ಮೇ.20:ಕುಂಬ್ರ ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ 1.57.98 ಕೋಟಿ ರೂ ವೆಚ್ಚದಲ್ಲಿ ವಿವಿಧ ಕಾಮಗಾರಿ ಶಿಕ್ಷಣ ಸಚಿವ ಬಿ ಸಿ ನಾಗೇಶ್  ಉದ್ಘಾಟನೆ

0

ಪುತ್ತೂರು: ಕುಂಬ್ರ ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ ಪುತ್ತೂರು ಶಾಸಕರಾದ ಸಂಜೀವ ಮಠಂದೂರು ಅವರ ಮುತುವರ್ಜಿಯಿಂದ ವಿವಿಧ ಇಲಾಖೆಗಳಿಂದ ಸುಮಾರು 1,57.98 ಕೋಟಿ ರೂ ಅನುದಾನ ಬಿಡುಗಡೆಯಾಗಿದೆ. ಶಾಲಾ ಮೂಲಬೂತ ಅವಶ್ಯಕತೆಗಳಿಗೆ ತಕ್ಕಂತೆ ವಿವಿಧ ಕಾಮಗಾರಿಗಳನ್ನು ನಡೆಸಲಾಗಿದ್ದು ಇದರ ಉದ್ಘಾಟನಾ ಕಾರ್ಯಕ್ರಮ ಮೇ. 20 ರಂದು ಸಂಜೆ ನಡೆಯಲಿದೆ ಎಂದು ಕೆಪಿಎಸ್ ಸ್ಕೂಲ್ ನಿಕಟಪೂರ್ವ ಕಾರ್ಯಾಧ್ಯಕ್ಷರಾದ ನಿತೀಶ್‌ಕುಮಾರ್ ಶಾಂತಿವನ ತಿಳಿಸಿದ್ದಾರೆ.

 

144.98ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣಗೊಂಡ ಶಾಲಾ ತರಗತಿ ಕೊಠಡಿ ಹಾಗೂ 113 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣಗೊಂಡ ಶಾಲಾ ಪ್ರಯೋಗಾಲಯ ಕಟ್ಟಡ ಏಕಕಾಲದಲ್ಲಿ ಉದ್ಘಾಟನೆ ನಡೆಯಲಿದೆ. ಶಿಕ್ಷಣ ಸಸಿವರಾದ ಬಿ ಸಿ ನಾಗೇಶ್‌ರವರು ನೂತನ ಕಟ್ಟಡದ ಉದ್ಘಾಟನೆ ನೆರವೇರಿಸಲಿದ್ದಾರೆ. ಶಾಸಕ ಸಂಜೀವ ಮಠಂದೂರುರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಹಾಗೂ ದ. ಕ. ಜಿಲ್ಲಾ ಉಸ್ತುವಾರಿ ಸಚಿವರಾದ ವಿ ಸುನಿಲ್ ಕುಮಾರ್, ಮೀನುಗಾರಿಕೆ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಎಸ್ ಅಂಗಾರ, ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಇಲಾಖೆಯ ಸಚಿವ ಕೋಟ ಶ್ರೀನಿವಾಸ್ ಪೂಜಾರಿ, ದ. ಕ. ಲೋಕಸಭಾ ಕ್ಷೇತ್ರ ಸಂಸದ ನಳಿನ್ ಕುಮಾರ್ ಕಟೀಲ್, ವಿಧಾನ ಪರಿಷತ್ ಶಾಸಕರುಗಳಾದ ಪ್ರತಾಪಸಿಂಹ ನಾಯಕ್, ಬಿ. ಎಂ. ಫಾರೂಕ್, ಕೆ. ಹರೀಶ್ ಕುಮಾರ್, ಆಯನೂರು ಮಂಜುನಾಥ್, ಎಸ್. ಎಲ್. ಭೋಜೇಗೌಡ,ಮಂಜುನಾಥ ಭಂಡಾರಿ, ಒಳಮೊಗ್ರು ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು, ಪ.ಪೂ.ಶಿ. ಇಲಾಖೆ ದ.ಕ. ಮಂಗಳೂರು ಉಪನಿರ್ದೇಶಕರು ಜಯಣ್ಣ ಸಿ. ಡಿ., ಸುಧಾಕರ ಕೆ. ಉಪನಿರ್ದೇಶಕರು (ಆಡಳಿತ) ಸಾರ್ವಜನಿಕ ಶಿಕ್ಷಣ ಇಲಾಖೆ, ದ. ಕ. ,ರಾಜಲಕ್ಷ್ಮೀ, ಉಪನಿರ್ದೇಶಕರು (ಅಭಿವೃದ್ಧಿ) ಡಯೆಟ್, ಮಂಗಳೂರು ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಲೋಕೇಶ್ ಸಿರವರು ಭಾಗವಹಿಸಲಿದ್ದಾರೆ.

ಬಹುವರ್ಷಗಳ ಬೇಡಿಕೆ: ಕುಂಬ್ರ ಕೆಪಿಎಸ್ ಸ್ಕೂಲ್ ಆಗಿ ಪರಿವರ್ತನೆಯಾದ ಬಳಿಕ ತರಗತಿ ಕೊಠಡಿಗಳ ಕೊರತೆ ಉಂಟಾಗಿತ್ತು. ಕಾಲೇಜಿಗೆ ಸುಸಜ್ಜಿತ ವಿಜ್ಞಾನ ಪ್ರಯೋಗಾಲಯ ಕೊಠಡಿಯ ಕೊರತೆಯೂ ಇತ್ತು. ಶಾಲಾಭಿವೃದ್ದಿ ಸಮಿತಿಗೆ ಶಾಸಕ ಸಂಜೀವ ಮಠಂದೂರು ರವರೇ ಅಧ್ಯಕ್ಷರಾಗಿದ್ದು ಶಾಲಾ ಬೇಡಿಕೆಗಳ ಈಡೇರಿಕೆಗೆ ವಿವಿಧ ಇಲಾಖೆಯಿಂದ ಅನುದಾನವನ್ನು ಒದಗಿಸಿದ್ದರು. ಪ್ರಸ್ತುತ ಕೆಪಿಎಸ್ ಸ್ಕೂಲ್‌ಗೆ ತುರ್ತಾಗಿ ಬೇಕಾಗಿರುವ ಎಲ್ಲಾ ವ್ಯವಸ್ಥೆಗಳು ಪೂರ್ಣಗೊಂಡಿದೆ. ಸುಸಜ್ಜಿತ ಶೌಚಾಲಯದ ನಿರ್ಮಾಣ ಕಾರ್ಯವೂ ಪೂರ್ಣಗೊಂಡಿದೆ. ಕೆಪಿಎಸ್ ಸ್ಕೂಲ್ ಆಗಿ ಬದಲಾದ ಬಳಿಕ ವಿದ್ಯಾರ್ಥಿಗಳ ಸಂಖ್ಯೆಯೂ ಅಧಿಕವಾಗಿದ್ದು ಶಾಲಾ ಕ್ರೀಡಾಂಗಣದ ಕಾಮಗಾರಿಯೂ ಭರದಿಂದ ಸಾಗುತ್ತಿದೆ. ಸಕಲ ವ್ಯವಸ್ಥೆಗಳನ್ನೊಳಗೊಂಡ ಕ್ರೀಡಾಂಗಣ ನಿರ್ಮಾಣಕ್ಕೆ ಅನುದಾನ ನೀಡುವಂತೆ ಈಗಾಗಲೇ ಶಾಸಕರ ಮೂಲಕ ಕ್ರೀಡಾ ಸಚಿವರಿಗೆ ಮನವಿಯನ್ನು ಸಲ್ಲಿಸಿದ್ದಾರೆ. ಕ್ರೀಡಾಂಗಣದ ಕಾಮಗಾರಿ ಪೂರ್ಣಗೊಂಡ ಬಳಿಕ ಗ್ರಾಮೀಣ ಭಾಗದ ದೊಡ್ಡ ಕ್ರೀಡಾಂಗಣವಾಗಿ ರೂಪುಗೊಳ್ಳಲಿದೆ ಎಂದು ನಿತೀಶ್‌ಕುಮಾರ್ ಶಾಂತಿವನ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here