ನೆಲ್ಯಾಡಿ ಬೆಥನಿ ಐಟಿಐ 26ನೇ ವಾರ್ಷಿಕೋತ್ಸವ

0

ನೆಲ್ಯಾಡಿ: ರಾಷ್ಟ್ರ ನಿರ್ಮಾಣದಲ್ಲಿ ಯುವಶಕ್ತಿಯ ಪಾತ್ರ ಅತಿ ಮುಖ್ಯ, ಅದರಲ್ಲೂ ಕೈಗಾರಿಕಾ ಬೆಳವಣಿಗೆಯಲ್ಲಿ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ಕಲಿತ ವಿದ್ಯಾರ್ಥಿಗಳ ಸೇವೆ ಅಮೂಲ್ಯವಾದದ್ದು, ಸಾವಿರಾರು ಮಂದಿಗೆ ಉದ್ಯೋಗ ಕೊಡಬಲ್ಲ ಸಂಸ್ಥೆ ಐಟಿಐ, ಜೀವನದಲ್ಲಿ ಸ್ವರಕ್ಷಣೆ ಹೇಗೆ ಮುಖ್ಯವೋ ಅದೇ ಸಂದರ್ಭದಲ್ಲಿ ಕೈಗಾರಿಕೆಗಳಲ್ಲಿಯೂ ವೈಯಕ್ತಿಕ ಜಾಗ್ರತೆ ಕೂಡ ಅತಿಮುಖ್ಯವಾಗಿ ಪಾಲನೆಯದಾಗ ಜೇವನವು ಪಾವನವಾಗುವುದು ಎಂದು ಮೆಸ್ಕಾಂ ಕಡಬದ ಸಹಾಯಕ ಇಂಜಿನಿಯರ್ ಆಗಿರುವ ಸತ್ಯನಾರಾಯಣ ಸಿ.ಕೆ. ಹೇಳಿದರು.


ಅವರು ನೆಲ್ಯಾಡಿ ಬೆಥನಿ ಐಟಿಐಯಲ್ಲಿ ನಡೆದ ಸಂಸ್ಥೆಯ 26ನೇ ವಾರ್ಷಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ನಿರ್ದೇಶಕರಾದ ರೆ|ಫಾ| ಸತ್ಯನ್ ತೋಮಸ್ ಒಐಸಿ ವಹಿಸಿದ್ದರು. ವೇದಿಕೆಯಲ್ಲಿ ಜಿ.ಪಂ.ಮಾಜಿ ಸದಸ್ಯ ಸರ್ವೋತ್ತಮ ಗೌಡ, ತಾ.ಪಂ.ಮಾಜಿ ಸದಸ್ಯೆ ಉಷಾ ಅಂಚನ್, ನೆಲ್ಯಾಡಿ ಗ್ರಾ.ಪಂ.ಸದಸ್ಯ ಜಯಾನಂದ ಬಟ್ರಿಯಾಲ್, ನೋಟರಿ ಹಾಗೂ ವಕೀಲ ಇಸ್ಮಾಯಿಲ್ ಎನ್, ಜ್ಞಾನೋದಯ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ರೆ|ಫಾ| ತೋಮಸ್ ಬಿಜಿಲಿ, ಸಂಸ್ಥೆಯ ಪ್ರಾಚಾರ್ಯ ಸಜಿ ಕೆ ತೋಮಸ್, ಸಂಸ್ಥೆಯ ತರಬೇತಿ ಅಧಿಕಾರಿ ಜೋನ್ ಪಿ.ಎಸ್., ಶುಭ ಹಾರೈಸಿದರು. ಸಂಸ್ಥೆಯಲ್ಲಿ ೨೫ ವರ್ಷ ಸೇವೆ ಪೂರೈಸಿದ ಕಿರಿಯ ತರಬೇತಿ ಅಧಿಕಾರಿಗಳಾದ ಸುಬ್ರಾಯ ನಾಯಕ್, ಅನಂತಕೃಷ್ಣ, ವಿನ್ಸೆಂಟ್ ಸಿ.ಎಸ್., ತೋಮಸ್ ಪಿ.ಜೆ.,ಯವರನ್ನು ಸನ್ಮಾನಿಸಲಾಯಿತು.

ಕಿರಿಯ ತರಬೇತಿ ಅಧಿಕಾರಿ ಸುಬ್ರಾಯ ನಾಯಕ್ ಸ್ವಾಗತಿಸಿ, ವಿದ್ಯಾರ್ಥಿ ಸಂಘದ ನಾಯಕ ದಿಶಾಂತ್ ವಂದಿಸಿದರು. ಸಂಸ್ಥೆಯ ಪ್ರಾಚಾರ್ಯ ಸಜಿ ಕೆ ತೋಮಸ್ ವಾರ್ಷಿಕ ವರದಿ ಮಂಡಿಸಿದರು. ವಿದ್ಯಾರ್ಥಿನಿಯರಾದ ರಮ್ಯ ಮತ್ತು ಬಳಗದವರು ಪ್ರಾರ್ಥಿಸಿದರು. ಕಿರಿಯ ತರಬೇತಿ ಅಧಿಕಾರಿಗಳಾದ ಜ್ಯೋತಿಲಕ್ಷ್ಮಿ ಕೆ. ಹಾಗೂ ಹರಿಪ್ರಸಾದ್ ರೈ ಬಿ. ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಐಟಿಐ ವಿದ್ಯಾರ್ಥಿಗಳಿಂದ ವಿವಿಧ ಮನರಂಜನಾ ಕಾರ್ಯಕ್ರಮ ನಡೆಯಿತು.

LEAVE A REPLY

Please enter your comment!
Please enter your name here