಸ ಕನಸುಗಳಿರುತ್ತವೆ.ದೊಡ್ಡ ಮಟ್ಟದ ಬಂಡವಾಳ ಹಾಕಲು ಅಸಾಧ್ಯವಾದರೂ ಬಹಳ ದೊಡ್ಡ ಐಡಿಯಾಗಳಿರುತ್ತವೆ.ಅದನ್ನು ಮುಂದುವರಿಸಲು ಬಂಡವಾಳದ ಅವಶ್ಯಕತೆ ಇರುತ್ತದೆ.ಈ ನಿಟ್ಟಿನಲ್ಲಿ ಪುತ್ತೂರಿನಲ್ಲಿ ಇಂತಹ ಸಣ್ಣ ಪ್ರಯತ್ನಕ್ಕೆ ಸುಳ್ಯದ ಪಾದರಕ್ಷೆಯ ಮಳಿಗೆ `ಪಾದಂ’, ಮುಳ್ಳೇರಿಯ ನಡೆಯುತ್ತಿರುವ ವ್ಯವಸ್ಥೆ, ಕೇರಳದಲ್ಲಿ ೧೫೦ಕ್ಕೂ ಮಿಕ್ಕಿ ಸೂಪರ್ ಮಾರುಕಟ್ಟೆ ಮಳಿಗೆಗಳು ಉತ್ತಮ ಸೇವೆ ನೀಡುತ್ತಿದೆ.ಜನರಿಗೆ ಒಳ್ಳೆಯ ಮಿತ ದರದಲ್ಲಿ ಸೇವೆ ಸಿಗುವ ಮತ್ತು ಆ ಊರಿನ ಯುವಕರು ಒಳ್ಳೆಯ ವ್ಯವಹಾರ ಮಾಡುವುದು ಇದರ ಮುಖ್ಯ ಉzಶ. ಪುತ್ತೂರಿನಲ್ಲಿ ಯುವಕರು ಮಾತ್ರವಲ್ಲ, ಹಿರಿಯರು ಸೇರಿಕೊಂಡು ಪುತ್ತೂರು ಬ್ಯುಸಿನೆಸ್ ವೆಂಚರ್‍ಸ್‌ನ ಪಾಲುದಾರರಾಗಿದ್ದಾರೆ. ಮುಂದೆ ಇದು ಎಲ್ಲಾ ಊರುಗಳಲ್ಲಿ ಪ್ರಾರಂಭ ಆಗಬೇಕೆಂಬ ಕನಸು ನಮ್ಮದು. ಎಲ್ಲಿ ಈ ವ್ಯವಸ್ಥೇ ಬೇಕೋ ಅಲ್ಲಿಗೆ ನಾವು ಬಂದು ಪ್ರೇರಣೆ ಕೊಡಲಿzವೆ ಎಂದು ಮಾಹಿತಿ ನೀಡಿದರು.

ಮೊದಲ ಪ್ರಾಜೆಕ್ಟ್ ಲೋಕಾರ್ಪಣೆ: ಪುತ್ತೂರು ಬ್ಯುಸಿನೆನ್ ವೆಂಚರ್‍ಸ್‌ನ ಪಾಲುದಾರ ಶಿವರಂಜನ್ ಅವರು ಸ್ವಾಗತಿಸಿ ಮಾತನಾಡಿ ಕಳೆದ ಒಂದು ವರ್ಷದಿಂದ ಯೋಜನೆ ಕುರಿತು ಚಿಂತನೆ ಮಾಡುತ್ತಿದ್ದೆವು.ಸಣ್ಣ ಮಟ್ಟದ ಬಂಡವಾಳ ಹಾಕಿ ಉತ್ತಮ ಸೇವೆ ನೀಡುವ ಉದ್ದೇಶದಿಂದ ಪುತ್ತೂರಿನಲ್ಲಿ ಮೊದಲ ಪ್ರಾಜೆಕ್ಟ್ ಲೋಕಾರ್ಪಣೆ ಆಗಿದೆ.ಜನರಿಗೆ ಉತ್ತಮ ಸೇವೆ ನೀಡುವ ಭಾವನೆ ಇಟ್ಟುಕೊಂಡಿದ್ದೇ ವೆ ಎಂದರು.

ವೇದಿಕೆಯಲ್ಲಿ ನಗರಸಭಾ ಅಧ್ಯಕ್ಷ ಕೆ.ಜೀವಂಧರ್ ಜೈನ್, ಸ್ಥಳೀಯ ಸದಸ್ಯ ಪಿ.ಜಿ.ಜಗನ್ನಿವಾಸ ರಾವ್, ಇನ್‌ಸ್ಟಾ ಬಾಸ್ಕೆಟ್ ಇಂಡಿಯಾ ಪ್ರೈ ಲಿನ ನಿರ್ದೇಶಕ ಯತೀಶ ಕೆ.ಎಸ್ ಉಪಸ್ಥಿತರಿದ್ದರು. ಮಳಿಗೆಯ ಪಾಲುದಾರರಾದ ಶಿವಕುಮಾರ್, ಕೃಷ್ಣನಾರಾಯಣ ಮುಳಿಯ, ಜಗದೀಶ್ ನಾಯಕ್, ಇಂದುಶೇಖರ್, ಆಶೋಕ್ ಕುಂಬ್ಳೆ, ಪದ್ಮನಾಭ ಶೆಟ್ಟಿ, ಪ್ರವೀಣ್ ಶಾಸ್ತ್ರಿ, ವಿಶ್ವಪ್ರಸಾದ್ ಸೇಡಿಯಾಪು, ಶಿವಕುಮಾರ್ ಹಳ್ಳಿಮನೆ ಅತಿಥಿಗಳನ್ನು ಗೌರವಿಸಿದರು.ಸರಿ ಹಿರಿಮನೆ, ಶೌರಿ ಹಿರಿಮನೆ, ಅಂಕಿತ ಪ್ರಾರ್ಥಿಸಿದರು. ಪಾಲುದಾರ ಶಿವರಂಜನ್ ಸ್ವಾಗತಿಸಿ, ರವಿನಾರಾಯಣ ವಂದಿಸಿದರು.ಕೃಷ್ಣಮೋಹನ್ ಕಾರ್ಯಕ್ರಮ ನಿರೂಪಿಸಿದರು.ಸಹಾಯಕ ಕಮೀಷನರ್ ಗಿರೀಶ್ ನಂದನ್, ತಹಶೀಲ್ದಾರ್ ರಮೇಶ್ ಬಾಬು, ಪೌರಾಯುಕ್ತ ಮಧು ಎಸ್.ಮನೋಹರ್, ನಗರಸಭೆ ಉಪಾಧ್ಯಕ್ಷೆ ವಿದ್ಯಾ ಆರ್ ಗೌರಿ, ನಗರಸಭಾ ಸದಸ್ಯರಾದ ಸಂತೋಷ್ ಕುಮಾರ್, ದೀಕ್ಷಾ ಪೈ, ಪ್ರೇಮಲತಾ ನಂದಿಲ, ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಹರಿಪ್ರಸಾದ್, ವಿವೇಕಾನಂದ ವಿದ್ಯಾ ಸಂಸ್ಥೆಯ ಶಿವಪ್ರಸಾದ್, ಹಿರಿಯರಾದ ಅಚ್ಚುತ ನಾಯಕ್, ಸಂತೋಷ್ ಬೋನಂತಾಯ, ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಶ್ರೀಪತಿ ರಾವ್, ಡಾ. ಸುಧಾ ಎಸ್ ರಾವ್, ತಾ.ಪಂ ಮಾಜಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಕ್ಯಾಂಪ್ಕೋ ನಿರ್ದೇಶಕ ಸತ್ಯನಾರಾಯಣಪ್ರಸಾದ್, ಪುತ್ತೂರು ನೂತನ ಮಳಿಗೆಗೆ ಪ್ರೇರಣೆ ನೀಡಿದ ಸುಳ್ಯದ ಪಾದಂ ತಂಡ, ಮುಳ್ಳೇರಿಯ ಸೂಪರ್ ಮಾರ್ಕೆಟ್ ಮಳಿಗೆ ತಂಡ, ಬಾಯಾರು, ಉಪ್ಪಳದ ತಂಡ ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು.

ಹೊಸತನ, ಪರಿಶ್ರಮ ಇದ್ದಲ್ಲಿ ಉದ್ಯಮ ಯಶಸ್ವಿಯಾಗುತ್ತದೆ – ಸಚಿವ ಸುನಿಲ್ ಕುಮಾರ್

ಇನ್‌ಸ್ಟಾ ಬಾಸ್ಕೆಟ್ ಮೂಲಕ ಅರಸನಾಗಿ ಬದುಕುವ ಸಂದೇಶ – ಸಂಜೀವ ಮಠಂದೂರು

 

ಎಲ್ಲಿ ವ್ಯವಸ್ಥೆ ಬೇಕೋ ಅಲ್ಲಿಗೆ ನಾವು ಪ್ರೇರಣೆ ಕೊಡಲಿದ್ದೇವೆ- ಕೃಷ್ಣಮೋಹನ್

LEAVE A REPLY

Please enter your comment!
Please enter your name here