ಕೂಡುರಸ್ತೆ: ಯುವಕರಿಂದ ರಸ್ತೆ ದುರಸ್ತಿ ಶ್ರಮದಾನ

0

 

ಪುತ್ತೂರು: ಕೂಡುರಸ್ತೆ ಪರಿಸರದ ಯುವಕರು ಸೇರಿಕೊಂಡು ಮೇ.22ರಂದು ಸ್ಥಳೀಯವಾಗಿ ರಸ್ತೆ ಬದಿಗಳಲ್ಲಿ ಶ್ರಮದಾನ ನಡೆಸಿದರು. ಕೂಡುರಸ್ತೆ ತಿರುವಿನಲ್ಲಿ ರಸ್ತೆ ಡಾಮರು ಅಲ್ಪ ಕುಸಿತಗೊಂಡು ಸಂಚಾರಕ್ಕೆ ತೊಂದರೆಯುಂಟಾಗಿತ್ತಲ್ಲದೇ ಇತ್ತೀಚೆಗೆ ಇದೇ ಪರಿಸರದಲ್ಲಿ ವಾಹನ ಅಪಘಾತವೂ ಸಂಭವಿಸಿತ್ತು. ಈ ನಿಟ್ಟಿನಲ್ಲಿ ಸ್ಥಳೀಯ ಯುವಕರು ಸೇರಿಕೊಂಡು ದುರಸ್ತಿ ಶ್ರಮದಾನ ನಡೆಸಿದರು. ಅಲ್ಲದೇ ಸ್ಥಳೀಯವಾಗಿ ಮಳೆ ನೀರು ಸರಾಗವಾಗಿ ಹರಿದು ಹೋಗಲು ಚರಂಡಿ ದುರಸ್ತಿಯನ್ನೂ ಮಾಡಿದ್ದಾರೆ. ಬಾನುವಾರದ ರಜಾ ದಿನವನ್ನು ಯುವಕರು ಸೇರಿಕೊಂಡು ಸಾಮಾಜಿಕ ಕಾರ್ಯಕ್ಕೆ ವಿನಿಯೋಗಿಸಿರುವುದು ಸ್ಥಳೀಯವಾಗಿ ಮೆಚ್ಚುಗೆಗೂ ಪಾತ್ರವಾಗಿದೆ. ಶ್ರಮದಾನದಲ್ಲಿ ಹಂಝ ನೆಕ್ಕಿಲು, ರಝಾಕ್ ಕೂಡುರಸ್ತೆ, ಹಾರಿಸ್ ಕೂಡುರಸ್ತೆ, ಮಜೀದ್ ಬಾಳಾಯ, ಕರೀಂ ಅಜ್ಜಿಕಟ್ಟೆ, ಬಶೀರ್ ಕೂಡುರಸ್ತೆ, ಇಸ್ಮಾಯಿಲ್ ಆರ್.ಎಚ್, ಅಝರ್ ಕೂಡುರಸ್ತೆ ಬಾಗವಹಿಸಿದ್ದರು.

LEAVE A REPLY

Please enter your comment!
Please enter your name here