ಸವಣೂರು ಗ್ರಾ.ಪಂ. ತಹಶೀಲ್ದಾರ್ ಗ್ರಾಮವಾಸ್ತವ್ಯದ  ಪೂರ್ವಭಾವಿ ಸಮಾಲೋಚನಾ ಸಭೆ

0

  • ಮೇ.21 ರಂದು ವಿನಾಯಕ ಸಭಾಭವನದಲ್ಲಿ ಗ್ರಾಮ ವಾಸ್ತವ್ಯ
ಸವಣೂರು :ಸವಣೂರಿನಲ್ಲಿ ಮೇ.21ರಂದು ನಡೆಯಲಿರುವ  ತಹಶೀಲ್ದಾರ್ ಗ್ರಾಮ ವಾಸ್ತವ್ಯದ ಪೂರ್ವಭಾವಿ ಸಮಾಲೋಚನ ಸಭೆಯು ಸವಣೂರು ಗ್ರಾ.ಪಂ.ನ ಕುಮಾರಧಾರ ಸಭಾಂಗಣದಲ್ಲಿ ಮೇ.17ರಂದು ನಡೆಯಿತು.
ಕಡಬ ತಹಶೀಲ್ದಾರ್ ಅನಂತ ಶಂಕರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ಚರ್ಚಿಸಲಾಯಿತು. ಕಾರ್ಯಕ್ರಮವನ್ನು ಸವಣೂರಿನ ವಿನಾಯಕ ಸಭಾಭವನದಲ್ಲಿ ನಡೆಸುವುದೆಂದು ನಿರ್ಣಯಿಸಲಾಯಿತು. 
ಸಾರ್ವಜನಿಕ ಅಹವಾಲನ್ನು ಗ್ರಾಮ ವಾಸ್ತವ್ಯಕ್ಕೆ ಮುಂಚಿತವಾಗಿ ಗ್ರಾ.ಪಂ.ಗೆ ಸಲ್ಲಿಸಿದರೆ ಕಾರ್ಯಕ್ರಮದಲ್ಲಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು ಎಂದು ತಹಶೀಲ್ದಾರ್ ಅನಂತ ಶಂಕರ ಹೇಳಿದರು. ಸವಣೂರು ಗ್ರಾ.ಪಂ.ಅಧ್ಯಕ್ಷೆ ರಾಜೀವಿ ವಿ.ಶೆಟ್ಟಿ, ಉಪಾಧ್ಯಕ್ಷ ಶೀನಪ್ಪ ಶೆಟ್ಟಿ‌ ನೆಕ್ರಾಜೆ,ಬೆಳ್ಳಾರೆ ಠಾಣೆಯ ಕ್ರೈಂ ಎಸೈ ಆನಂದ್ ಎಂ.ವೇದಿಕೆಯಲ್ಲಿದ್ದರು
ಉಪತಹಶೀಲ್ದಾರ್  ಗೋಪಾಲ ಕೆ.,ಕಂದಾಯ ನಿರೀಕ್ಷಕ ಅವಿನ್ ರಂಗತ್ತಮಲೆ , ಗ್ರಾ.ಪಂ.ಸದಸ್ಯರಾದ ಸತೀಶ್ ಅಂಗಡಿಮೂಲೆ,ಚೆನ್ನು,ಎಂ.ಎ.ರಫೀಕ್,ಬಾಬು ಎನ್.ಯಶೋಧಾ,ಚಂದ್ರಾವತಿ ಸುಣ್ಣಾಜೆ,ಸವಣೂರು ಉ.ಹಿ.ಪ್ರಾ.ಶಾಲಾ ಪ್ರಭಾರ ಮುಖ್ಯಗುರು ಬಾಲಕೃಷ್ಣ ಕೆ.,ಕೃಷಿ ಇಲಾಖೆಯ ತಿಮ್ಮಪ್ಪ ಗೌಡ,ಮೆಸ್ಕಾಂ ಜೆಇ ನಾಗರಾಜ್ ಕೆ.,ಪಶು ಸಂಗೋಪನ ಇಲಾಖೆಯ ರಮೇಶ್ ,ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ತಾರಾನಾಥ ಕಾಯರ್ಗ,ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್ ಪಿ.,ಬೀಟ್ ಪೊಲೀಸ್ ಕೃಷ್ಣಪ್ಪ ಮೊದಲಾದವರಿದ್ದರು. ಗ್ರಾಮಕರಣಿಕ ಚಂದ್ರನಾಯ್ಕ ಸ್ವಾಗತಿಸಿ,ಪಂಚಾಯತ್ ಅಭಿವೃದ್ಧಿ ಅಧಿಕಾರಿ ಎ.ಮನ್ಮಥ ವಂದಿಸಿದರು.

LEAVE A REPLY

Please enter your comment!
Please enter your name here