ನವೋದಯ ಪ್ರೌಢ ಶಾಲೆ ಬೆಟ್ಟಂಪಾಡಿಯ 5 ವಿದ್ಯಾರ್ಥಿಗಳು ಎನ್.ಎಮ್.ಎಮ್.ಎಸ್ ಪರೀಕ್ಷೆಯಲ್ಲಿ ವಿಶೇಷ ಸಾಧನೆ

0

 

 

ಬೆಟ್ಟಂಪಾಡಿ: ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ದಿ ಇಲಾಖೆ(ಎಂ.ಹೆಚ್.ಆರ್.ಡಿ) ನವದೆಹಲಿ ಇದರ ಆಶ್ರಯದಲ್ಲಿ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ಬೆಂಗಳೂರು ಇವರು 2021-22ನೇ ಸಾಲಿನಲ್ಲಿ 8ನೇ ತರಗತಿಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಇಲಾಖಾ ವತಿಯಿಂದ ನಡೆಸಿದ ಎನ್.ಎಮ್.ಎಮ್.ಎಸ್ ಪರೀಕ್ಷೆಗೆ ಬೆಟ್ಟಂಪಾಡಿಯ ನವೋದಯ ಪ್ರೌಢ ಶಾಲೆಯ 28 ವಿದ್ಯಾರ್ಥಿಗಳು ಹಾಜರಾಗಿದ್ದು 10 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಅವರಲ್ಲಿ 5 ವಿದ್ಯಾರ್ಥಿಗಳು ಉತ್ತಮ ಅಂಕ ಪಡೆದು ವರ್ಷಕ್ಕೆ ರೂ 12,000/-ದಂತೆ (4 ವರ್ಷ ಒಟ್ಟು 48 ಸಾವಿರ ರೂ)ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾಗಿರುತ್ತಾರೆ. ನಾಕಪ್ಪಾಡಿ ಮಂಜಪ್ಪ ಮತ್ತು ಪವಿತ್ರ.ಕೆ ದಂಪತಿ ಪುತ್ರ ಶ್ರವಣ್ 112 ಅಂಕಗಳೊಂದಿಗೆ ತಾಲೂಕಿನಲ್ಲಿ 6ನೇ ಸ್ಥಾನ ಪಡೆದಿರುತ್ತಾನೆ. ಚೂರಿಪದವು ಅಬ್ದುಲ್ಲ.ಸಿ.ಹೆಚ್. ಮತ್ತು ಜೊಹರಾ ದಂಪತಿಗಳ ಪುತ್ರಿ ಆಯಿಷತ್ ಶಹ್‌ಲ,ಕೋಡಿ ನಾಗೇಶ್ ನಾಯ್ಕ ಮತ್ತು ಜಲಜಾಕ್ಷಿ ಇವರ ಪುತ್ರಿ ಯಶಸ್ವಿ, ಕೋನಡ್ಕ ವಸಂತ ಮತ್ತು ಕುಸುಮ ಇವರ ಪುತ್ರ ತೇಜಸ್ ಮತ್ತು ನಿಡ್ಪಳ್ಳಿ ಡೊಂಬಟೆಬರಿ ಚನಿಯಪ್ಪ ಮತ್ತು ಪ್ರೇಮ ಇವರ ಪುತ್ರಿ ಶಿಲ್ಪ ಇವರು ಉತ್ತಮ ಸಾಧನೆಯ ಮೂಲಕ ವಿದ್ಯಾರ್ಥಿ ವೇತನಕ್ಕೆ ಆಯ್ಕೆಗೊಂಡ ವಿದ್ಯಾರ್ಥಿಗಳು. ಸತತ 6 ವರ್ಷಗಳಿಂದ ಗ್ರಾಮೀಣ ಭಾಗದ ನಮ್ಮ ಶಾಲೆಯ ವಿದ್ಯಾರ್ಥಿಗಳು ಎನ್.ಎಮ್.ಎಮ್.ಎಸ್ ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾಗುತಿದ್ದಾರೆ. ಇವರಿಗೆ ಶಾಲಾ ಶಿಕ್ಷಕಿಯರಾದ ಪ್ರವೀಣ ಕುಮಾರಿ, ಸುಮಂಗಲಾ ಕೆ, ಭುವನೇಶ್ವರಿ.ಎಂ ಮತ್ತು ಶೋಭಾ.ಬಿ ಇವರು ತರಬೇತಿ ನೀಡಿರುತ್ತಾರೆ ಎಂದು ಮುಖ್ಯಗುರು ಪುಷ್ಪಾವತಿ.ಎಸ್ ತಿಳಿಸಿರುತ್ತಾರೆ.

 

 

LEAVE A REPLY

Please enter your comment!
Please enter your name here