ಕಲ್ಲಾರೆಯಲ್ಲಿ ಬಿಜೆಪಿ ಶಕ್ತಿಕೇಂದ್ರದ ಸಭೆ

0

ಪುತ್ತೂರು: ಪುತ್ತೂರು ನಗರಸಭೆ ವ್ಯಾಪ್ತಿಯ 130  ಮತ್ತು 139 ಬೂತ್‌ಗಳ ಬಿಜೆಪಿ ಶಕ್ತಿಕೇಂದ್ರದ ಸಭೆಯು ಮೇ 27ರಂದು ಶಕ್ತಿ ಕೇಂದ್ರದ ಪ್ರಮುಖ್ ಮನೋಹರ್ ಕಲ್ಲಾರೆ ಅಧ್ಯಕ್ಷತೆಯಲ್ಲಿ ಕಲ್ಲಾರೆ ಶ್ರೀ ರಾಘವೇಂದ್ರ ಸ್ವಾಮಿ ಮಠದ ಸಭಾಭವನದಲ್ಲಿ ನಡೆಯಿತು.

ಬಿ.ಜೆ.ಪಿ ನಗರ ಮಂಡಲದ ಅಧ್ಯಕ್ಷ ಪಿ.ಜಿ. ಜಗನ್ನಿವಾಸ್’ರಾವರು ಮೋದೀಜೀ ನೇತೃತ್ವದ ಎಂಟು ವರುಷಗಳ ಕೇಂದ್ರ ಸರಕಾರದ ಸಾಧನೆಗಳು ಹಾಗೂ ಪಕ್ಷ ಹಮ್ಮಿಕೊಂಡಿರುವ ಹದಿನೇಳು ಕಾರ್ಯಕ್ರಮಗಳ ಸಮಗ್ರ ಮಾಹಿತಿ ನೀಡಿದರು. ಸಭೆಯನ್ನು ನಡೆಸಿಕೊಟ್ಟ ಮಹಾಶಕ್ತಿಕೇಂದ್ರ ಪ್ರಮುಖ್  ವಿದ್ಯಾಗೌರಿ “ಬೂತ್ ಮಟ್ಟದಲ್ಲಿ ಪಕ್ಷ ಸಂಘಟನೆ”ಯ ಬಗ್ಗೆ ಮಾತಾಡಿದರು. ಬೂತ್-131’ರ ಅಧ್ಯಕ್ಷ ಮುರಳೀಧರ್, ಕಾರ್ಯದರ್ಶಿ ಅರುಣ್ ಕುಮಾರ್, ಬೂತ್ 132ರ ಅಧ್ಯಕ್ಷ ಉಮೇಶ್, ಕಾರ್ಯದರ್ಶಿ ರಾಮ್, ಹಿರಿಯ ಪ್ರಮುಖ್ ಗಣಪತಿ ನಾಯಕ್, ಹಿರಿಯ ನಾಗರಿಕ ಪ್ರಕೋಷ್ಠದ ಸಹಪ್ರಭಾರಿ ಸುರೇಶ್ ಗೌಡ ಹಾಗೂ ಬೂತ್ ಪ್ರಮುಖರು ಉಪಸ್ಥಿತರಿದ್ದರು. ಶಕ್ತಿಕೇಂದ್ರ ಪ್ರಮುಖ್, ನಗರಸಭಾ ಸದಸ್ಯರೂ ಆದ ಮನೋಹರ್ ಕಲ್ಲಾರೆ ಸ್ವಾಗತಿಸಿ, ವಂದಿಸಿದರು.

LEAVE A REPLY

Please enter your comment!
Please enter your name here